HomePage_Banner
HomePage_Banner
HomePage_Banner
HomePage_Banner

ಅಗತ್ಯ ವಸ್ತುಗಳ ಸರಬರಾಜಿನ ವಾಹನಗಳಿಗೆ ಅಡ್ಡಿಯಿಂದ ದಾಸ್ತಾನು ಕೊರತೆ: ವರ್ತಕರ ಅಳಲು – ಸಮಸ್ಯೆ ಆಗದಂತೆ ಪಾಸ್ ಸೌಲಭ್ಯದ ಭರವಸೆ ನೀಡಿದ ಎಸ್ಪಿ, ಜಿ.ಪಂ ಸಿಇಒ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅಗತ್ಯ ವಸ್ತುಗಳ ಸರಬರಾಜಿನ ವಾಹನಗಳಿಗೆ ಕೊರೊನಾ ಲಾಕ್‌ಡೌನ್‌ನಿಂದಾಗಿ ಅಡ್ಡಿಯುಂಟಾಗಿದೆ. ಈ ನಿಟ್ಟಿನಲ್ಲಿ ನಮ್ಮಲ್ಲಿ ಅಗತ್ಯ ವಸ್ತುಗಳ ದಾಸ್ತಾನು ಕೊರತೆಯೂ ಉಂಟಾಗಿದೆ ಎಂದು ಪುತ್ತೂರಿನ ವರ್ತಕರು ಅಳಲು ತೋಡಿಕೊಂಡ ಮತ್ತು ಅಗತ್ಯ ವಸ್ತುಗಳ ಪೂರೈಕೆಗೆ ಅಡ್ಡಿಯಾಗದಂತೆ ಮತ್ತು ಅಂಗಡಿ, ಪೆಟ್ರೋಲ್ ಪಂಪ್‌ಗಳ ಸಿಬಂದಿಗಳಿಗೆ ಪಾಸ್ ನೀಡುವ ಮೂಲಕ ಸಮಸ್ಯೆ ಸರಿಪಡಿಸಲಾಗುವುದು ಎಂದು ದ.ಕ.ಜಿಲ್ಲಾ ಎಸ್ಪಿ ಮತ್ತು ಜಿ.ಪಂ ಸಿಇಒ ವರ್ತಕರಿಗೆ ಭರವಸೆ ನೀಡಿದ್ದಾರೆ.

ಪುತ್ತೂರಿನ ದಿನ ನಿತ್ಯದ ವಸ್ತುಗಳ ಸಮಸ್ಯೆಗಳ ಆಗುಹೋಗುಗಳ ಕುರಿತು ಅವರು ಮಾ.೨೫ರಂದು ರಾತ್ರಿ ಪುತ್ತೂರು ದರ್ಬೆ ನಿರೀಕ್ಷಣಾ ಮಂದಿರದ ವಠಾರದಲ್ಲಿ ವರ್ತಕರ ಸಭೆಯಲ್ಲಿ ಮಾತನಾಡಿದರು. ವರ್ತಕರೆಲ್ಲರೂ ಸಾಮಾಜಿಕ ಅಂತರ ಕಾಯ್ದು ಕೊಂಡೆ ತಮ್ಮ ಅಳಲನ್ನು ತೋಡಿಕೊಂಡರು. ದೇವಣ್ಣಕಿಣಿ ಸಂಸ್ಥೆಯ ಸುರೇಂದ್ರ ಕಿಣಿ ಅವರು ಮಾತನಾಡಿ ನಮಗೆ ಸಾಗರದಿಂದ ದಿನಸಿ ವಸ್ತುಗಳು ಬರುತ್ತವೆ. ಲಾಕ್‌ಡೌನ್ ಹಿನ್ನಲೆಯಲ್ಲಿ ಸರಕು ಸಾಮಾಗ್ರಿ ಸರಬರಾಜಿಗೆ ತೊಂದರೆ ಆಗಿದೆ. ತರಕಾರಿ ವ್ಯಾಪಾರಸ್ಥರ ಸಂಘದವರು ಮಾತನಾಡಿ ಹಾಸನ, ಚಿಕ್ಕಪೇಟೆ, ಕೆಆರ್‌ಪೇಟೆಯಿಂದ ತರಕಾರಿಗಳು ಪುತ್ತೂರಿಗೆ ಸೋಮವಾರ ಬರುತ್ತವೆ. ಈ ಹಿಂದೆ ಎಪಿಎಂಸಿಯಲ್ಲಿ ಲೋಡ್ ಅನ್ ಲೋಡ್‌ಗೆ ಅವಕಾಶ ನೀಡಲಾಗಿತ್ತು. ಈಗ ಅಲ್ಲೂ ಅವಕಾಶ ಇಲ್ಲ. ಅವಿಭಜಿತ ದ.ಕಜಿಲ್ಲಾ ಪೆಟ್ರೋಲಿಯಂ ಮಾಲಕರ ಸಂಘದ ಅಧ್ಯಕ್ಷ ಉದ್ಯಮಿ ವಾಮನ್ ಪೈ ಅವರು ಮಾತನಾಡಿ ಪೆಟ್ರೋಲ್ ಪಂಪ್‌ಗೆ ಸಂಬಂಧಿಸಿ ಮಾತನಾಡಿದರು. ಉತ್ತರಿಸಿದ ಎಸ್ಪಿ ಬಿ.ಎಮ್. ಲಕ್ಷ್ಮೀಪ್ರಸಾದ್ ಅವರು ವೈಕಲ್ ಟ್ರಾನ್ಸ್‌ಪೋರ್ಟ್ ಮತ್ತು ಲೋಡ್ ಆನ್‌ಲೋಡ್ ಮಾಡುವ ಕೆಲಸದವರಿಗೆ ಪಾಸ್ ಕೊಡುವ ವ್ಯವಸ್ಥೆ ಮಾಡಲಾಗುವುದು. ತರಕಾರಿ ಅನ್‌ಲೋಡ್ ಮಾಡಲು ಎಪಿಎಂಸಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು ಮತ್ತು ಲೋಡ್ ಅನ್‌ಲೋಡ್ ಮಾಡುವಾಗ ಅಲ್ಲಿ ಹೋಲ್‌ಸೇಲ್‌ಗೆ ಮಾತ್ರ ಅವಕಾಶ. ನಿಮ್ಮ ವಾಹನಗಳಿಗೆ ಪಾಸ್ ಮಾಡಿಸಿಕೊಳ್ಳಿ. ಮೆಡಿಕಲ್‌ಗೆ ಸಂಬಂದಿಸಿ ಹಳ್ಳಿಯಿಂದ ಬರುವವರು ಆ ಭಾಗದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಬರುವಂತೆ ತಿಳಿಸಿ ಎಂದರು. ಪಂಚಾಯತ್‌ಗೆ ಸಂಬಂಧಿಸಿ ನೀರಿನ ಪಂಪ್ ದುರಸ್ಥಿ ಮಾಡುವವರಿಗೂ ಪಾಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿ.ಪಂ ಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ ಆರ್ ತಿಳಿಸಿದರು. ವರ್ತಕರಾದ ಎಮ್.ಜಿ.ರಫೀಕ್, ಮೆಡಿಕಲ್ ಶಾಪ್‌ನ ಸುರೇಶ್ ಸೇರಿದಂತೆ ಹಲವಾರು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದು ಕಡ್ಡಾಯ:
ನಿಮ್ಮ ನಿಮ್ಮ ಅಂಗಡಿಗಳಿಗೆ ಬರುವ ಗ್ರಾಹಕರು ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕು. ಈಗಾಗಲೇ ಅಂಗಡಿಗಳ ಮುಂದೆ ಹಾಕಲಾದ ಮಾರ್ಕ್‌ನಲ್ಲೇ ಅವರು ನಿಂತು ದಿನಸಿ ವಸ್ತುಗಳನ್ನು ಖರೀದಿಸುವ ಕೆಲಸ ಆಗಬೇಕು. ಇಲ್ಲಿ ಸಮಸ್ಯೆ ಬಂದರೆ ಕಂಬದಿಂದ ಕಂಬಕ್ಕೆ ಬಳ್ಳಿ ಹಾಕಿ ಗ್ರಾಹಕರನ್ನು ನಿಯಂತ್ರಿಸಿ ಎಂದು ಎಸ್ಪಿ ಬಿ.ಎಮ್.ಲಕ್ಷ್ಮೀಪ್ರಸಾದ್ ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.