Breaking News

ಕೊರೋನಾ ಎಫೆಕ್ಟ್: ಸಾಮಾಗ್ರಿ ಖರೀದಿಗೆ ಅಂತರ ಕಾಯ್ದುಕೊಳ್ಳಲು ಅಂಗಡಿ ಮುಂದೆ ಮಾರ್ಕಿಂಗ್

Puttur_Advt_NewsUnder_1
Puttur_Advt_NewsUnder_1

ವಿಟ್ಲ:ಕೊರೋನ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶವನ್ನು ಲಾಕ್ ಡೌನ್ ಮಾಡಲಾಗಿದ್ದು, ಕರ್ಪ್ಯೂ ಸಡಿಲಿಕೆ ವೇಳೆಯಲ್ಲಿ ಅಗತ್ಯ ವಸ್ತುಗಳನ್ನು ಕೊಳ್ಳಲು ಅಂಗಡಿ ಮುಂದೆ ಜನ ಗುಂಪು ಸೇರುವುದನ್ನು  ತಪ್ಪಿಸಲು ಹಾಗೂ ಜನ ನಿಗದಿತ ಅಂತರವನ್ನು ಕಾಯ್ದಿರಿಸುವ ನಿಟ್ಟಿನಲ್ಲಿ ಬಂಟ್ವಾಳ ತಹಶಿಲ್ದಾರ್ ರಶ್ಮಿ ಎಸ್.ಆರ್. ರವರ ನಿರ್ದೇಶನದಂತೆ ವಿಟ್ಲ ಪೇಟೆಯ ಅಂಗಡಿಗಳ ಮುಂಭಾಗದಲ್ಲಿ ವೃತ್ತಾಕಾರದ ಮಾರ್ಕ್ ಗಳನ್ನು ಹಾಕಲಾಗಿದೆ.
ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಾಲಿನಿರವರ ನೇತೃತ್ವದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಕಂದಾಯ ನಿರೀಕ್ಷಕರಾದ ಪ್ರಕಾಶ್, ತೆರಿಗೆ ವಸೂಲಿದಾರರಾದ ಚಂದ್ರಶೇಖರ ವರ್ಮ ಹಾಗೂ ವಿಟ್ಲ ಠಾಣಾ ಪೊಲೀಸ್ ಸಿಬಂದಿ ಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

ಮಾ.೨೬ರಂದು ಬೆಳಗ್ಗೆ ಸಾಮಾಗ್ರಿ ಖರೀದಿಸಲು ಬಂದ ಗ್ರಾಹಕರು ಅಂತರ ಪಾಲಿಸಿ ಸರದಿ ಸಾಲಿನಲ್ಲಿ ಆ ವೃತ್ತದೊಳಗೆ ನಿಂತು ಸಾಮಾಗ್ರಿಗಳನ್ನು ಖರೀದಿಸುತ್ತಿರುವುದು ಕಂಡು ಬಂತು. ಗ್ರಾಮೀಣ ಭಾಗದಲ್ಲಿ ಕೆಲವೆಡೆ ಮಾರ್ಕ್ ಹಾಕದ ಅಂಗಡಿಗಳ ಮುಂಭಾಗದಲ್ಲಿ ಜನ ಎಂದಿನಂತೆ ಗುಂಪು ಗುಂಪಾಗಿ ನಿಂತು ಸಾಮಾಗ್ರಿಗಳನ್ನು ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಮಾತ್ರವಲ್ಲದೆ ಗ್ರಾಮೀಣ ಭಾಗದ ಅಂಗಡಿಗಳಲ್ಲಿ ಸಾಮಾಗ್ರಿಗಳು ಮುಗಿಯುವ ಹಂತ ತಲುಪಿದ್ದು ಬೇಕಾದ ಸಾಮಾಗ್ರಿ ಸಿಗದಿದ್ದರೆ, ಸಿಕ್ಕ ಸಾಮಾಗ್ರಿಗಳನ್ನು ಜನ ಮನೆಗೆ ಕೊಂಡೊಯ್ಯುತ್ತಿರುವುದು ಕಂಡು ಬಂತು.

ಅಂತರ ಕಾಯ್ದು, ಆರೋಗ್ಯ ಕಾಪಾಡಿಕೊಳ್ಳಿ:

ನಮ್ಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಾದ್ಯವಾದಷ್ಟು ಅಂಗಡಿಗಳ ಮುಂದೆ  ಮಾರ್ಕ್ ಗಳನ್ನು ಹಾಕಿದ್ದೇವೆ. ಜನರ ಆರೋಗ್ಯದ ದೃಷ್ಟಿಯಿಂದ ಹಾಗೂ ಸೋಂಕು ಹರಡದಂತೆ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ವೃತ್ತಗಳನ್ನು ಹಾಕಿದ್ದೇವೆ. ಸಾರ್ವಜನಿಕರು ಸಾಮಾಗ್ರಿಗಳನ್ನು ಖರೀದಿಸುವಾಗ ಈ ವೃತ್ತದೊಳಗೆ ನಿಂತು ಸರದಿ ಸಾಲಿನಲ್ಲಿ ಸಾಮಾಗ್ರಿ ಖರೀದಿಸಬೇಕು.- ಮಾಲಿನಿ, ಮುಖ್ಯಾಧಿಕಾರಿ ವಿಟ್ಲ ಪಟ್ಟಣ ಪಂಚಾಯತ್

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.