ಕೊರೊನ ಮಹಾಮಾರಿಗೆ ಮನೆ ಮನೆಯಲ್ಲೇ ಜಪತಪ: ಕಬಕದಲ್ಲಿ ಅರ್ಚಕರ ಮನೆಯಲ್ಲೇ ಏಕದಶ ರುದ್ರ, ಸಹಸ್ರನಾಮಾರ್ಚನೆ, ಪಾರಾಯಣ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದೇಶವನ್ನೇ ತಲ್ಲಣಗೊಳಿಸುತ್ತಿರುವ ಕೊರೊನಾ ಮಹಾಮಾರಿಯಿಂದ ಪಾರಾಗಲು ಲೋಕಕಲ್ಯಾಣಾರ್ಥವಾಗಿ ಸಾರ್ವಜನಿಕವಾಗಿ ಯಾವುದೇ ಧಾರ್ಮಿಕ ವಿಧಿ ವಿಧಾನ ಮಾಡಲು ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ಕಬಕದಲ್ಲಿ ಅರ್ಚಕರೊಬ್ಬರು ತನ್ನ ಮನೆಯಲ್ಲೇ ಸಾಮಾಜಿಕ ಅಂತರ ಕಾಯ್ದು ಕೊಂಡು ಏಕದಶ ರುದ್ರ, ಸಹಸ್ರನಾಮಾರ್ಚನೆ, ಅಭಿಷೇಕ, ಸಪ್ತಸ್ತುತಿ ಪಾರಾಯಣ ಮಾಡಿದ್ದಾರೆ.


ಭಾರತೀಯ ಸಂಪ್ರದಾಯದಲ್ಲಿ ಧಾರ್ಮಿಕಕ್ಕೆ ಮಹತ್ವವಿದ್ದು, ಅಂತಹ ಅನೇಕ ಹೋಮ, ಜಪ, ತಪದ ಮೂಲಕ ಅನೇಕ ಖಾಯಿಲೆಗಳನ್ನು ಗುಣ ಪಡಿಸುವ ಶಕ್ತಿ ಇದೆ ಎಂಬ ನಂಬಿಕೆ ಇದೆ. ಇತ್ತೀಚೆಗೆ ಭಾರತಕ್ಕೆ ವಕ್ಕರಿಸಿದ ಕೊರೊನಾ ಖಾಯಿಲೆಯಿಂದಾಗಿ ಸಾರ್ವಜನಿಕರು ಧಾರ್ಮಿಕ ಕಾರ್ಯಕ್ರಮ ನಡೆಸುವುದು, ಗುಂಪು ಸೇರುವುದಕ್ಕೆ ಸೆಕ್ಷನ್ ಜಾರಿ ಇರುವುದರಿಂದ ಮತ್ತು ಏ.೧೪ರ ತನಕ ದೇಶವ್ಯಾಪಿ ಲಾಕ್‌ಡೌನ್ ಆಗಿರುವ ಹಿನ್ನೆಲೆಯಲ್ಲಿ ಯಾವುದೇ ಧಾರ್ಮಿಕ ವಿಧಿ ವಿಧಾನ ಮಾಡಲು ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಬ್ರಹ್ಮಶ್ರೀ ವೇ ಮೂ ಜಯರಾಮ್ ಜೋಯಿಷ ಅವರು ತನ್ನ ಮನೆಯಲ್ಲಿ ವೇ ಮೂ| ವಡ್ಯ ಶ್ರೀಕೃಷ್ಣ ಭಟ್ ಅವರ ನೇತೃತ್ವದಲ್ಲಿ ಮಾ.26ರಂದು ಏಕದಶ ರುದ್ರ, ಸಹಸ್ರನಾಮಾರ್ಚನೆ, ಅಭಿಷೇಕ, ಸಪ್ತಸ್ತುತಿ ಪರಾಯಣ ಮಾಡಿದರು. ಬೆಳಿಗ್ಗೆ ಗಂಟೆ 9.45ರಿಂದ ಆರಂಭಗೊಂಡ ವೈದಿಕ ಜಪತಪಗಳ ಕಾರ್ಯಗಳು ಮಧ್ಯಾಹ್ನ ಗಂಟೆ 1.15ಕ್ಕೆ ಮಹಾ ಮಂಗಳಾರತಿಯ ಮೂಲಕ ಪೂರ್ಣಗೊಂಡಿತ್ತು. ವೈದಿಕರೆಲ್ಲ ಅಂತರ ಕಾಯ್ದು ಕೊಂಡೇ ಜಪತಪ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.