ಕೊರೊನಾ ಲಾಕ್‌ಡೌನ್-ತುರ್ತು ಕರೆಗೆ ಸ್ಪಂದಿಸಿದ ಆದರ್ಶ ಆಸ್ಪತ್ರೆ ; ಮನೆಯಲ್ಲೇ ಹೆರಿಗೆ ಮಾಡಿಸಿದ ಆರೋಗ್ಯ ಸಹಾಯಕಿಯರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೊನಾ ವೈರಸ್ ಸೋಂಕು ಹರಡುವ ಭಯದಿಂದ ತುಂಬು ಗರ್ಭಿಣಿಯೊಬ್ಬರು ಆಸ್ಪತ್ರೆಯಲ್ಲಿ ದಾಖಲಾಗದೆ ತವರು ಮನೆಯಲ್ಲೇ ಅರೈಕೆ ಪಡೆಯುತ್ತಿದ್ದ ವೇಳೆ ತೀರಾ ಹೊಟ್ಟೆ ನೋವಿನಿಂದ ಬಳಲುತ್ತಿದ್ದಾಗ ಪುತ್ತೂರು ಆದರ್ಶ ಆಸ್ಪತ್ರೆಯ ಆಂಬುಲೆನ್ಸ್ ಮೂಲಕ ಗರ್ಭಿಣಿಯ ಮನೆಗೆ ತೆರಳಿ ಮನೆಯಲ್ಲೇ ಹೆರಿಗೆ ಮಾಡಿಸಿದ ಘಟನೆ ನಡೆದಿದೆ. ತಾಯಿ ಮತ್ತು ಮಗು ಆರೋಗ್ಯದಿಂದ್ದು ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಮುಳ್ಳೇರಿಯ ನಿವಾಸಿ ವಿನಯ ಎಂಬವರ ಪತ್ನಿ ಸಾವಿತ್ರಿ (೩೪ವ)ರವರಿಗೆ ಹೆರಿಗೆಯಾಗಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅವರು ಪುತ್ತೂರು ಮುಕ್ವೆಯಲ್ಲಿರುವ ತನ್ನ ತವರು ಮನೆಗೆ ಕಳೆದ ಎರಡು ತಿಂಗಳ ಹಿಂದೆ ಬಂದಿದ್ದರು. ಮಾ.೨೫ರ ರಾತ್ರಿ ಸುಮಾರು ೧೨ ಗಂಟೆ ತೀರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವೇಳೆ ಅವರ ಸಹೋದರಿ ಸೌಮ್ಯ ಅವರು ೧೦೮ ಆಂಬುಲೆನ್ಸ್‌ಗೆ ಕರೆ ಮಾಡಿದ್ದರು. ಎರಡು ಬಾರಿ ಕರೆ ಮಾಡಿದರೂ ಅತ್ತ ಕಡೆಯಿಂದ ಉತ್ತರ ಬರದೇ ಇದ್ದಾಗ ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆ ಮಾಡಿದ್ದಾರೆ. ತಕ್ಷಣ ಕಾರ್ಯ ಪ್ರವೃತರಾದ ಆದರ್ಶ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ದಯಾನಂದರವರು ಆರೋಗ್ಯ ಸಹಾಯಕಿಯರಾದ ಲಕ್ಷ್ಮೀ ಮತ್ತು ಭವಾನಿ ಎಂಬವರೊಂದಿಗೆ ಮುಕ್ವೆ ಮನೆಗೆ ತೆರಳಿದ್ದರು. ಆದರೆ ಅಲ್ಲಿ ಗರ್ಭಿಣಿ ಸಾವಿತ್ರಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಸ್ಥಿತಿ ಇಲ್ಲವಾದ್ದರಿಂದ ಮನೆಯಲ್ಲೇ ಹೆರಿಗೆ ಮಾಡಿಸಿದ್ದಾರೆ. ಬಳಿಕ ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ಕರೆ ತಂದಿದ್ದಾರೆ. ಇದೀಗ ತಾಯಿ ಮತ್ತು ಮಗು ಆರೋಗ್ಯದಿಂದ ಇದ್ದಾರೆ. ತುರ್ತು ಸೇವಾ ಸಂದರ್ಭ ಜಿಲ್ಲೆಯ ಆಸ್ಪತ್ರೆಯ ಪಟ್ಟಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಇತ್ತೀಚೆಗೆ ಪುತ್ತೂರು ಆದರ್ಶ ಆಸ್ಪತ್ರೆಯನ್ನು ಸೂಚಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.