ವಳಕಡಮ: ಜುಗಾರಿ ಅಡ್ಡೆಗೆ ದಾಳಿ-ಇಬ್ಬರ ಬಂಧನ

Puttur_Advt_NewsUnder_1
Puttur_Advt_NewsUnder_1

ಕಡಬ: ಠಾಣಾ ವ್ಯಾಪ್ತಿಯ ಕೊಲ ಗ್ರಾಮದ ವಳಕಡಮ ಕುಮಾರಧಾರ ನದಿ ತಟದಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ದಾಳಿ ನಡೆಸಿರುವ ಕಡಬ ಪೋಲೀಸರು ಇಬ್ಬರನ್ನು ಬಂಧಿಸಿದ ಘಟನೆ ಮಾ.25ರಂದು ಸಂಜೆ ನಡೆದಿದೆ.
ಬಂಧಿತರನ್ನು ಹಿರೇಬಂಡಾಡಿ ಗ್ರಾಮದ ಪಾಲೆತ್ತಡಿಮುರ ನಿವಾಸಿ ಮಹಮ್ಮದ್ ಯೂನಸ್(೩೨ವ.) ಹಾಗೂ ಇದೇ ಗ್ರಾಮದ ಪಾಲೆತ್ತಡಿ ನಿವಾಸಿ ಹಸೈನಾರ್ ಎಂಬವರ ಪುತ್ರ ಇಬ್ರಾಹಿಂ(೫೪ವ.) ಎಂದು ಗುರುತಿಸಲಾಗಿದೆ. ಕುಮಾರಧಾನದಿಯ ಬೊಳ್ಳೆಚ್ಚಿ ದಡದಲ್ಲಿ ಅಕ್ರವಾಗಿ ಜುಗಾರಿ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಕಡಬ ಎಸ್‌ಐ ರುಕ್ಮ ನಾಯ್ಕ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದಾಗ ಇಬ್ಬರು ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿದ್ದಾರೆ. ಇನ್ನುಳಿದಂತೆ ಸಂಶುದ್ಧೀನ್ ಮುರದಮೇಲು ಹಾಗೂ ಸಲೀಮ್ ಬೋಲಮೆ ಎಂಬವರು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಬಂಧಿತರಿಂದ ೭೩೦ ರೂ., ನಗದು ವಶಪಡಿಸಿಕೊಳ್ಳಲಾಗಿದೆ. ದಾಳಿಯಲ್ಲಿ ಕೊಯಿಲ ಬೀಟ್ ಪೊಲೀಸ್, ಹೆಡ್ ಕಾನ್ಸ್‌ಟೇಬಲ್ ಹರೀಶ್, ಪೊಲೀಸ್ ಸಿಬ್ಬಂದಿಗಳಾದ ಮಹೇಶ್, ಭವಿತ್ ರೈ, ಶ್ರೀಶೈಲ ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.