ಗಡಿ ರಸ್ತೆಗಳಿಗೆ ಮಣ್ಣು ಹಾಕಿ ಮುಚ್ಚುಗಡೆ – ಎಮರ್ಜೆನ್ಸಿ ವಾಹನಗಳಿಗೂ ಅವಕಾಶವಿಲ್ಲ – ನಾಗರಿಕರಲ್ಲಿ ಹೆಚ್ಚಿದ ಆತಂಕ

Puttur_Advt_NewsUnder_1
Puttur_Advt_NewsUnder_1

ವಿಟ್ಲ: ಕೊರೋನ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಮಾಡುವುದರೊಂದಿಗೆ ದ.ಕ ಜಿಲ್ಲಾಡಳಿತ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ಕೇರಳ-ಕರ್ನಾಟಕ ಗಡಿ ಪ್ರದೇಶದ ಠಾಣೆಗಳಾದ ಬಂಟ್ವಾಳ ಹಾಗೂ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಬ್ಯಾರಿಕೇಡ್ ಗಳನ್ನು ಇಟ್ಟು ರಸ್ತೆ ಬಂದ್ ಮಾಡಲಾಗಿದ್ದರೂ, ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸಲು ಅವಕಾಶ ಮಾಡಿಕೊಡುವಂತೆ ಕೆಲವೆಡೆ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಹಿನ್ನೆಲೆಯಲ್ಲಿ ಹಾಗೂ ಭದ್ರತಾ ದೃಷ್ಟಿಯಿಂದ ಜಿಲ್ಲಾಡಳಿತದ ನಿರ್ದೇಶನದಂತೆ ಮುಖ್ಯ ರಸ್ತೆಗಳ ಸಹಿತ ಹೆಚ್ಚಿನ ಒಳರಸ್ತೆಗಳನ್ನು ಮಣ್ಣುಹಾಕಿ ಬಂದ್ ಮಾಡಲಾಗಿದೆ.

ಕೇರಳ ಕರ್ನಾಟಕ ಗಡಿಪ್ರದೇಶವಾದ ವಿಟ್ಲ ಠಾಣಾ ವ್ಯಾಪ್ತಿಯ ಸಾರಡ್ಕ, ಸಾಲೆತ್ತೂರು ಸಮೀಪದ ಮೆದು, ಆನೆಕಲ್ಲು, ನೆಲ್ಲಿಕಟ್ಟೆ, ಮಾಣಿಲ ಗ್ರಾಮದ ಡಬ್ಬಲ್ ಕಟ್ಟಿಂಗ್ ಪ್ರದೇಶದಲ್ಲಿ ವಿಟ್ಲ ಠಾಣಾ ಪೊಲೀಸರು ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ರಸ್ತೆ ಬಂದ್ ಮಾಡಿ ಸಂಚಾರವನ್ನು ಸಂಪೂರ್ಣ ನಿಷೇಧಿಸಿದ್ದಾರೆ. ಆದರೆ ಸಾರ್ವಜನಿಕರು ಪೊಲೀಸರ ಮಾತನ್ನು ಕೇಳದೆ ಅವರೊಂದಿಗೆ ಜಗಳಕ್ಕಿಳಿದು ಅಶಾಂತಿ ಸೃಷ್ಟಿಸುತ್ತಿರುವ ಪ್ರದೇಶಗಳಲ್ಲಿ ಹಾಗೂ ಕೇರಳ- ಕರ್ನಾಟಕ ಸಂಪರ್ಕಿಸುವ ರಸ್ತೆಗಳನ್ನು ಜಿಲ್ಲಾಡಳಿತದ ನಿರ್ದೇಶನದಂತೆ ತಹಶೀಲ್ದಾರ್ ರವರ ನೇತೃತ್ವದಲ್ಲಿ ಮಣ್ಣು ಹಾಕಿ ಯಾವುದೇ ವಾಹನಗಳನ್ನು ಸಂಚರಿಸದಂತೆ ನಿರ್ಭಂದ ಹೇರಲಾಗಿದೆ. ಉಳಿದಂತೆ ಗಡಿ ಪ್ರದೇಶವನ್ನು ಸಂಪರ್ಕಿಸುವ ಅಡ್ಕಸ್ಥಳ-ಚೆಕ್ಕುತ್ತಿ-ಬೈರಿಕಟ್ಟೆ ರಸ್ತೆ, ಮಾಣಿಲ ಗ್ರಾಮದ ಮುರುವ ಡಬ್ಬಲ್ ಕಟ್ಟಿಂಗ್ ರಸ್ತೆಯನ್ನು ಸಂಪರ್ಕಿಸುವ ಕನಿಯಾಲ,ಬಳ್ಳೂರು, ಕೆಮನಾಜೆ ಹಾಗೂ ಸಾಲೆತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೆದು- ತಲೆಕ್ಕಿ ಸಹಿತ ಬಂಟ್ವಾಳ ಠಾಣಾ ವ್ಯಾಪ್ತಿಯ ಹೆಚ್ಚಿನ ಒಳ ಸಂಪರ್ಕ ರಸ್ತೆಯನ್ನು ಹಾಗೂ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಪಾತೂರಿಲ್ಲಿ ಮಣ್ಣು ಹಾಕಿ ರಸ್ತೆಯನ್ನು ಮುಚ್ಚಲಾಗಿದೆ.

ಎಮರ್ಜೆನ್ಸಿ ವಾಹನಗಳಿಗೂ ಅವಕಾಶವಿಲ್ಲ….

ಈ ಮೊದಲು ವಿಟ್ಲ ಠಾಣಾ ವ್ಯಾಪ್ತಿಯ ಸಾರಡ್ಕ ಚೆಕ್ ಪೋಸ್ಟ್ ನ್ನು ಹೊರತುಪಡಿಸಿ ತೆರೆಯಲಾದ ಉಳಿದೆಲ್ಲಾ ಚೆಕ್ ಪೋಸ್ಟ್ ಗಳಲ್ಲಿ ಬ್ಯಾರಿಕೇಡ್ ಗಳನ್ನು ರಸ್ತೆಯಲ್ಲಿ ಇರಿಸಿ ರಸ್ತೆಯನ್ನು ಬ್ಲಾಕ್ ಮಾಡಲಾಗಿತ್ತು. ಪೊಲೀಸ್ ಸಿಬಂದಿಗಳು ರಾತ್ರಿ, ಹಗಲು ಎರಡೂ ಪಾಳಿಯಲ್ಲಿ ಆ ಪ್ರದೇಶದಲ್ಲಿ ಕಾವಲು ಕಾಯುತ್ತಿದ್ದರು. ಎಮರ್ಜೆನ್ಸಿ ಕೇಸ್ ಗಳಿರುವ ವಾಹನಕ್ಕೆ ಬ್ಯಾರಿಕೇಡ್ ಗಳನ್ನು ತೆಗೆದು ಸಂಚಾರಕ್ಕೆ ಅವಕಾಶ ಕೊಡುತ್ತಿದ್ದರು. ಆದರೆ ದಿನಕಳೆದಂತೆ ಅಗತ್ಯಕ್ಕಿಂತ ಅನಗತ್ಯವಾಗಿ ವಾಹನ ಚಾಲಕರು ಇಲ್ಲದ ನೆಪಹೇಳಿ ಚೆಕ್ ಪೋಸ್ಟ್ ಗಳನ್ನು ಡಾಟುವ ಪ್ರಯತ್ನ ಮಾಡಲಾರಂಭಿಸಿದರು. ಇನ್ನು ಕೆಲವರು ಅಲ್ಲಿದ್ದ ಪೊಲೀಸರೊಂದಿಗೆ ಜಗಳಕ್ಕಿಳಿಯುತ್ತಿದ್ದರು. ಇವೆಲ್ಲಕ್ಕಿಂತ ಮಿಗಿಲಾಗಿ ಭದ್ರತೆ ದೃಷ್ಠಿಯಿಂದ ಜಿಲ್ಲಾಡಳಿತದ ಕ್ರಮ ಅಭಿನಂದನಾರ್ಹವಾಗಿದೆ.

ಕಳಚಿಬಿತ್ತು ಸಂಪರ್ಕ ಕೊಂಡಿ – ಗಮನ ಹರಿಸಬೇಕಾಗಿದೆ ಜಿಲ್ಲಾಡಳಿತ

ವಿಟ್ಲದಿಂದ ಸಾಲೆತ್ತೂರು-ಪಾತೂರು ಮಾರ್ಗವಾಗಿ ದೇರಳಕಟ್ಟೆ ಗೆ ತೆರಳುವ ರಸ್ತೆಯ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಸಾಲೆತ್ತೂರು ಗ್ರಾಮದ ಮೆದು ಸಮೀಪದ ಕೂಡುರಸ್ತೆ ಗಡಿಯಲ್ಲಿ ಹಾಗೂ ವರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾತೂರು ಗಡಿಯಲ್ಲಿ ಮುಖ್ಯ ರಸ್ತೆಗೆ ಮಣ್ಣು ಹಾಕಿರುವುದರಿಂದ ಸಂಪರ್ಕ ಕಳೆದುಕೊಂಡಿದೆ. ದೇರಳಕಟ್ಟೆಯಲ್ಲಿ ಪ್ರತಿಷ್ಠಿತ ಆಸ್ಪತ್ರೆಗಳು ಕಾರ್ಯಚರಿಸುತ್ತಿದ್ದು ಇಲ್ಲಿಗೆ ವಿಟ್ಲ,ಸಾಲೆತ್ತೂರು ಭಾಗದಿಂದ ಹಾಗೂ ಕನ್ಯಾನ ಆನೆಕಲ್ಲು ಭಾಗದಿಂದ ರೋಗಿಗಳನ್ನು ತುರ್ತು ಸೇವೆಗೆಂದು ಕೊಂಡೊಯ್ಯುವ ಆ?ಯಂಬುಲೆನ್ಸ್ ಗಳ ಸಹಿತ ಡಯಾಲಿಸಿಸ್ ಗಳಿಗಾಗಿ ರೋಗಿಗಳನ್ನು ಸಾಗಿಸುವ ಖಾಸಗಿ ವಾಹನಗಳು ಇದೇ ದಾರಿಯಾಗಿ ಸಂಚರಿಸುತ್ತಿದ್ದು, ಇದೀಗ ರಸ್ತೆ ಬ್ಲಾಕ್ ಮಾಡಿರುವುದರಿಂದ ಸಂಪರ್ಕ ಕೊಂಡಿ ಕಳಚಿಕೊಂಡಂತಾಗಿದೆ. ಇದರಿಂದಾಗಿ ಡಯಾಲಿಸೀಸ್ ಗೆ ತೆರಳುವ ರೋಗಿಗಳ ಸಹಿತ ತುರ್ತು ಚಿಕಿತ್ಸೆಗೆ ತೆರಳಬೇಕಾದರೆ ಏನು ಮಾಡುವುದು ಎನ್ನುವ ಆತಂಕ ನಾಗರೀಕರಲ್ಲಿ ಮೂಡಿದೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.