ಅಗತ್ಯ ವಸ್ತುಗಳು ಬೇಕಾದರೆ ಮಾಸ್ಕ್ ಧರಿಸಿ ! ಕೊರೊನಾ ವಾರ್‌ಗಾಗಿ ಪುತ್ತೂರಿನಲ್ಲಿ ವರ್ತಕರಿಂದ ಗ್ರಾಹಕರಿಗೆ ಸಲಹೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಏ.14ರ ತನಕ ದೇಶವ್ಯಾಪಿ ನಡೆಯುತ್ತಿರುವ ಲಾಕ್‌ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳಿಗೆ ಬೇಕಾಗಿ ಬೆಳಿಗ್ಗೆ ಅಂಗಡಿಗಳಿಗೆ, ಪೆಟ್ರೋಲ್, ಮೆಡಿಕಲ್‌ಗಳಿಗೆ ಬರುವ ಗ್ರಾಹಕರಿಗೆ ಮಾಸ್ಕ್ ಧರಿಸಿದರೆ ಮಾತ್ರ ಸಾಮಾಗ್ರಿ ನೀಡುವುದಾಗಿ ವರ್ತಕರು ಹೇಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಮಾ.೨೬ರಂದು ಬೆಳಿಗ್ಗೆ ವಾಹನ ಸವಾರರಿಗೆ, ಕಾರು ಚಾಲಕರಿಗೆ ಮಾಸ್ಕ್ ಧರಿಸಿದರೆ ಮಾತ್ರ ಪೇಟೆಗೆ ಎಂಟ್ರಿ ಕೊಡಲಾಗಿತ್ತು. ಅದು ಬೆಳವಣಿಗೆಯಲ್ಲಿ ಮಾ.೨೭ರಂದು ದಿನಸಿ ಅಂಗಡಿಗಳು, ಹಾಲಿನ ಡೈರಿ, ಮೆಡಿಕಲ್ ಶಾಪ್, ಪೆಟ್ರೋಲ್ ಪಂಪ್‌ಗಳಲ್ಲಿ ಮಾಸ್ಕ್ ಧರಿಸದೇ ಬಂದರೆ ಯಾವುದೇ ಸಾಮಾಗ್ರಿ ವಿತರಣೆ ಮಾಡುತ್ತಿರಲಿಲ್ಲ. ಕೇವಲ ಮಾಸ್ಕ್ ಧರಿಸಿದವರಿಗೆ ಮಾತ್ರ ಸಾಮಾಗ್ರಿ ವಿತರಣೆ ಮಾಡುವ ಕಾರ್ಯ ನಡೆಯಿತು. ಮಾಸ್ಕ್ ಧರಿಸುವುದು ಗ್ರಾಹಕರಿಗೆ ಅನಿವಾರ್ಯವಾಗಿ ಮೂಡಿ ಬಂದಿತ್ತಾದರೂ ಜನರಲ್ಲಿ ಕೊರೊನಾ ವೈರಸ್ ಸೋಂಕು ಹರಡುವಿಕೆಯ ಜಾಗೃತಿ ಮೂಡಿತ್ತು. ಪೆಟ್ರೋಲ್ ಪಂಪ್‌ನಲ್ಲಿ ಅದೆಷ್ಟೋ ಮಂದಿ ಮಾಸ್ಕ್ ಧರಿಸದೆ ಬಂದಿದ್ದರಿಂದ ಅವರಿಗೆ ಪೆಟ್ರೋಲ್ ಕೂಡಾ ನೀಡಿಲ್ಲ. ಕೆಲವು ವಾಹನ ಸವಾರರು ವಾಪಾಸಾದ ಘಟನೆಯೂ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.