ಕೊರೊನಾ ಲಾಕ್‌ಡೌನ್ ಹಿನ್ನೆಲೆ ಅಂಗಡಿ ಬರುವ ಗ್ರಾಹಕರಿಗೆ ಬಿಸಿಲ ತಾಪ: ಸಚಿನ್ ಟ್ರೇಡಿಂಗ್ ಸಂಸ್ಥೆಯಲ್ಲಿ ಪೆಂಡಾಲ್ ಅಳವಡಿಕೆ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಕೊರೊನಾ ವೈರಸ್ ಸೋಂಕು ಹರಡದಂತೆ ಲಾಕ್‌ಡೌನ್ ಆದ ಹಿನ್ನೆಲೆಯಲ್ಲಿ ಬೆಳಿಗ್ಗಿನಿಂದ ಮಧ್ಯಾಹ್ನ ತನಕ ಅಗತ್ಯ ವಸ್ತುಗಳ ಖರೀದಿಗಾಗಿ ಅಂಗಡಿ ಮುಂದೆ ಅಂತರ ಕಾಯ್ದುಕೊಂಡು ಸರಥಿ ಸಾಲಿನಲ್ಲಿ ನಿಲ್ಲುವ ಗ್ರಾಹಕರಿಗೆ ಬಿಸಿಲ ತಾಪ ಕಡಿಮೆ ಮಾಡಲು ದರ್ಬೆ ಪ್ರತಿಷ್ಠಿತ ಸಂಸ್ಥೆಯಾದ ಸಚಿನ್ ಟ್ರೇಡಿಂಗ್ ಕಂಪೆನಿಯಲ್ಲಿ ಪೆಂಡಾಲ್ ಹಾಕಿ ಗ್ರಾಹಕರಿಗೆ ನೆರಳಿನ ಅವಕಾಶ ಮಾಡಿಕೊಡಲಾಗಿದೆ.

ದಿನಸಿ ಸಾಮಾಗ್ರಿಗಳ ಹೊಲ್‌ಸೇಲ್ ಮತ್ತು ರಖಂ ಮಾರಾಟಗಾರರಾದ ಸಚಿನ್ ಟ್ರೇಡಿಂಗ್ ಸಂಸ್ಥೆಯ ಎದುರು ದಿನಂಪ್ರತಿ ಜನರು ಮುಗಿ ಬೀಳುತ್ತಿದ್ದರು. ಕೊರೊನಾ ಎಫ್ಟಕ್ ಬಳಿಕ ಲಾಕ್‌ಡೌನ್ ಆದ ಮರುದಿನದಿಂದಲೇ ಈ ಸಂಸ್ಥೆಯ ರಸ್ತೆಯುದಕ್ಕೂ ಅಗತ್ಯವಸ್ತುಗಳ ಪೂರೈಕೆಗಾಗಿ ವಾಹನಗಳ ಸಾಲು ಸಾಲು ನಿಲುಗಡೆಯ ಜೊತೆಗೆ ಗ್ರಾಹಕರು ಕೂಡಾ ಅಂತರ ಕಾಯ್ದು ಕೊಂಡು ಬಿಸಿಲ ತಾಪಕ್ಕೆ ಅಂಗಡಿಯ ಮುಂದೆ ಸರಥಿ ಸಾಲಿನಲ್ಲಿ ಗಂಟೆ ಗಟ್ಟಲೆ ನಿಲ್ಲುವ ಪರಿಸ್ಥಿತಿ ಎದುರಾಗಿತ್ತು. ಇದನ್ನು ಮನಗಂಡ ಸಂಸ್ಥೆಯ ಮಾಲಕ ಮಂಜುನಾಥ್ ನಾಯಕ್ ಮತ್ತು ಅವರ ಪುತ್ರ ಸಚಿನ್ ಅವರು ಗ್ರಾಹಕರಿಗೆ ಬಿಸಿಲ ತಾಪ ತಪ್ಪಿಸಲು ಪೆಂಡಾಲ್ ಅಳವಡಿಸಿದ್ದಾರೆ. ಜೊತೆಗೆ ಗ್ರಾಹಕರು ಕೈ ಮತ್ತು ಮುಖ ತೊಳೆಯಲು ನೀರು ಮತ್ತು ಸ್ಯಾನಿಟೈಷನ್ ಸೌಲಭ್ಯ ಮಾಡಲಾಗಿದೆ.

ಅಗತ್ಯ ವಸ್ತುಗಳ ಕೊರತೆ ಆಗುವುದಿಲ್ಲ
ಗ್ರಾಹಕರು ಅಗತ್ಯ ವಸ್ತುಗಳ ಖರೀದಿಗೆ ಮುಗಿ ಬೀಳುವ ಅವಶ್ಯತಕೆ ಇಲ್ಲ. ನಮ್ಮಲ್ಲಿ ಅಗತ್ಯ ವಸ್ತುಗಳ ಕೊರತೆಯೂ ಆಗುವುದಿಲ್ಲ. ಜೊತೆಗೆ ಯಾವುದೇ ವಸ್ತುಗಳಿಗೆ ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟವನ್ನೂ ಮಾಡುವುದಿಲ್ಲ. ಗ್ರಾಹಕರು ದರ ಹೆಚ್ಚಳ ಆಗುತ್ತದೆ ಎಂಬ ಆತಂಕವೂ ಬೇಡ – ಮಂಜುನಾಥ್ ನಾಯಕ್

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.