ಕೊರೊನಾ ವೈರಸ್ ಭೀತಿ – ದರ್ಬೆಯಿಂದ ಔಷಧಿ ಸಿಂಪಡಣೆಗೆ ಚಾಲನೆ

Puttur_Advt_NewsUnder_1
Puttur_Advt_NewsUnder_1
  • ಜನರಲ್ಲಿ ಜಾಗೃತಿ ಮೂಡಿದಾಗ ಎಲ್ಲರಿಗೂ ನೆಮ್ಮದಿ – ಸಂಜೀವ ಮಠಂದೂರು

ಪುತ್ತೂರು: ಕೊರೋನಾ ಭೀತಿ ಹೆಚ್ಚುತ್ತಲೇ ಇದೆ. ಸೋಂಕಿತರ ಸಂಖ್ಯೆ ನಿತ್ಯ ಏರಿಕೆ ಗತಿಯಲ್ಲಿ ಸಾಗುತ್ತಿದೆ. ಇವುಗಳ ನಿಯಂತ್ರಣಕ್ಕೆ ಸರಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಈ ಮಧ್ಯೆ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಪುತ್ತೂರು ನಗರಸಭೆಯಿಂದ ನಗರಸಭೆ ವ್ಯಾಪ್ತಿಯಲ್ಲಿ ಔಷಧಿ ಸಿಂಪಡಣೆಗೆ ಮಾ.೨೭ರಂದು ಚಾಲನೆ ನೀಡಲಾಯಿತು.

ಶಾಸಕ ಸಂಜೀವ ಮಠಂದೂರು ಔಷಧಿ ಸಿಂಪಡಣೆಗೆ ಚಾಲನೆ ನೀಡಿ ಮಾತನಾಡಿ ಬ್ಲೀಚಿಂಗ್‌ನ್ನು ಡೈಲ್ಯೂಟ್ ಮಾಡಿ ನಗರದಲ್ಲಿ ಸ್ಪ್ರೇ ಮಾಡಲಾಗುತ್ತಿದೆ. ನಗರದ ಎಲ್ಲಾ ಜನ ಸಹಕಾರ ಮಾಡಿ ಸ್ವಚ್ಛತೆ ಮತ್ತು ವೈರಾಣುವನ್ನು ದೂರ ಮಾಡುವ ದೃಷ್ಟಿಯಿಂದ ಈ ಕೆಲಸ ನಡೆಯುತ್ತಿದೆ. ಇದಕ್ಕೆ ಜನರಲ್ಲಿ ಜಾಗೃತಿ ಮೂಡಬೇಕು ಆಗ ಎಲ್ಲರಿಗೂ ನೆಮ್ಮದಿ ಸಿಗುತ್ತದೆ. ಕೊರೊನಾ ಖಾಯಿಲೆ ಪುತ್ತೂರು ನಗರದಲ್ಲಿ ಒಂದೇ ಒಂದು ಕೇಸ್ ದಾಖಲಾಗದಂತೆ ನಾವೇ ಜಾಗೃತರಬೇಕೆಂದ ಅವರು ನಗರಸಭೆ ಮತ್ತು ಅಗ್ನಿಶಾಮಕದಳ ಹಾಗೂ ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಈ ಔಷಧಿ ಸಿಂಪಡಣೆ ಕಾರ್ಯ ನಡೆಯುತ್ತಿದೆ. ಮುಂದಿನ ದಿನ ನಗರಸಭೆ ವ್ಯಾಪ್ತಿಯ ಎಲ್ಲಾ ಕಡೆ ಸಿಂಪಡಿಸುವ ಕುರಿತು ಚಿಂತನೆ ನಡೆಸಲಾಗುತ್ತದೆ ಎಂದುಹೇಳಿದರು. ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸ್ಥಾಯಿ ಸಮಿತಿ ಅಧ್ಯಕ್ಷರೂ ಬಿಜೆಪಿ ಗ್ರಾಮ ಮಂಡಲದ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ನಗರಸಭೆ ಸದಸ್ಯರು ಬಿಜೆಪಿ ನಗರ ಮಂಡಲದ ಅಧ್ಯಕ್ಷರಾದ ಪಿ.ಜಿ.ಜಗನ್ನಿವಾಸ ರಾವ್, ಎಪಿಎಂಸಿ ಸದಸ್ಯ ಬೂಡಿಯಾರ್ ರಾಧಾಕೃಷ್ಣ ರೈ, ತಹಸೀಲ್ದಾರ್ ರಮೇಶ್ ಬಾಬು, ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ, ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ, ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್, ಪರಿಸರ ಅಭಿಯಂತರ ಗುರುಪ್ರಸಾದ್ ಶೆಟ್ಟಿ, ಅಭಿಯಂತರ ಶ್ರೀಧರ್, ಸುಳ್ಯ ನಗರ ಮಂಡಲದ ಮುಖ್ಯಾಧಿಕಾರಿ ಮತ್ತಡಿ, ಅಗ್ನಿಶಾಮಕ ಇನ್‌ಸ್ಪೆಕ್ಟರ್ ಸುಂದರ ಮತ್ತು ಸಿಬಂದಿಗಳು, ಶಾಸಕ ಕಚೇರಿಯ ಜೀವನ್, ವಿಶ್ವನಾಥ ಕುಲಾಲ್, ನಗರಸಭೆಯ ರಾಜೇಶ್ ನಾಕ್ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಬ್ಲೀಚಿಂಗ್ ನೀರು ಮಿಶ್ರಿತ ಔಷಧಿ
ಕೊರೊನಾ ವೈರಾಣು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಗರಸಭೆಯಿಂದ ಔಷಧಿ ಸಿಂಪಡಣೆ ಕಾರ್ಯ ನಡೆಯುತ್ತಿದೆ. ದರ್ಬೆಯಿಂದ ನೆಹರುನಗರ ತನಕ ರಸ್ತೆಯ ಉದ್ದಕ್ಕೂ ಈ ಬ್ಲೀಚಿಂಗ್ ಮಿಶ್ರಿತ ನೀರನ್ನು ಸಿಂಪಡಿಸಲಾಗುತ್ತದೆ-  ರೂಪಾ ಶೆಟ್ಟಿ ಪೌರಾಯುಕ್ತರು ನಗರಸಭೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.