Breaking News

ಕಡಬದಲ್ಲಿ ಸುಳ್ಯ ಶಾಸಕ ಎಸ್. ಅಂಗಾರ ನೇತೃತ್ವದಲ್ಲಿ ವರ್ತಕರ ಸಭೆ

Puttur_Advt_NewsUnder_1
Puttur_Advt_NewsUnder_1
  • ಅಗತ್ಯದಷ್ಟೆ ದಿನಸಿ ಸಾಮಾಗ್ರಿ ಪಡೆದುಕೊಳ್ಳಿ, ಅನಗತ್ಯ ಶೇಖರಣೆ ಬೇಡ-ಎ.ಸಿ. ಯತೀಶ್ ಉಳ್ಳಾಲ್

ಕಡಬ: ಸಾರ್ವಜನಿಕರು ಅಗತ್ಯದಷ್ಟೆ ದಿನಸಿ ಸಾಮಾಗ್ರಿಗಳನ್ನು ಅಂಗಡಿಯಿಂದ ಪಡೆದುಕೊಳ್ಳಿ, ಅನಗತ್ಯ ಶೇಖರಣೆ ಬೇಡ ಎಂದು ಪುತ್ತೂರು ಸಹಾಯಕ ಕಮೀಷನರ್ ಯತೀಶ್ ಉಳ್ಳಾಲ್ ಹೇಳಿದ್ದಾರೆ. ಅವರು ಮಾ.27ರಂದು ಕಡಬದಲ್ಲಿ ಸುಳ್ಯ ಶಾಸಕ ಎಸ್. ಅಂಗಾರ ಅವರ ನೇತೃತ್ವದಲ್ಲಿ ನಡೆದ ವರ್ತಕರ ಸಭೆಯಲ್ಲಿ ಮಾತನಾಡಿ, ಸಾರ್ವಜನಿಕರು ಯಾವುದೇ ಗೊಂದಲ ಪಡಬೇಕಾಗಿಲ್ಲ, ಜನರಿಗೆ ದಿನನಿತ್ಯದ ಅಗತ್ಯ ವಸ್ತುಗಳ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು ದಿನಸಿ ಸಾಮಾಗ್ರಿ, ತರಕಾರಿ ಗೂಡ್ಸ್‌ಗಳ ಸಾಗಾಟಕ್ಕೆ ಅನುಮತಿ ನೀಡಲಾಗಿದೆ, ಈ ಬಗ್ಗೆ ವರ್ತಕರು ತಮ್ಮ ಗ್ರಾಹಕರಿಗೆ ತಿಳಿಹೇಳಬೇಕು, ಎಲ್ಲರೂ ತಿಂಗಳುಗಟ್ಟಲೆ ಬೇಕಾಗುವ ಸಾಮಾಗ್ರಿಗಳನ್ನು ಶೇಖರಣೆ ಮಾಡಲು ಪ್ರಾರಂಭಿಸಿದರೆ ದಾಸ್ತಾನು ಕೊರತೆ ಉಂಟಾಗಲಿದೆ ಆದುದರಿಂದ ಯಾರು ಆತಂಕಪಡದೆ ಅಗತ್ಯ ಸಾಮಾಗ್ರಿಗಳನ್ನು ಮಾತ್ರ ಪಡೆದುಕೊಳ್ಳಿ ಎಂದು ಹೇಳಿದರಲ್ಲದೆ ಅಗತ್ಯ ಸೇವೆಯಲ್ಲಿರುವ ಸಿಬ್ಬಂದಿಗಳ ಮೇಲೆ ಯಾರಾದರೂ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಅವರ ಮೇಲೆ ಕ್ರಿಮಿನಲ್ ಕೇಸು ದಾಖಲಿಸುವ ಅಧಿಕಾರಿ ಎ.ಸಿ. ಹಾಗೂ ತಹಸೀಲ್ದಾರ್ ಅವರಿಗೆ ಇದೆ ಸಾರ್ವಜನಿಕರು ಇದನ್ನು ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು. ಶಾಸಕ ಎಸ್.ಅಂಗಾರ ಅವರು ಮಾತನಾಡಿ, ಈಗಾಗಲೇ ಜನರ ಅಗತ್ಯ ವಸ್ತುಗಳ ವಿತರಣೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸರಕಾರ ಕ್ರಮ ಕೈಗೊಂಡಿದ್ದು ಜನತೆ ಯಾವುದೇ ಗೊಂದಲಪಡುವ ಅವಶ್ಯಕತೆಯಿಲ್ಲ, ಪಡಿತರ ವಿತರಣೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಏನೆ ಸಮಸ್ಯೆ ಬಂದರೂ ನಮ್ಮನ್ನು ಸಂಪರ್ಕಿಸುವಂತೆ ಅವರು ಹೇಳಿದರು.

ಡಿವೈಎಸ್ಪಿ ದಿನಕರ ಶೆಟ್ಟಿಯವರು ಮಾತನಾಡಿ, ಬೇರೆ ಊರಿನಿಂದ ಅಂಗಡಿಗಳಿಗೆ ಸಾಮಾಗ್ರಿ ಸಾಗಾಟ ಮತ್ತು ತರಕಾರಿ ಸಾಗಾಟ ವಾಹನಗಳಿಗೆ ದಿನದ ೨೪ ಗಂಟೆಯೂ ಅನುಮತಿ ಕೊಡಲಾಗಿದೆ ಆದರೆ ಅಂತಹ ವಾಹನದವರು ಸರಿಯಾದ ಮಾಹಿತಿ ನೀಡಿ ಕಂದಾಯ ಇಲಾಖೆಯಿಂದ ಅನುಮತಿ ಪತ್ರ ಪಡೆದುಕೊಳ್ಳಬೇಕು, ಅದನ್ನು ನಮ್ಮ ಚೆಕ್ ಪೊಸ್ಟ್‌ಗಳನ್ನು ಪೋಲಿಸರು ಪರಿಶೀಲನೆ ನಡೆಸಿ ಸಾಗಾಟಕ್ಕೆ ಅನುಮತಿ ನೀಡುತ್ತಾರೆ. ಆದರೆ ಪಾಸು ಪಡೆದುಕೊಂಡು ಅದರ ಉದ್ದೇಶದ ಬದಲು ಜನ ಸಾಗಾಟ ಸೇರಿದಂತೆ ದುರುಪಯೋಗಪಡಿಸಿದರೆ ಕೇಸು ದಾಖಲಿಸಲಾಗುವುದು ಎಂದು ಎಚ್ಚರಿಸಿದರು. ಸಭೆಯಲ್ಲಿ ಕಡಬ ತಹಸೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ ಉಪಸ್ಥಿತರಿದ್ದರು. ಸಭೆಯಲ್ಲಿ ಕಡಬದ ವರ್ತಕರು ಜಿ.ಪಂ. ಸದಸ್ಯರುಗಳು ವಿವಿಧ ಸಮಸೈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.