Breaking News

ಪುತ್ತೂರಿನಲ್ಲಿ ವಾಣಿಜ್ಯ ವ್ಯವಹಾರ ಸಂಪೂರ್ಣ ಬಂದ್: ಬೆಳಿಗ್ಗೆ ಮಾತ್ರ ಹಾಲು, ಮೆಡಿಕಲ್, ಪತ್ರಿಕೆ ವಿತರಣೆಗೆ ಸ್ವಲ್ಪ ರಿಲಾಕ್ಸ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾ ಸೋಂಕು ಮಾ.೨೭ರಂದು ಮತ್ತಿಬ್ಬರಿಗೆ ಪತ್ತೆಯಾಗುವುದರೊಂದಿಗೆ ದ.ಕ.ಜಿಲ್ಲೆಯಲ್ಲಿ ೭ ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮಾ.೨೮ರಂದು ದ.ಕ.ಜಿಲ್ಲೆಯನ್ನು ಸಂಪೂರ್ಣವಾಗಿ ವಾಣಿಜ್ಯ ವ್ಯವಹಾರಗಳನ್ನು ಬಂದ್‌ಗೊಳಿಸುವಂತೆ ಜಿಲ್ಲಾಡಳಿತದಲ್ಲಿ ಸಚಿವರ ಜೊತೆ ನಡೆದ ಸಭೆಯಲ್ಲಿ ತೀರ್ಮಾಣಿಸಿದಂತೆ ಜಿಲ್ಲೆಯಲ್ಲಿ ಬಂದ್ ವಾತಾವರಣ ಇದ್ದು, ಪುತ್ತೂರಿನಲ್ಲಿ ಹಾಲು, ಮೆಡಿಕಲ್, ಪತ್ರಿಕೆ ವಿತರಣೆಗೆ ಸ್ವಲ್ಪ ರಿಲಾಕ್ಸ್ ಇತ್ತಾದರೂ ಉಳಿದೆಲ್ಲಾ ಅಗತ್ಯವಸ್ತುಗಳ ಮಳಿಗೆಗಳು ಬಂದ್ ಆಗಿತ್ತು.

ಬೆಳಿಗ್ಗೆ ಪೊಲೀಸರಿಂದ ಅನೌನ್ಸ್‌ಮೆಂಟ್:
ಮಾ.೨೭ರ ರಾತ್ರಿ ಮತ್ತು ಮಾ.೨೮ರ ಬೆಳಿಗ್ಗೆ ಗಂಟೆ ೫.೩೦ ಪೊಲೀಸರು ಮೈಕಾಅನೌನ್ಸ್ ಮೂಲಕ ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಮೈಕಾ ಅನೌನ್ಸ್ ಮೂಲಕ ಎಚ್ಚರಿಕೆ ನೀಡಿದರು. ಯಾರೂ ಕೂಡಾ ಪೇಟೆಗೆ ಬರುವುದು, ರಸ್ತೆಯಲ್ಲಿ ಓಡಾಡಬಾರದು. ರಸ್ತೆಯಲ್ಲಿ ತಿರುಗಾಡುವುದು ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕಾ ಅನೌನ್ಸ್‌ಮೆಂಟ್ ಮಾಡಿದರು.

ಯಾರಿಗೂ ಪೇಟೆಗೆ ಎಂಟ್ರಿ ಇಲ್ಲ:
ಪುತ್ತೂರು ನಗರಸಭೆಗೆ ಬರುವ ಕಬಕ, ಹಾರಾಡಿ, ಕೆಮ್ಮಾಯಿ, ದರ್ಬೆ, ಸಾಲ್ಮರ, ಪಡೀಲು ಕಡೆಗಳಲ್ಲಿ ಪೊಲೀಸರು ಬ್ಯಾರಿಕೆಡ್ ಹಾಕಿ ಸಾರ್ವಜನಿಕರು ಸೇರಿದಂತೆ ವಾಹನಗಳಿಗೆ ಅವಕಾಶ ನೀಡಿಲ್ಲ. ಎಲ್ಲಾ ವಾಹನಗಳನ್ನು ಹಿಂದಕ್ಕೆ ಕಳುಹಿಸಿದರು. ತುರ್ತು ಸೇವೆಗೆ ಸ್ವಲ್ಪ ರಿಲಾಕ್ಸ್ ನೀಡಿದರು.

ನಂದಿನಿ ಹಾಲು ರಿಟರ್ನ್:
ಮಾ.೨೭ರಂದು ಮಧ್ಯ ರಾತ್ರಿ ಪುತ್ತೂರು ವ್ಯಾಪ್ತಿಯಲ್ಲಿ ನಂದಿನಿ ಡೀಲರ್‌ಗಳಿಗೆ ಹಾಲಿನ ಕ್ರೇಟ್ ಇಳಿಸಿ ಹೋದವರು ಬೆಳಿಗ್ಗೆ ಅದರ ಸಂಗ್ರಹಕ್ಕಾಗಿ ಬಂದಾಗ ಡೀಲರ್‌ಗಳ ಅಂಗಡಿಗಳು ತೆರೆಯದ ಹಿನ್ನೆಲೆಯಲ್ಲಿ ಮತ್ತು ಪೊಲೀಸರು ಬಂದ್ ಮಾಡಬೇಕೆಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ಕೆಲವೊಂದು ನಂದಿನಿ ಹಾಲಿನ ವ್ಯಾಪಾರಸ್ಥರು ಅಂಗಡಿ ತೆರೆಯದ ಕಾರಣ ನಂದಿನಿ ಹಾಲಿನ ಸರಬರಾಜುದಾರರು ಲಾರಿಯಲ್ಲೇ ಪುನಃ ನೂರಾರು ಲೀಟರ್ ಹಾಲನ್ನು ಕೊಂಡೊಯ್ದ ಘಟನೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.