ದರ್ಬೆಯಲ್ಲಿ ಡ್ರೈನೇಜ್ ಬ್ಲಾಕ್ – ನಗರಸಭೆಗೆ ದೂರು: ಬಂದ್ ನಡುವೆಯೂ ಪೌರ ಕಾರ್ಮಿಕರ ತುರ್ತು ಸ್ಪಂದನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾ ವೈರಸ್ ಸೋಂಕು ಹರಡದಂತೆ ಜಿಲ್ಲೆಯಾದ್ಯಂತ ಪೂರ್ಣ ಬಂದ್ ಆಗಿದ್ದರೂ ಸಾಂಕ್ರಾಮಿಕ ರೋಗಗಳು ಹರಡದಂತೆ ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ದರ್ಬೆಯಲ್ಲಿ ತ್ಯಾಜ್ಯ ನೀರುಗಳು ಚರಂಡಿಯಲ್ಲಿ ಬ್ಲಾಕ್ ಆಗಿರುವ ಕುರಿತು ಸಾರ್ವಜನಿಕರ ದೂರಿಗೆ ಬಂದ್ ನಡುವೆಯೂ ನಗರಸಭೆ ಪೌರ ಕಾರ್ಮಿಕರು ತುರ್ತು ಸ್ಪಂಧಿಸಿರುವ ಕುರಿತು ಮಾ.28ರಂದು ನಡೆದಿದೆ.

ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಸುಮಾರು ೫೦ ಮಂದಿ ಪೌರ ಕಾರ್ಮಿಕರು ಸ್ವಚ್ಚತಾ ಕಾರ್ಯ ನಡೆಸುತ್ತಿದ್ದಾರೆ. ಇತ್ತೀಚೆಗೆ ಅವರು ಕೊರೋನಾ ಭಯದಿಂದ ಊರಿಗೆ ಹೊರಾಟಗ ಅವರಿಗೆ ಧೈರ್ಯ ತುಂಬಿದ ಪೌರಾಯುಕ್ತರು ಇದೀಗ ಲಾಕ್‌ಡೌನ್ ದಿನಗಳಲ್ಲಿ ಪ್ರತಿ ನಿತ್ಯ ನಸುಕಿನ ಜಾವ ಪೌರ ಕಾರ್ಮಿಕರ ಜೊತೆಯೇ ಅವರಿಗೆ ಸ್ಪೂರ್ತಿ ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ಮಾ.೨೮ರಂದು ದರ್ಬೆಯಲ್ಲಿ ಡ್ರೈನೇಜ್ ಬ್ಲಾಕ್ ಆಗಿರುವ ಸಂದರ್ಭದಲ್ಲೂ ಪೌರ ಕಾರ್ಮಿಕರನ್ನು ಸೇರಿಸಿಕೊಂಡು ದರ್ಬೆ ಪ್ರಶಾಂತ್ ಮಹಲ್ ಮತ್ತು ರಾಜೇಶ್ ಪವರ್ ಪ್ರೆಸ್ ಬಳಿ ಡ್ರೈನೇಜ್ ಕ್ಲೀನಿಂಗ್ ಮಾಡಿಸಿದರು. ಈ ಸಂದರ್ಭದಲ್ಲಿ ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್, ಪರಿಸರ ಅಭಿಯಂತರ ಗುರುಪ್ರಸಾದ್ ಶೆಟ್ಟಿ ಜೊತೆಗಿದ್ದರು. ಪೌರ ಕಾರ್ಮಿಕರು ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.