ನರಮಾನಸಿಕ ಕಾಯಿಲೆಯಲ್ಲಿ  ಬಳಲುತ್ತಿರುವ ಪುತ್ರನಿಗೆ ಔಷಧಿ ಕೊರತೆ

Puttur_Advt_NewsUnder_1
Puttur_Advt_NewsUnder_1
  • ಸಂಪ್ಯದಿಂದ ಪುತ್ತೂರು ಪೇಟೆಗೆ ಕಾಲ್ನಡಿಗೆ ಮಾಡಿದ ತಾಯಿ – ಸ್ಪಂಧಿಸಿದ ಶಾಸಕರ ವಾರ್ ರೂಮ್
ಪುತ್ತೂರು: ನರಮಾನಸಿಕ ಕಾಯಲೆಯಿಂದ ಬಳಲುತ್ತಿರುವ ಪುತ್ರನಿಗೆ ಔಷಧಿ‌ಗಾಗಿ ತಾಯಿಯೊಬ್ಬರು ಪುತ್ತೂರು ಸರಕಾರಿ ಆಸ್ಪತ್ರೆಗೆ ನಡೆದು ಕೊಂಡು ಬಂದ ಮತ್ತು ಬಂದ್ ಹಿನ್ನಲೆಯಿಂದ ಆಸ್ಪತ್ರೆಯಲ್ಲಿ ವೈದ್ಯರೂ ಇಲ್ಲದೆ, ಔಷಧಿಯೂ ಸಿಗದೆ ಹಿಂದಕ್ಕೆ ಹೋದ ಘಟನೆ ಮಾ.28ರಂದು ನಡೆದಿದೆ. ಈ ನಡುವೆ ಪುತ್ತೂರು ಶಾಸಕರ ಕಚೇರಿ ವಾರ್ ರೂಮ್ ನಿಂದ ರಾಜೇಶ್ ಬನ್ನೂರು ಅವರು ಮಹಿಳೆಯನ್ನು ಕಾರಿನಲ್ಲಿ ಮನೆಗೆ ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸಂಪ್ಯ ಸಿಂಹವನ ನಿವಾಸಿ ಲೀಲಾವತಿ ಅವರ ಪುತ್ರ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು. ಆತನಿಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಬರುವ ಮಂಗಳೂರಿನ ನರಮಾನಸಿಕ ತಜ್ಞರ ಸಲಹೆಯಂತೆ ಔಷಧಿ ನೀಡಲಾಗುತ್ತಿದ್ದು. ಮಾ.28 ಕ್ಕೆ ನರಮಾನಸಿಕ ತಜ್ಞರು ಪುತ್ತೂರು ಆಸ್ಪತ್ರೆಗೆ ಬರುವವರಿದ್ದು ಅವರಿಂದ ಮುಂದಿನ ಔಷಧಿ ಸೇವನೆಗೆ ಸಲಹೆ ಮತ್ತು ಔಷಧಿ ಪಡೆಯಲೆಂದು ಮನೆಯಿಂದ ಹೊರಟ್ಟಿದ್ದರು. ಆದರೆ ಬಂದ್ ಹಿನ್ನಲೆಯಲ್ಲಿ ವಾಹನ ಸಂಚಾರ ಇಲ್ಲದ ಕಾರಣ ಲೀಲಾವತಿ ಅವರು ಮನೆಯಿಂದ ಸರಕಾರಿ ಆಸ್ಪತ್ರೆಗೆ ನಡೆದು‌ಕೊಂಡೇ ಬಂದರೂ ಆಸ್ಪತ್ರೆಯಲ್ಲಿ ವೈದ್ಯರು‌ ಇಲ್ಲದ‌ ಕಾರಣ ಮಗನ ಔಷಧಿಗಾಗಿ ಚಿಂತೆ ಮಾಡುತ್ತಿದ್ದರು. ಔಷಧಿ ಇಲ್ಲದೆ ಮನೆಗೆ ಹೋದರೆ ಮಗ ಸುಧಾರಿಸಿಕೊಳ್ಳುವುದಿಲ್ಲ ಎಂದು ಸರಕಾರಿ ಆಸ್ಪತ್ರೆಯ ಬಳಿ ತನ್ನ ಅಳಲು ತೋಡಿಕೊಳ್ಳುತ್ತಿದ್ದರು.
ಈ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯರೂ ಶಾಸಕರ ವಾರ್ ರೂಮ್ ನ ಆಂಬುಲೆನ್ಸ್ ಸೇವಾ ವಿಭಾಗದ ರಾಜೇಶ್ ಬನ್ನೂರು ಅವರು ಸರಕಾರಿ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಯೋಗಾನಂದ ಅವರ ಮೂಲಕ ವೈದ್ಯರು ಈ ಹಿಂದೆ ಔಷಧಿ ಚೀಟಿಯಲ್ಲಿ ಬರೆದು‌ಕೊಟ್ಟಿದ ಔಷಧಿಯಲ್ಲಿ ಲಭ್ಯ ಇರುವ ಔಷಧಿಯನ್ನು ಕೊಡಿಸಿದರು. ಬಳಿಕ ಲೀಲಾವತಿ ಅವರುನ್ನು ಕಾರಿನಲ್ಲಿ ಸುರಕ್ಷಿತವಾಗಿ ಮನೆಗೆ ಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ವಿಶ್ವನಾಥ‌ಕುಲಾಲ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.