Breaking News

ಹಾಲು, ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕೊಡಬೇಕು: ದ.ಕ.ಹಾಲು ಒಕ್ಕೂಟ ಅಧ್ಯಕ್ಷರಿಂದ ಜಿಲ್ಲಾಡಳಿತಕ್ಕೆ ಮನವಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋವಿಡ್ ೧೯ ವೈರಾಣು ಪ್ರಕರಣ ತೀವೃಗೊಂಡ ಈ ವಿಷಮ ಪರಿಸ್ಥಿತಿಯಲ್ಲೂ ಕೂಡ ದಕ್ಷಿಣ ಕನ್ನಡ ಹಾಲು ಒಕ್ಕೂಟವು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ರೈತರಿಂದ ಹಾಲನ್ನು ಸಂಗ್ರಹಿಸಿ ಎರಡೂ ಜಿಲ್ಲೆಗಳ ಗ್ರಾಹಕರಿಗೆ ವಿತರಿಸುತ್ತಿದೆ. ಕೋವಿಡ್ ೧೯ನ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿ ಕಾರ್ಯ ನಿರ್ವಹಿಸುತ್ತಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳು ಅತ್ಯಗತ್ಯ ವಸ್ತುಗಳ ಅಡಿಯಲ್ಲಿ ಬರುವುದರಿಂದ ನಂದಿನಿ ಬಳಗದ ನಾವೆಲ್ಲರೂ ಕೂಡ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿದ್ದೇವೆ. ಆದರೆ ಟಿ.ವಿ. ಮಾಧ್ಯಮಗಳಲ್ಲಿ ಮಾ.೨೮ ರಂದು ಅತ್ಯಗತ್ಯ ವಸ್ತುಗಳನ್ನೂ ಒಳಗೊಂಡಂತೆ ದಕ್ಷಿಣ ಕನ್ನಡ ಜಿಲ್ಲೆಯು ಸಂಪೂರ್ಣ ಬಂದ್ ಎಂಬ ವರದಿ ಬಿತ್ತರವಾಗಿರುವುದರಿಂದ ಹಾಗೂ ಪೋಲೀಸ್ ಇಲಾಖೆಯಿಂದ ಯಾವುದೇ ಅಂಗಡಿ ಮುಂಗಟ್ಟುಗಳನ್ನು ತೆರೆಯಬಾರದೆಂಬ ಕಟ್ಟು ನಿಟ್ಟಿನ ಸಂದೇಶ ರವಾನೆಯಾಗಿರುವುದರಿಂದ ನಂದಿನಿ ಡೀಲರ್ ಗಳು ಅಂಗಡಿ ತೆರೆಯಲಾರದೆ ಹಾಲನ್ನು ಸ್ವೀಕರಿಸದಿರುವುದರಿಂದ ಮಾರುಕಟ್ಟೆಗೆ ರವಾನಿಸಿದ ಸಂಪೂರ್ಣ ಹಾಲು ಡೈರಿಗೆ ಹಿಂತಿರುಗಿ ಬಂದಿರುತ್ತದೆ. ಇದರಿಂದ ಹಾಲಿನ ದಾಸ್ತಾನು ಹೆಚ್ಚಾಗುತ್ತಿದ್ದು ಹಾಲು ಮಾರಾಟಕ್ಕೆ ಅಥವಾ ಹಾಲು ಖರೀದಿ ಸ್ಥಗಿತದ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ದ.ಕ.ಜಿಲ್ಲಾಡಳಿತಕ್ಕೆ ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ ಹೆಗ್ಡೆ ಮನವಿ ಮಾಡಿದ್ದಾರೆ.

ದ.ಕ.ಹಾಲು ಒಕ್ಕೂಟದಲ್ಲಿ ಈಗಾಗಲೇ ಹಾಲಿನ ಶೇಖರಣೆ ದಾಸ್ತಾನು ಸುಮಾರು ೯ ಲಕ್ಷದಷ್ಟಿದ್ದು, ಹಿಂತಿರುಗಿ ಬಂದಿರುವ ಹಾಲು ಸೇರಿ ದಾಸ್ತಾನು ಇನ್ನಷ್ಟು ಹೆಚ್ಚಾಗಲಿದೆ. ಹಾಗೂ ಇವತ್ತು ರೈತರಿಂದ ಹಾಲು ಶೇಖರಣೆ ಮುಂದುವರಿದಲ್ಲಿ ಹಾಲು ಮತ್ತಷ್ಟು ಹೆಚ್ಚಾಗಲಿದೆ. ಇದಲ್ಲದೆ ಹೆಚ್ಚಾದ ಹಾಲನ್ನು ಪೌಡರ್ ಆಗಿ ಪರಿವರ್ತಿಸಲು, ಚನ್ನರಾಯ ಪಟ್ಟಣ, ಧಾರವಾಡ, ಮದರ್ ಡೇರಿ, ಮಂಡ್ಯ ಮುಂತಾದ ಎಲ್ಲಾ ಕಡೆಯ ಪರಿವರ್ತನಾ ಘಟಕಗಳಲ್ಲಿ ಈಗಾಗಲೇ ತುಂಬಾ ದಾಸ್ತಾನು ಬಾಕಿ ಇರುವುದರಿಂದ ಪರಿವರ್ತನೆ ಕೂಡಾ ಅಸಾಧ್ಯ. ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಹಾಲು ಒಕ್ಕೂಟದ ಸ್ಥಿತಿ ಚಿಂತಾಜನಕವಾಗಲಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಇಲ್ಲದಿದ್ದಲ್ಲಿ ರೈತರಿಂದ ಹಾಲು ಖರೀದಿ ಸ್ಥಗಿತಗೊಳಿಸಲು ಅವಕಾಶ ಕೊಡುವುದು, ಇಲ್ಲವೇ ಹಾಲು ಮಾರಾಟಕ್ಕೆ ಅಂಗಡಿ ಮುಂಗಟ್ಟುಗಳ ತೆರೆಯುವಿಕೆಗೆ ಅವಕಾಶ ಕೊಡಿಸಬೇಕು. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ ಹೆಗ್ಡೆ ಮನವಿಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.