Breaking News

ಕುಕ್ಕಾಜೆ ಶ್ರೀ ಶ್ರೀಕೃಷ್ಣ ಗುರೂಜಿ ಯವರ ನೇತೃತ್ವದಲ್ಲಿ ಬಡ ಕುಟುಂಬಗಳಿಗೆ ದಿನಬಳಕೆ ಸಾಮಾಗ್ರಿ ವಿತರಣೆ

Puttur_Advt_NewsUnder_1
Puttur_Advt_NewsUnder_1

ವಿಟ್ಲ: ದೇಶದಾದ್ಯಂತ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೋನ ವೈರಸ್ ನಿಂದಾಗಿ ಅವೆಲ್ಲವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ದೇಶವನ್ನೇ  ಲಾಕ್ ಡೌನ್ ಮಾಡಲಾಗಿರುವ ಹಿನ್ನೆಲೆಯಲ್ಲಿ ಮಾಣಿಲ ಗ್ರಾಮದ ಬಡ ಕುಟುಂಬದವರು ಎದುರಿಸುತ್ತಿರುವ ಸಮಸ್ಯೆಗೆ ಸ್ಪಂದಿಸಿ ಸುಮಾರು 75 ಕ್ಕಿಂತಲೂ ಅಧಿಕ ಕುಟುಂಬಗಳಿಗೆ   ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನ ಧರ್ಮದರ್ಶಿಗಳಾದ ಶ್ರೀ ಶ್ರೀಕೃಷ್ಣ ಗುರೂಜಿ ಯವರ ನೇತೃತ್ವದಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಮಾಣಿಲ ಶಾಖೆ ವತಿಯಿಂದ  ಅಕ್ಕಿ ,ಉಪ್ಪು, ತರಕಾರಿ ಸಹಿತ ಅಗತ್ಯ ಸಾಮಾಗ್ರಿ ಗಳನ್ನು ಪೂರೈಕೆ ಮಾಡಲಾಯಿತು. ಮಾಣಿಲ ಗ್ರಾಮದ  ಬೀಟ್ ಪೊಲೀಸ್ ವಿಶ್ವನಾಥ್ ನಾಶಿ  ,ಶಾಖೆ ಸಂಚಾಲಕ ಉದಯ ಶೆಟ್ಟಿ , ಶ್ರೀಧರ್,  ಪಿ.ಕೆ  ಕುಕ್ಕಾಜೆ, ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷರು ರವಿ ಕುಟ್ಯಮಡ್ಕ ಮುದಲಾದವರು ಉಪಸ್ಥಿತರಿದ್ದರು. ಯಾವುದೇ ತುರ್ತು ಸಂದರ್ಭದಲ್ಲಿ ಸಹಾಯಕ್ಕಾಗಿ ಸಂಪರ್ಕಿಸುವಂತೆ ಗುರೂಜಿಯವರು ಈ ಸಂದರ್ಭದಲ್ಲಿ ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.