ದಕ್ಷಿಣ ಕನ್ನಡ ಜಿಲ್ಲೆ ನಾಳೆಯೂ(ಮಾ.29) ಸಂಪೂರ್ಣ ಬಂದ್ : ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿಕೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಕೊರೋನಾ ಪಾಸಿಟಿವ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯಲ್ಲಿ ಮಾ.೨೯ರಂದು ಕೂಡ ಸಂಪೂರ್ಣ ಬಂದ್ ಆಗಲಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ನಿರ್ಗತಿಕ ಮತ್ತು ಬಡ ಕಾರ್ಮಿಕರು ಸೇರಿದಂತೆ ಆಹಾರ ಇಲ್ಲದೆ ಪರದಾಡುತ್ತಿರುವವರಿಗೆ ಊಟದ ವ್ಯವಸ್ಥೆ. ಮುಜರಾಯಿ ಸಚಿವರು ಆಗಿರುವ ಕೋಟ ಶ್ರೀನಿವಾಸ ಪೂಜಾರಿಯವರಿಂದ ರಾಜ್ಯದ ಎ ಗ್ರೇಡ್ ದೇವಸ್ಥಾನಗಳಿಗೆ ಆದೇಶ ನೀಡಿದ್ದಾರೆ. ಆಯಾ ಜಿಲ್ಲಾಡಳಿತದ ಆದೇಶದಂತೆ ದೇವಸ್ಥಾನದಿಂದ ಊಟದ ವ್ಯವಸ್ಥೆ ಕೈಗೊಳ್ಳುವಂತೆ ಜಿಲ್ಲೆಯ ವರ್ತಕರು ಸೇರಿದಂತೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಅಧಿಕಾರಿಗಳ ಜೊತೆ ಸಚಿವರ ಮಹತ್ವದ ಸಭೆನಡೆಸಲಾಯಿತು.

ಜಿಲ್ಲಾ ವಿಶೇಷ ನೊಡಲ್ ಅಧಿಕಾರಿ ಪೊನ್ನುರಾಜ್,ಸಂಸದ ನಳಿನ್ ಕುಮಾರ್ ಕಟೀಲ್,ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ ,ಜಿಲ್ಲಾಧಿಕಾರಿ ಸಿಂಧು.ಬಿ.ರೂಪೇಶ್,ಅಪರ ಜಿಲ್ಲಾಧಿಕಾರಿ ರೂಪಾರವರ ಉಪಸ್ಥಿತಿಯಲ್ಲಿ ಆರೋಗ್ಯಾಧಿಕಾರಿಗಾಳು ಸೇರಿದಂತೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಯಿತು. ಸಭೆಯಲ್ಲಿ ಸುಮಾರು 2500 ಯಕ್ಷಗಾನ ಕಲಾವಿದರಿಗೆ ಸರಕಾರದ ವತಿಯಿಂದ ಆರ್ಥಿಕ ನೆರವಿನ ಚಿಂತನೆ ನಡೆಸಲಾಯಿತು.

ಹಾಲು,ಔಷಧಾಲಯ,ಅಡುಗೆ ಅನಿಲ ಯಥಾವತ್ತ್ ಸರಬರಾಜು ಪೆಟ್ರೋಲ್ ಬಂಕ್ ಓಪನ್. ಅಗತ್ಯವಸ್ತುಗಳ ಸರಬರಾಜಿಗೆ ತೊಂದರೆ ಇಲ್ಲ. ಬಡ ನಿರ್ಗತಿಕ,ಕೂಲಿ ಕಾರ್ಮಿಕರಿಗೆ,ಶಾಲೆ/ಹಾಸ್ಟೆಲ್ ಗಳಲ್ಲಿ ವಸತಿ ವ್ಯವಸ್ಥೆ ಕಾರ್ಮಿಕ ಇಲಾಖೆ ವತಿಯಿಂದ ಆದೇಶ.

ಯಾವುದೇ ಕಾರಣಕ್ಕೂ ದ.ಕ.ಜಿಲ್ಲೆ ಮತ್ತು ಕೇರಳದ ತಲಪಾಡಿಯೂ ಸೇರಿದಂತೆ ಎಲ್ಲಾ 21 ಸಂಪರ್ಕಗಳು ಸಂಪೂರ್ಣ ಕಡಿತ. ಆಂಬ್ಯುಲೆನ್ಸ್ ಗೂ ಅವಕಾಶವಿಲ್ಲ ಸಂಸದರಿಂದ ಕಡಕ್ ನಿರ್ಧಾರ.

ನಗರದಲ್ಲಿ 90 ರಿಂದ 95% ಜನರು ಇನ್ನೂ ಎರಡು ಮೂರು ದಿನಗಳಿಗೆ ಸಾಕಾಗುವಷ್ಟು ದಿನಸಿಯೂ ಸೇರಿದಂತೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಇಟ್ಟುಕೊಂಡಿರುತ್ತಾರೆ.ಮುಂದಿನ ದಿನಗಳಲ್ಲಿ ಆಪ್, ಆನ್‌ಲೈನ್ ಮೂಲಕ ದಿನಸಿ ಸಾಮಾಗ್ರಿಗಳನ್ನು ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು. ಆನ್‌ಲೈನ್ ನಲ್ಲಿ ಬುಕ್ ಮಾಡಲು ತಿಳಿಯದ ಅನಕ್ಷರಸ್ತರು ಜಿಲ್ಲಾಧಿಕಾರಿಗಳ ಸಹಾಯವಾಣಿ 1077 ಅಥವ ಶಾಸಕರ,ಸಂಸದರ ಸಹಾಯವಾಣಿಗೆ ಸಂಪರ್ಕಿಸಿ ಬೇಡಿಕೆ ಸಲ್ಲಿಸಿದಲ್ಲಿ ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ಪತ್ರಿಕೆ ಮಾರಾಟಕ್ಕೆ ಯಾವುದೇ ತೊಂದರೆಯಾಗೂವುದಿಲ್ಲ. ಪತ್ರಿಕೆ ಸರಬರಾಜು ಮಾಮೂಲಿ ನಂತೆ ನಡೆಯಲಿಲ್ಲ. ಜಿಲ್ಲಾಡಳಿತ ದ ಆದೇಶವನ್ನು ಕಟ್ಟುನಿಟ್ಟಿಾಗಿ ಪಾಲಿಸಿ ಸಹಕರಿಸುವಂತೆ ಮನವಿಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.