Breaking News

ಟ್ಯಾಂಕರ್ ಪಲ್ಟಿ: ಕರ್ತವ್ಯ ನಿರತ ಅಗ್ನಿಶಾಮಕ ದಳ ಸಿಬ್ಬಂದಿಗಳಿಗೆ ಬೆದ್ರೋಡಿ ಯುವಕರಿಂದ ಊಟೋಪಚಾರದ ವ್ಯವಸ್ಥೆ

Puttur_Advt_NewsUnder_1
Puttur_Advt_NewsUnder_1
  • ಪುತ್ತೂರು, ಬಂಟ್ವಾಳ ಅಗ್ನಿ ಶಾಮಕ ದಳ ಮೊಕ್ಕಾಂ
  • ಹಿರಿಯ ಅಧಿಕಾರಿಗಳು ಸೇರಿದಂತೆ ೧೫ ಮಂದಿಗೆ ವ್ಯವಸ್ಥೆ
  • ಪರಿಸರದಲ್ಲಿ ೨೦ ಮಂದಿ ಕಾರ್ಮಿಕರಿಗೂ ಊಟೋಪಚಾರದ ವ್ಯವಸ್ಥೆ


ಉಪ್ಪಿನಂಗಡಿ: ಬೆದ್ರೋಡಿ ಎಂಬಲ್ಲಿ ಬುಲೆಟ್ ಟ್ಯಾಂಕರ್ ಪಲ್ಟಿಯಾಗಿ ಗ್ಯಾಸ್ ಸೋರಿಕೆ ಆಗಿದ್ದು, ಇಲ್ಲಿ ಮುಂಜಾಗ್ರತಾ ಸಲುವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಗ್ನಿಶಾಮಕ ದಳ ಸಿಬಂದಿಗಳಿಗೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಪೇಟೆ ಬಂದ್ ಆಗಿರುವ ಹಿನ್ನೆಲೆಯಲ್ಲಿ ಸಿಬಂದಿಗಳ ಹಸಿವು ತಣಿಸುವುದಕ್ಕೆ ಬೆದ್ರೋಡಿಯ ಯುವಕರು ಊಟೋಪಚಾರದ ವ್ಯವಸ್ಥೆ ಮಾಡಿ ಮಾನವೀಯತೆಯೊಂದಿಗೆ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿದರು.

ಶನಿವಾರ ಬೆಳಿಗ್ಗೆ ೧೧ ಗಂಟೆಯ ಹೊತ್ತಿಗೆ ಟ್ಯಾಂಕರ್ ಪಲ್ಟಿ ಆಗಿದ್ದು, ಪುತ್ತೂರು ಮತ್ತು ಬಂಟ್ವಾಳದಿಂದ ೨ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬಂದಿದೆ. ಅಧಿಕಾರಿಗಳನ್ನು ಒಳಗೊಂಡಂತೆ ಸುಮಾರು ೧೫ ಮಂದಿ ಅಗ್ನಿಶಾಮಕ ಸಿಬಂದಿಗಳು ಅಗತ್ಯ ಮುಂಜಾಗ್ರತಾ ಕ್ರಮ ಅನುಸರಿಸಿ ಸ್ಥಳದಲ್ಲಿ ಇದ್ದು, ಇವರಿಗೆ ಊಟೋಪಚಾದ ವ್ಯವಸ್ಥೆಗೆ ತೊಡಕು ಉಂಟಾಗಿರುತ್ತದೆ.

ಇದನ್ನು ಮನಗಂಡ ಬೆದ್ರೋಡಿ ಮಸೀದಿ ಕಾರ‍್ಯದರ್ಶಿ ಫಾರೂಕ್ ಝಿಂದಗಿ, ಶರೀಫ್ ಬಿಲ್ಡರ‍್ಸ್ ಸಂಸ್ಥೆಯ ಶರೀಫ್, ಪೈಂಟರ್ ನಿಸಾರ್ ಬೆದ್ರೋಡಿ ಇವರುಗಳು ಬೆಳಿಗ್ಗಿನ ಉಪಹಾರ, ಮಧ್ಯಾಹ್ನದ ಊಟದ ವ್ಯವಸ್ಥೆ ಹಾಗೂ ಸಂಜೆಯ ಉಪಹಾರದ ವ್ಯವಸ್ಥೆ ಮಾಡಿ ಮಾನವೀಯತೆ ಮರೆದಿದ್ದಾರೆ.

ಕಾರ್ಮಿಕರಿಗೂ ವ್ಯವಸ್ಥೆ:
ಟ್ಯಾಂಕರ್ ಪಲ್ಟಿ ಆಗಿರುವ ತುಸು ದೂರದಲ್ಲಿ ಡಾಂಬಾರು ಜಲ್ಲಿ ಮಿಶ್ರಣ ಘಟಕ ಇದ್ದು, ಸುಮಾರು ೨೦ ಮಂದಿ ಬಿಜಾಪುರ ಮೂಲದ ಕಾರ್ಮಿಕರು ಗುಡಿಸಲು ನಿರ್ಮಿಸಿ ವಾಸವಾಗಿದ್ದಾರೆ. ಗ್ಯಾಸ್ ಸೋರಿಕೆ ಹಿನ್ನೆಲೆಯಲ್ಲಿ ಈ ಪರಿಸರದಲ್ಲಿ ನಿಲ್ಲದಂತೆ, ಬೆಂಕಿ ಉರಿಸದಂತೆ ಪೊಲೀಸರು ಇವರಿಗೆ ಸೂಚನೆ ನೀಡಿದ್ದು, ಹೀಗಾಗಿ ಕಕ್ಕಾಬಿಕ್ಕಿಯಾದ ಕಾರ್ಮಿಕರಿಗೆ ಇದೇ ಯುವಕರು ಊಟೋಪಾಚಾರದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.