ಕೋಡಿಂಬಾಳ: ವೃದ್ದ ನೇಣು ಬಿಗಿದು ಆತ್ಮಹತ್ಯೆ

Puttur_Advt_NewsUnder_1
Puttur_Advt_NewsUnder_1


ಕಡಬ: ಕೋಡಿಂಬಾಳ ಗ್ರಾಮದ ನಾಕೂರು ಬಳಿ ವೃದ್ದನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.೨೮ರಂದು ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಕೋಡಿಂಬಾಳ ಗ್ರಾಮದ ಗಾಣದಕೆರೆ ನಿವಾಸಿ ತೋಮಸ್(೭೦) ಎಂದು ಗುರುತಿಸಲಾಗಿದೆ. ಇವರು ಮನೆ ಮಂದಿಯನ್ನು ಬಿಟ್ಟು ಸುಮಾರು ೩೫ ವರ್ಷಗಳ ಹಿಂದೆ ಕೇರಳಕ್ಕೆ ತೆರಳಿದ್ದರು. ಇತ್ತೀಚಿನ ವರ್ಷದಲ್ಲಿ ಊರಿಗೆ ವಾಪಾಸ್ಸಾಗಿ ಸ್ವಲ್ಪ ದಿನ ಇಲ್ಲಿ ಇದ್ದು ಮತ್ತೆ ಕೇರಳಕ್ಕೆ ತೆರಳಿದ್ದರು. ಮತ್ತೆ ಇತ್ತೀಚೆಗೆ ಮನೆಗೆ ಬಂದು ವಿಪರೀತ ಕುಡಿತದ ಚಟದೊಂದಿಗೆ ಪೇಟೆಗಳಲ್ಲಿ ತಿರುಗಾಟ ನಡೆಸುತ್ತಿದ್ದರು. ಮನೆಗೆ ಹೋಗದೆ ಪೇಟೆಯಲ್ಲಿ ಎಲ್ಲೆಂದರಲ್ಲಿ ಮಲಗಿ ದಿನ ಕಳೆಯುತ್ತಿದ್ದರು. ಶುಕ್ರವಾರ ಮನೆಗೆ ಬಂದು ಮಗನಿಂದ ಹಣಪಡೆದು ಮನೆ ಬಿಟ್ಟಿದ್ದರು. ಶನಿವಾರ ಬೆಳಿಗ್ಗೆ ಕೋಡಿಂಬಾಳದ ನಾಕೂರು ರೈಲ್ವೇ ಹಳಿಯ ಹತ್ತಿರದ ಮರದ ಕೊಂಬೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ, ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಮೃತರ ಪುತ್ರ ಸನಿಶ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಸರ್ಕಲ್ ಇನ್‌ಸ್ಪೆಕ್ಟರ್ ನಾಗೇಶ್ ಕದ್ರಿ, ಕಡಬ ಠಾಣಾಧಿಕಾರಿ ರುಕ್ಮ ನಾಯ್ಕ್ ಭೇಟಿ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.