ಮನೆಯಲ್ಲಿದ್ದುಕೊಂಡು ಭವಿಷ್ಯದ ಕನಸು ಕಟ್ಟಿಕೊಳ್ಳಿ: ಮನ್ ಕೀ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ

ಲಾಕ್ ಡೌನ್ ನಿಯಮ ಉಲ್ಲಂಘಿಸುವವರು ಕೊರೋನಾದಿಂದ ಬಚಾವ್ ಆಗಲ್ಲ: ಮನ್ ಕೀ ಬಾತ್‌ನಲ್ಲಿ ವೈದ್ಯರು, ನರ್ಸ್, ರೋಗಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು: ಲಾಕ್‌ಡೌನ್ ನಿಯಮ ಮುರಿದರೆ ಕೊರೋನ ವೈರಸ್‌ನಿಂದ ಪಾರಾಗುವುದು ಕಷ್ಟ. ಇದನ್ನು ಯುದ್ಧದ ರೀತಿಯಲ್ಲಿ ಪರಿಗಣಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದಂತೆ ಲಾಕ್‌ಡೌನ್‌ಗೆ ಕರೆ ನೀಡಿದ ಬಳಿಕ ಮೊದಲ ಬಾರಿಗೆ ಮನ್ ಕೀ ಬಾತ್‌ನಲ್ಲಿ ಮಾತನಾಡಿದ ನರೇಂದ್ರ ಮೋದಿ, ಕೊರೋನಾವನ್ನು ಇನ್ನೂ ಹಲವು ಮಂದಿ ಗಂಭೀರವಾಗಿ ಪರಿಗಣಿಸಿಲ್ಲ. ಆದ್ದರಿಂದಲೇ ಲಾಕ್‌ಡೌನ್ ಎಂಬ ಲಕ್ಷ್ಮಣ ರೇಖೆಯನ್ನು ಹಾಕಲಾಗಿದೆ. ಇದನ್ನು ದಾಟಿದರೆ ಆಪತ್ತು ಖಂಚಿತಾ. ಆದ್ದರಿಂದ ಏ. ೧೪ರವರೆಗೆ ಯಾರೂ ಕೂಡ ಮನೆಯಿಂದ ಹೊರಗಡೆ ಬಾರದಂತೆ ಮನವಿ ಮಾಡಿಕೊಂಡರು.

ಇಂದು ಯುದ್ಧದ ಪರಿಸ್ಥಿತಿಯಲ್ಲಿ ನಾವು ನಿಂತುಕೊಂಡಿದ್ದೇವೆ. ಈ ಯುದ್ಧದಲ್ಲಿ ನಾವು ಜಯ ಗಳಿಸಿಯೇ ಸಿದ್ಧ. ಇದರಲ್ಲಿ ಯಾವುದೇ ಅನುಮಾನ ಬೇಡ. ಮುಂದೆ ನಾವು ಕಷ್ಟಪಟ್ಟು ದೇಶವನ್ನು ಕಟ್ಟಬೇಕಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಲಾಕ್‌ಡೌನ್ ಘೋಷಣೆ ಆದ ಬಳಿಕ ದೇಶದಲ್ಲಿ ಹಲವರು ಕಷ್ಟದಲ್ಲಿ ಸಿಲುಕಿದ್ದಾರೆ. ಆದ್ದರಿಂದ ಕಷ್ಟದಲ್ಲಿರುವ ಬಡವರನ್ನು ಪ್ರೀತಿಯಿಂದ ಕಾಣಬೇಕಾಗಿದೆ. ಅವರ ಕಷ್ಟಗಳಿಗೆ ಸ್ಪಂದಿಸಬೇಕಾಗಿರುವುದು ಇಂದಿನ ಅಗತ್ಯ.

ಲಾಕ್‌ಡೌನ್‌ನಿಂದ ಬಡಜನರು ಆಕ್ರೋಶಗೊಂಡಿದ್ದಾರೆ ಎಂಬುದು ನನಗೆ ತಿಳಿದಿದೆ. ಇದಕ್ಕಾಗಿ ನಾನು ಕ್ಷಮೆಯನ್ನು ಯಾಚಿಸುತ್ತೇನೆ. ಆದರೆ ಕೊರೋನಾ ಮಹಾಮಾರಿಯನ್ನು ಸೋಲಿಸಲು ಲಾಕ್‌ಡೌನ್ ಬಿಟ್ಟರೆ ಬೇರೆ ದಾರಿಯೇ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಲಾಕ್‌ಡೌನ್‌ಗೆ ಕರೆ ನೀಡಲಾಗಿದೆ. ಇದನ್ನು ಭಾರತೀಯರೆಲ್ಲರೂ ಪಾಲಿಸಲೇಬೇಕಾಗಿದೆ. ಧೈರ್ಯದಿಂದ ಈ ಸಮಸ್ಯೆಯನ್ನು ಎದುರಿಸಿ, ಬಗೆಹರಿಸಿಕೊಳ್ಳುವ. ಈ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿಕೊಂಡರು.

ನಿಮ್ಮನ್ನು, ನಿಮ್ಮ ಕುಟುಂಬದವರನ್ನು ರಕ್ಷಿಸಲು ಬೇರೆ ದಾರಿಯೇ ಇಲ್ಲವಾಗಿದೆ. ಆದ್ದರಿಂದ ಮನೆಯಲ್ಲಿದ್ದುಕೊಂಡು ದೇಶದ ಭವಿಷ್ಯದ ಬಗ್ಗೆ ಆಲೋಚನೆ ಮಾಡಿ. ಇಷ್ಟದ ಪುಸ್ತಕ ಓದಿ, ಸಂಗೀತ ಅಭ್ಯಾಸ ಮಾಡಿ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.