ವಿದೇಶದಿಂದ ಬಂದವರಿಗೂ ಇತರ ರೋಗಿಗಳಿಗೂ 108 ಆಂಬುಲೆನ್ಸ್

Puttur_Advt_NewsUnder_1
Puttur_Advt_NewsUnder_1

ಕೊರೋನಾ ಪಾಸಿಟಿವ್ ಕಂಡು ಬಂದರೆ ಎಲ್ಲರಿಗೂ ಕ್ವಾರಂಟೈನ್-ಆತಂಕ

ವಿದೇಶದಿಂದ ಬಂದವರಿಗೆ ಪ್ರತ್ಯೇಕ ಆಂಬುಲೆನ್ಸ್ ವ್ಯವಸ್ಥೆಗೆ ಆಗ್ರಹ

ಪುತ್ತೂರು: ಕೊರೋನಾ ವೈರಸ್ ಸೋಂಕು ಬಹುತೇಕ ವಿದೇಶದಿಂದ ಬಂದವರ ಮೂಲಕ ಹರಡುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ವಿದೇಶದಿಂದ ಬಂದವರನ್ನು ಪರೀಕ್ಷೆಗೆ 108  ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ಕಾರ್ಯ ನಡೆಯುತ್ತಿದೆ. ಈ ನಡುವೆ ಅದೇ ಆಂಬುಲೆನ್ಸ್‌ನಲ್ಲಿ ಇತರ ರೋಗಿಗಳಿಗೂ ಸೇವೆ ನೀಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.


ವಿದೇಶದಿಂದ ಬಂದವರಿಗೆಲ್ಲಾ ಕೊರೋನಾ ಸೋಂಕು ತಗಲಿರುವುದಿಲ್ಲ. ಆದರೂ ಅವರು ಹೋಮ್ ಕ್ವಾರಂಟೈನ್‌ನಲ್ಲಿ ಇರಬೇಕು. ಈ ನಡುವೆ ಅವರ ಆರೋಗ್ಯದಲ್ಲಿ ಏರುಪೇರಾದರೆ ಅವರನ್ನು ಕರೆದೊಯ್ಯಲು 108 ಆಂಬುಲೆನ್ಸ್ ಸೇವೆ ಬೇಕಾಗುತ್ತದೆ. ಒಂದು ವೇಳೆ ಆಂಬುಲೆನ್ಸ್ ಸೇವೆ ಪಡೆದ ವ್ಯಕ್ತಿಗೆ ಕೊರೋನಾ ಸೋಂಕು ದೃಢಪಟ್ಟರೆ ಆ ಆಂಬುಲೆನ್ಸ್‌ನಲ್ಲಿ ಸೇವೆ ಪಡೆದ ಇತರ ರೋಗಿಗಳೂ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ ಎಂಬ ಆತಂಕ ಎದುರಾಗಿದೆ. ವಿದೇಶದಿಂದ ಬಂದವರನ್ನು ಮಂಗಳೂರು ವಿಮಾನ ನಿಲ್ದಾಣದಿಂದ ಕರೆದೊಯ್ಯಲು ಪ್ರತ್ಯೇಕ ಆಂಬುಲೆನ್ಸ್ ಸೇವೆ ನೀಡಲಾಗುತ್ತಿತ್ತು. ಆದರೆ ಮನೆಯಲ್ಲಿ ಕ್ವಾರಂಟೈನ್‌ನಲ್ಲಿ ಇರುವವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲು ಪ್ರತ್ಯೇಕ ಆಂಬುಲೆನ್ಸ್ ಸೇವೆ ಇಲ್ಲದೆ 108 ಆಂಬುಲೆನ್ಸ್‌ನಲ್ಲೇ ಕರೆದೊಯ್ಯಬೇಕಾಗುತ್ತದೆ. 108 ಆಂಬುಲೆನ್ಸ್‌ನ ಸೇವೆಯನ್ನು ಸಾಮಾನ್ಯವಾಗಿ ಹೆರಿಗೆ, ಹೃದಯಕ್ಕೆ ಸಂಬಂಧಿಸಿದ ಖಾಯಿಲೆಯವರು ಹೆಚ್ಚು ಪಡೆಯುತ್ತಿರುವುದಿಂದ ಯಾವುದೇ ತೊಂದರೆ ಆಗಬಾರದು ಈ ನಿಟ್ಟಿನಲ್ಲಿ ವಿದೇಶದಿಂದ ಬಂದವರಿಗೆ ಪ್ರತ್ಯೇಕ ಆಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರು ಆಗ್ರಹ ವ್ಯಕ್ತಪಡಿಸಿದ್ದಾರೆ.

ಪ್ರತ್ಯೇಕ ಆಂಬುಲೆನ್ಸ್ ಮಾಡಲಾಗುವುದು:
ವಿದೇಶದಿಂದ ಬಂದವರ ಸೇವೆಗಾಗಿ ಪ್ರತ್ಯೇಕ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗುವುದು. ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ಎಮ್‌ಆರ್‌ಪಿಎಲ್ ಸಂಸ್ಥೆಯಿಂದ ಕೊಡಮಾಡಿದ ಮತ್ತು ಎರಡು ಸರಕಾರಿ ಆಂಬುಲೆನ್ಸ್ ಇದೆ. ಇದರಲ್ಲಿ ಯಾವುದಾದರೊಂದನ್ನು ಇದಕ್ಕಾಗಿ ಪ್ರತ್ಯೇಕವಾಗಿರಿಸಲಾಗುವುದು. – -ಸಂಜೀವ ಮಠಂದೂರು, ಶಾಸಕರು ಪುತ್ತೂರು

……………………………………………………………………………

ಆಂಬುಲೆನ್ಸ್‌ನಲ್ಲಿ ಮುನ್ನೆಚ್ಚರಿಕೆ ಕ್ರಮವಿದೆ:
108 ಆಂಬುಲೆನ್ಸ್‌ನಲ್ಲಿ ಎಲ್ಲಾ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಯಾರಿಗೂ ಯಾವ ತೊಂದರೆಯೂ ಆಗುವುದಿಲ್ಲ. – -ಡಾ. ಅಶೋಕ್ ಕುಮಾರ್ ರೈ, ತಾಲೂಕು ಆರೋಗ್ಯಾಧಿಕಾರಿ

……………………………………………………………………………

ಆತಂಕ ಬೇಡ:
108 ಆಂಬುಲೆನ್ಸ್‌ನಲ್ಲಿ ಎಲ್ಲಾ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ವಿದೇಶದಿಂದ ಬಂದವರೆಲ್ಲರಿಗೂ ಕೊರೋನಾ ಸೋಂಕು ತಗಲಿರುವುದಿಲ್ಲ. ಆದರೂ ಅವರನ್ನು ಕರೆದೊಯ್ಯುವಾಗ ಎಲ್ಲಾ ಮುನ್ನೆಚ್ಚರಿಕೆ ಕ್ರಮ ವಹಿಸಲಾಗುತ್ತದೆ. ಜಿಲ್ಲಾ ಆರೋಗ್ಯಾಧಿಕಾರಿಯವರ ಮಾರ್ಗದರ್ಶನದಂತೆ ನಮ್ಮಲ್ಲಿ ಸೇವೆ ನಡೆಯುತ್ತಿದೆ. -ಮಹಾಬಲ, 108 ಆಂಬುಲೆನ್ಸ್ ಜಿಲ್ಲಾ ವ್ಯವಸ್ಥಾಪಕ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.