ಲಾಕ್‌ಡೌನ್ ಹಿನ್ನೆಲೆ: ಮನೆಗಳಿಗೆ ಉಚಿತವಾಗಿ ಅಕ್ಕಿ, ಮಾಸ್ಕ್ ವಿತರಿಸಿ ಮಾನವೀಯತೆ ಮೆರೆದ ‘ಸಮೃದ್ಧಿ ಚಂದ್ರಶೇಖರ್’

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಇಡೀ ದೇಶದಲ್ಲಿ ಲಾಕ್‌ಡೌನ್ ಹಾಕಲಾಗಿದೆ. ಲಾಕ್‌ಡೌನ್ ಪರಿಣಾಮ ಹಲವು ಕುಟುಂಬಗಳು ಆಹಾರದ ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿರುವ ವರದಿಗಳೂ ಕೆಲವು ಕಡೆಗಳಲ್ಲಿ ಕೇಳಿ ಬರುತ್ತಿದೆ. ಸಂಘ ಸಂಸ್ಥೆಗಳು ಕೆಲವು ಕಡೆಗಳಲ್ಲಿ ಜನರಿಗೆ ನೆರವು ನೀಡುತ್ತಿದ್ದಾರೆ. ಆದರೆ ಗ್ರಾಮಾಂತರ ಪ್ರದೇಶದಲ್ಲಿ ವ್ಯಕ್ತಿಯೋರ್ವರು ಸದ್ದಿಲ್ಲದೇ ಜನರ ಸಮಸ್ಯೆಗೆ ಸ್ಪಂಧಿಸುತ್ತಿದ್ದಾರೆ. ಮಾತ್ರವಲ್ಲ ಸ್ಥಳೀಯವಾಗಿ ಜನರಲ್ಲಿ ಧೈರ್ಯ ತುಂಬುವ ಕೆಲಸವನ್ನೂ ಮಾಡಿ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.
ನೈತ್ತಾಡಿ-ಕಲ್ಲಗುಡ್ಡೆ ‘ಸಮೃದ್ಧಿ’ ನಿವಾಸದ ಚಂದ್ರಶೇಖರ ಅವರೇ ಈ ತುರ್ತು ಸಂದರ್ಭದಲ್ಲಿ ಸಹಾಯ ಮಾಡುತ್ತಿರುವ ವ್ಯಕ್ತಿ. ಸುಮಾರು ೧೫ರಷ್ಟು ಮನೆಗಳಿಗೆ ಇಂತಿಷ್ಟು ಅಕ್ಕಿ ಹಾಗೂ ನೂರಾರು ಮಂದಿಗೆ ಮಾಸ್ಕ್ ವಿತರಿಸಿದ್ದಾರೆ. ಸ್ಥಳೀಯವಾಗಿ ಆಹಾರ ಕೊರತೆ ಎದುರಾಗಿ ಸಂಕಷ್ಟ ಅನುಭವಿಸುವವರು ತಮ್ಮನ್ನು ಸಂಪರ್ಕಿಸುವಂತೆಯೂ ಅವರ ಹೇಳಿಕೊಂಡಿದ್ದಾರೆ. ಸದ್ದಿಲ್ಲದೇ ಮಾಡುತ್ತಿರುವ ಇವರ ಸೇವೆ ಮಾದರಿಯಾಗಿದೆ.

ಪತ್ನಿಯ ಸಾಥ್:
ಚಂದ್ರಶೇಖರ್ ಅವರ ಪತ್ನಿ ಫ್ಯಾಶನ್ ಡಿಸೈನ್ ವಿದ್ಯೆ ಬಲ್ಲವರಾಗಿರುವ ದೀಪಿಕಾ ಅವರು ಸ್ವಯಂ ಮಾಸ್ಕ್ ತಯಾರಿಸಿ ಅವಶ್ಯವಿರುವವರಿಗೆ ಉಚಿತವಾಗಿ ನೀಡಿದ್ದಾರೆ. ಈಗಾಗಲೇ ನೂರಾರು ಮಾಸ್ಕ್ ತಯಾರಿಸಿರುವ ಇವರು ಪೊಲೀಸರಿಗೂ ಮಾಸ್ಕ್ ಹೊಲಿದು ನೀಡಿರುವುದಾಗಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.