ಉಪ್ಪಿನಂಗಡಿ ಗ್ರಾಮ ಪಂಚಾಯತಿ ಕಾರ್ಯಪಡೆ ಸದಸ್ಯರಿಂದ ಮನೆ ಮನೆಗೆ ಆಹಾರ ಸರಬರಾಜು

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಸಂಪೂರ್ಣ ಲಾಕ್ ಡೌನ್ ಹಿನ್ನೆಲೆಯಲ್ಲಿ ಆಹಾರ ಸಾಮಾಗ್ರಿ ಕೊರತೆ ಇರುವ ಮನೆಗಳಿಗೆ ಉಪ್ಪಿನಂಗಡಿ ಗ್ರಾಮ ಪಂಚಾಯತಿ ಆಹಾರ ಸಾಮಾಗ್ರಿ ಸರಬರಾಜು ಮಾಡುವ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಉಪ್ಪಿನಂಗಡಿ ಗ್ರಾಮ ಪಂಚಾಯಿತಿಯ ಕಾರ್ಯಪಡೆ ಸದಸ್ಯರುಗಳಿಗೆ ವಾರ್ಡುಗಳಿಗೆ ಸದಸ್ಯರನ್ನು ಹಂಚಲಾಗಿ, ಅವರುಗಳಿಗೆ ಸಹಾಯಕರನ್ನು ಸೇರಿಸಿಕೊಂಡು ಮನೆಗಳಿಗೆ ಭೇಟಿ ನೀಡಿ ಯಾರ ಮನೆಗೆ ಸಾಮಾಗ್ರಿ ಬೇಕು ಅವರು ಚೀಟಿ ಮಾಡಿಕೊಡಬೇಕು, ಅಂತಹ ಬೇಡಿಕೆಯ ಸಾಮಾನುಗಳನ್ನು ಈ ಕಾರ್ಯಪಡೆ ಮನೆಗೆ ತಲುಪಿಸುವ ಕೆಲಸ ಮಾಡುತ್ತಿದೆ. ಗ್ರಾಮ ಪಂಚಾಯತಿ ಕಚೇರಿಯಲ್ಲಿ ಇದಕ್ಕಾಗಿ ಪ್ರತ್ಯೇಕ ಕೌಂಟರ್ ತೆರೆಯಲಾಗಿದ್ದು, ಸಿಬ್ಬಂದಿಗಳು ಕೆಲಸದಲ್ಲಿ ನಿರತರಾಗಿದ್ದಾರೆ.‌ ಕಾರ್ಯಪಡೆ ಅಧ್ಯಕ್ಷ ಕೆ. ಅಬ್ದುಲ್ ರಹಿಮಾನ್, ಸದಸ್ಯರುಗಳಾದ ಸುರೇಶ್ ಅತ್ರಮಜಲು, ಯು.ಟಿ. ತೌಶಿಫ್, ಸುನಿಲ್ ಕುಮಾರ್, ಯು.ಕೆ. ಇಬ್ರಾಹಿಂ, ಗೋಪಾಲ ಹೆಗ್ಡೆ, ಚಂದ್ರಶೇಖರ ಮಡಿವಾಳ, ರಮೇಶ್ ಬಂಡಾರಿ, ಝರೀನಾ ಇಕ್ಬಾಲ್, ರಾಮಚಂದ್ರ ಮಣಿಯಾಣಿ ಅಗತ್ಯ ಸಾಮಾಗ್ರಿ ಪೂರೈಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.