Breaking News

ಆಲಂಕಾರು ಗ್ರಾ.ಪಂನಲ್ಲಿ ಕೊರೋನ ತಡೆ ಕಾರ್ಯಪಡೆಯ ಸಭೆ

Puttur_Advt_NewsUnder_1
Puttur_Advt_NewsUnder_1

ಖಾಸಗಿ ಕ್ಲಿನಿಕ್  ಬಂದ್‌, ಜನ ಸಾಮಾನ್ಯರಿಗೆ ತೊಂದರೆ:  ಕ್ರಮಕೈಗೊಳ್ಳುವಂತೆ ಡಿ.ಎಚ್.ಒ, ಸಹಾಯಕ ಕಮಿಷನರ್ ಗೆ ಮನವಿಗೆ ಅಗ್ರಹ


ಆಲಂಕಾರು: ಆಲಂಕಾರು ಗ್ರಾಮ ಪಂಚಾಯತ್ ನಲ್ಲಿ ಕೊರೋನ ತಡೆ ಗ್ರಾಮ ಪಂಚಾಯತ್ ಮಟ್ಟದ ಕಾರ್ಯಪಡೆ ಯ ಸಭೆಯು ಇಂದು ಮಾ.30ರಂದು ಗ್ರಾಮ ಪಂಚಾಯತ್ ಅಲಂಕಾರಿನಲ್ಲಿ ನಡೆಯಿತು. ಸಭೆಯಲ್ಲಿ ಖಾಸಗಿ ಕ್ಲಿನಿಕ್ ಗಳು ಕೊರೋನ ಸಂದರ್ಭದಲ್ಲಿ ತೆರೆಯಲು ಅವಕಾಶವಿದ್ದರು. ಖಾಸಗಿ ಕ್ಲಿನಿಕ್ ನವರು ಮುಚ್ಚಿದ್ದು ಇದರಿಂದಾಗಿ ಜನರಿಗೆ ತೊಂದರೆಯಾಗುತ್ತಿದ್ದು ಕಷ್ಟದ ಸಂದರ್ಭದಲ್ಲಿ ಸ್ಪಂದನೆ ಕೋಡದ ಖಾಸಗಿ ಕ್ಲಿನಿಕ್ ಗಳು ಸುಖ ಸಂದರ್ಭದಲ್ಲಿ ಯಾಕೆ ತೆರೆಯುವಂತಾದ್ದು ಈ ಬಗ್ಗೆ ಕ್ರಮಕೈಗೊಳ್ಳುವಂತೆ ಡಿ.ಎಚ್.ಒ ಹಾಗೂ ಸಹಾಯಕ ಕಮಿಷನರ್  ಗೆ ಮನವಿ ಸಲ್ಲಿಸಬೇಕೆಂದು ಕಾರ್ಯಪಡೆಯ ಸದಸ್ಯರು ಸಭೆಯಲ್ಲಿ ಅಗ್ರಹಿಸಿದರು. ಇದಕ್ಕೆ ಕಾರ್ಯಪಡೆಯ ಕಾರ್ಯದರ್ಶೀ ಹಾಗೂ ಪಂಚಾಯತ್ ಅಭಿವೃದ್ದಿ ಅದಿಕಾರಿ ಜಗನ್ನಾಥ ಶೆಟ್ಟಿ ಯವರು ಈ ಬಗ್ಗೆ ನಿರ್ಣಯ ಕೈಗೊಂಡು ಡಿ.ಎಚ್ .ಒ ಹಾಗೂ ಸಹಾಯಕ ಕಮಿಷನರ್ ಗೆ ಮನವಿ ಸಲ್ಲಿಸುವುದೆಂದು ತಿಳಿಸಿದರು, ಕಾರ್ಯಪಡೆಯ ಸದಸ್ಯರು ಪ್ರತಿ ಸೋಮವಾರ ಹಾಗೂ ಗುರುವಾರ ಸೇರುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಪಂಚಾಯತ್ ವತಿಯಿಂದ ಕಾರ್ಯಪಡೆಯ ಸದಸ್ಯರಿಗೆ ಪಾಸ್ ನೀಡಲಾಯಿತು. ಪಂಚಾಯತ್ ಮಟ್ಟದ ನೂತನ 18 ಮಂದಿಯ ಗ್ರಾಮ ಪಂಚಾಯ್ ಅಧ್ಯಕ್ಷರನ್ನೊಳಗೊಂಡ ನೂತನ ಕಾರ್ಯಪಡೆಯನ್ನು ರಚಿಸಲಾಯಿತು.

ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷ ಸದಾನಂದ ಆಚಾರ್ಯ, ತಾ.ಪಂ. ಸದಸ್ಯೆ ತಾರ.ಕೆ ಪಂಚಾಯತ್ ಸದಸ್ಯರಾದ ಇಂದುಶೇಖರ ಶೆಟ್ಟಿ ಕುಕ್ಕೇರಿ, ಸುಧಾಕರ ಪೂಜಾರಿ ಕಲ್ಲೇರಿ, ಕೇಶವ ಗೌಡ ಅಲಡ್ಕ, ಆಲಂಕಾರು ಬೀಟ್ ಪೋಲಿಸ್ ಮೋನಪ್ಪ, ಕಿರಿಯ ಆರೋಗ್ಯ ಸಹಾಯಕಿ ಸರೋಜಿನಿ, ಅಶಾಕಾರ್ಯಕರ್ತೆ ಡೀಕಮ್ಮ ಹಾಗೂ ಪಂಚಾಯತ್ ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದು ವಿವಿಧ ಸಲಹೆ ಸೂಚನೆ ನೀಡಿದರು . ಪಂಚಾಯತ್ ಅಬಿವೃದ್ದಿ ಅಧಿಕಾರಿ ಜಗನ್ನಾಥ ಶೆಟ್ಟಿ ಸರಕಾರ ಸುತ್ತೂಲೆಯನ್ನು ಸಭೆಗೆ ತಿಳಿಸಿ ನೂತನ ಕಾರ್ಯಪಡೆ ರಚಿಸುವ ಬಗ್ಗೆ ತಿಳಿಸಿ ಸಭೆಗೆ ತಿಳಿಸಿ ಧನ್ಯವಾದ ಸಮರ್ಪಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.