ಕೊರೋನಾ ವೈರಸ್ ಹಿನ್ನಲೆ- ಕಾಣಿಯೂರಿನಲ್ಲಿ ದಿನಸಿ ಅಂಗಡಿ ವರ್ತಕರ ಸಭೆ, ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ನಡೆಸಿ- ಪಿಡಿಓ ಸೂಚನೆ

Puttur_Advt_NewsUnder_1
Puttur_Advt_NewsUnder_1

ಚಿತ್ರ: ಸುಧಾಕರ್ ಕಾಣಿಯೂರು

ಕಾಣಿಯೂರು: ಕೊರೋನಾ ವೈರಸ್ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ದ.ಕ ಜಿಲ್ಲೆಯಾಧ್ಯಂತ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಮಾಡಲು ಜಿಲ್ಲಾಡಳಿತ ಆದೇಶಿದ್ದು, ಇದೀಗ ಮಾ 31ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 3 ಗಂಟೆಯವರೆಗೆ ದಿನಸಿ, ಅಗತ್ಯ ವಸ್ತುಗಳ ವಿತರಣೆಗೆ ಜಿಲ್ಲಾಡಳಿತದ ಸೂಚನೆ ಮೇರೆಗೆ ಅವಕಾಶ ನೀಡಿರುವ ಹಿನ್ನಲೆಯಲ್ಲಿ ಕಾಣಿಯೂರು ಗ್ರಾ.ಪಂ, ವ್ಯಾಪ್ತಿಯ ಚಾರ್ವಾಕ, ಕಾಣಿಯೂರು, ದೋಳ್ಪಾಡಿ, ಪುಣ್ಚತ್ತಾರು, ನಾಣಿಲ ದಿನಸಿ ಅಂಗಡಿಗಳ ವರ್ತಕರ ಸಭೆಯು ಕಾಣಿಯೂರು ಗ್ರಾ.ಪಂ, ಸಭಾಂಗಣದಲ್ಲಿ ಮಾ 30ರಂದು ನಡೆಯಿತು.

ಸಭೆಯಲ್ಲಿ ಮಾತನಾಡಿದ ಕಾಣಿಯೂರು ಗ್ರಾ.ಪಂ, ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಅವರು, ಜನಸಾಮಾನ್ಯರಿಗೆ ದಿನಸಿ, ಅಗತ್ಯ ವಸ್ತುಗಳ ವಿತರಣೆ ಮಾಡುವ ಬಗ್ಗೆ ದಿನಸಿ ವ್ಯಾಪರಸ್ಥರ ಸಭೆಯನ್ನು ಕರೆಯಲಾಗಿದ್ದು, ವ್ಯಾಪರ ನಡೆಸುವ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಬಾಕ್ಸ್‌ಗಳನ್ನು ಮಾಡಿಕೊಂಡು ದಿನಸಿ ವಸ್ತುಗಳನ್ನು ಪಡೆದುಕೊಳ್ಳಲು ಅವಕಾಶ ಮಾಡಿಕೊಡಬೇಕು. ಪಂಚಾಯತ್ ಪರವಾನಿಗೆಯಿರುವ ದಿನಸು ವ್ಯಾಪರಸ್ಥರಿಗೆ ದಿನಸಿ ಸಾಗಾಟನೆಗೆ ಪಂಚಾಯತ್‌ನಿಂದ ಪಾಸ್ ನೀಡಲಾಗುವುದು. ಈ ಪಾಸನ್ನು ಸಂಬಂಧಪಟ್ಟ ಪೇಟೆಯಿಂದ ದಿನಸಿ ಸಾಮಾನು ಸಾಗಾಟನೆಗೆ ಮಾತ್ರ ಉಪಯೋಗಿಸಬೇಕೆ ಹೊರತು, ಬೇರೆ ಉದ್ದೇಶಕ್ಕೆ ಉಪಯೋಗಿಸಿದ್ದಲ್ಲಿ ಶಿಸ್ತು ಕ್ರಮಕೈಗೊಳ್ಳಲಾಗುತ್ತದೆ. ವ್ಯಾಪಾರ ನಡೆಸುವ ಸಂದರ್ಭದಲ್ಲಿಯೂ ನೂಕುನುಗ್ಗಲಿಗೆಗೆ ಅವಕಾಶ ಮಾಡಿಕೊಡಬಾರದು ಎಂದರು. ಈ ಸಂದರ್ಭದಲ್ಲಿ ಕಾಣಿಯೂರು ಗ್ರಾ.ಪಂ, ಅಧ್ಯಕ್ಷೆ ಮಾಧವಿ ಕೋಡಂದೂರು, ಸದಸ್ಯರಾದ ಗಣೇಶ್ ಉದುನಡ್ಕ, ಸುರೇಶ್ ಓಡಬಾಯಿ, ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿದ್ಯಾ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆನಂದ ಗೌಡ ಮೇಲ್ಮನೆ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ ಹಾಗೂ ಕಾಣಿಯೂರು, ಚಾರ್ವಾಕ, ದೋಳ್ಪಾಡಿ, ನಾಣಿಲ ದಿನಸಿ ಅಂಗಡಿ ಮಾಲಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.