ಜನ ನಿಯಂತ್ರಣದೊಂದಿಗೆ ಮಾಸ್ಕ್ ತೊಡಿಸಿದರು !

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಲಾಕ್‌ಡೌನ್ ನಿರ್ಬಂಧ ಸಡಿಲಿಕೆಯಿಂದ ಮಾ.31ರಂದು ಉಪ್ಪಿನಂಗಡಿಯಲ್ಲಿ ಜನ ಜಂಗುಳಿ ಕಂಡು ಬಂದಿದ್ದು, ಇದರ ನಿಯಂತ್ರಣ ನಡುವೆಯೇ ಉಪ್ಪಿನಂಗಡಿ ಪೊಲೀಸ್ ಸಿಬ್ಬಂದಿ ಭಿಕ್ಷುಕಿಯೋರ್ವರಿಗೆ ಮಾಸ್ಕ್ ಧರಿಸುವ ಮೂಲಕ ಜಾಗೃತಿ ಮೂಡಿಸಿದರು.
ಉಪ್ಪಿನಂಗಡಿ ಪೊಲೀಸ್ ಠಾಣಾ ಸಿಬ್ಬಂದಿ ನಿವೇದಿತಾ ಅವರು ಬಸ್ ನಿಲ್ದಾಣ ಬಳಿಯ ವೃತ್ತದ ಬಳಿ ಕರ್ತವ್ಯದಲ್ಲಿದ್ದು, ವಾಹನ, ಜನರನ್ನು ನಿಯಂತ್ರಿಸುತ್ತಿದ್ದರು. ಈ ಸಂದರ್ಭ ಭಿಕ್ಷುಕಿಯೋರ್ವರು ಮಾಸ್ಕ್ ಇಲ್ಲದೆ ಅಲ್ಲಿಗೆ ಬಂದಿದ್ದನ್ನು ಕಂಡ ಅವರು ಕೂಡಲೇ ತನ್ನ ಬಳಿಯಿದ್ದ ಮಾಸ್ಕೊವೊಂದನ್ನು ತಂದು ಅವರ ಮುಖಕ್ಕೆ ತೊಡಿಸಿದರಲ್ಲದೆ, ಕೊರೊನಾ ವೈರಸ್ ಹಾಗೂ ಅದು ಹರಡದಂತೆ ತೆಗೆದುಕೊಳ್ಳಬೇಕಾದ ಮುಂಜಾಗೃತೆ ಬಗ್ಗೆ ಅವರಿಗೆ ತಿಳಿ ಹೇಳಿದರು. ಕೆಲಸದ ಒತ್ತಡದ ನಡುವೆಯೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಇಂತಹ ಕಾರ್ಯ ಅಭಿನಂದನಾರ್ಹವಾಗಿದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.