Breaking News

ಎಲ್ಲಾ ಮಸೀದಿಗಳಲ್ಲಿ ಧ್ವನಿವರ್ಧಕದ ಮೂಲಕ ಪ್ರತಿದಿನ ಕೊರೊನಾ ಜಾಗೃತಿ ಪ್ರಕಟಿಸುವಂತೆ ಡಿಸಿ ಆದೇಶ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಮಸೀದಿಗಳಲ್ಲಿ ಧ್ವನಿವರ್ಧಕದ ಮೂಲಕ ಪ್ರತಿದಿನ ಪ್ರಕಟಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ಸಿಂಧು ರೂಪೇಶ್ ಆದೇಶಿಸಿದ್ದಾರೆ.


ದ.ಕ.ಜಿಲ್ಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಸಾರ್ವಜನಿಕರು ಮುಕ್ತವಾಗಿ ಬೆರೆಯುವುದನ್ನು ಅನಿವಾರ್ಯವಾಗಿ ತಡೆಯಬೇಕಾದ ಹಿನ್ನಲೆಯಲ್ಲಿ ಅವಶ್ಯಕ ಸಾಮಾಗ್ರಿಗಳನ್ನು ಪೂರೈಸುವ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅಗತ್ಯವಿರುತ್ತದೆ. ರಾಜ್ಯದ ಮಸೀದಿಗಳ ಆಡಳಿತ ಸಮಿತಿಗಳಿಗೆ ತಮ್ಮ ತಮ್ಮ ಮಸೀದಿಗಳಲ್ಲಿ ತಮ್ಮ ಮೊಹಲ್ಲಾದ ಜನರಿಗೆ ಅಧಿಕೃತ ತ್ರಿಭಾಷಾವನ್ನು ಧ್ವನಿ ವರ್ಧಕಗಳ ಮುಖಾಂತರ ಸಾರ್ವಜನಿಕರಿಗೆ ಅರಿವು ಮೂಡಿಸಲು ಪ್ರತಿದಿನ ಮುಂಜಾನೆ 10 ಗಂಟೆಗೆ, ಸಂಜೆ 4 ಗಂಟೆಗೆ, ಸಂಜೆ 6 ಗಂಟೆಗೆ ಹಾಗೂ ರಾತ್ರಿ 8 ಗಂಟೆಗೆ ಹೀಗೆ ಒಟ್ಟು ದಿನದಲ್ಲಿ ಕನಿಷ್ಟ ನಾಲ್ಕು ಬಾರಿ ಪ್ರಕಟಿಸುವಂತೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಕಾರ್ಯನಿರ್ವಹಣಾಧಿಕಾರಿಯ ಸೂಚನೆಯಂತೆ ದ.ಕ.ಜಿಲ್ಲಾಧಿಕಾರಿಯವರು ಆದೇಶ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.