ಪ್ರತಿಯೊಬ್ಬ ವ್ಯಕ್ತಿಯೂ ಮಾಸ್ಕ್ ಧರಿಸುವ ಅಗತ್ಯ ಇಲ್ಲ – ಆರೋಗ್ಯ ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರ ಸ್ಪಷ್ಟನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೊನಾ ವೈರಸ್ ಹರಡುವಿಕೆ ಹಿನ್ನಲೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಮಾಸ್ಕ್ ಧರಿಸಬೇಕಾದ ಅಗತ್ಯ ಇರುವುದಿಲ್ಲ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ  ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿರುವ ವ್ಯಾಪಾರಿ ಮಳಿಗೆಗಳು, ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಸಂಸ್ಥೆಗಳ ಆಡಳಿತ ವರ್ಗ, ವ್ಯವಸ್ಥಾಪಕರು ಮಾಸ್ಕ್ ಧರಿಸುವಂತೆ ಜನಸಾಮಾನ್ಯರನ್ನು ಒತ್ತಾಯಿಸುತ್ತಿರುವುದು ತಿಳಿದುಬಂದಿದೆ. ಯಾರು ಮಾಸ್ಕ್ ಧರಿಸಬೇಕು ಎನ್ನುವ ಬಗ್ಗೆ ಈಗಾಗಲೇ ಸುತ್ತೋಲೆ ಹಾಗೂ ಸೂಚನೆಗಳ ಮೂಲಕ ಸರಕಾರ ಸ್ಪಷ್ಟನೆ ನೀಡಿದ್ದು ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು ಎಂಬ ನಿಯಮ ಇಲ್ಲ ಎಂದು ಹೇಳಿದೆ.

ಯಾರು ಮಾಸ್ಕ್ ಧರಿಸಬೇಕು: ಶೀತ, ಕೆಮ್ಮು, ಜ್ವರ ಅಥವಾ ಉಸಿರಾಟದ ತೊಂದರೆಯಂತಹ ಯಾವುದೇ ರೋಗ ಲಕ್ಷಣಗಳಿರುವ ವ್ಯಕ್ತಿ ಮಾಸ್ಕ್ ಧರಿಸಬೇಕು. ಶಂಕಿತ ಅಥವಾ ಖಚಿತ ಕೋವಿಡ್೧೯ ವ್ಯಕ್ತಿಯ ನಿಗಾ ವಹಿಸುತ್ತಿರುವ ಸಂದರ್ಭದಲ್ಲಿ ಮಾಸ್ಕ್ ಧರಿಸಬೇಕು. ಉಸಿರಾಟದ ತೊಂದರೆ ಇರುವಂತಹ ರೋಗಿಗಳ ಸೇವೆಯಲ್ಲಿ ತೊಡಗಿಕೊಂಡಿರುವ ಆರೋಗ್ಯ ಕಾರ್ಯಕರ್ತರು ಮಾಸ್ಕ್ ಧರಿಸಬೇಕು.

ಮಾಸ್ಕ್ ಮಾದರಿ: ಕೋವಿಡ್ ಶಂಕಿತರು ಅಥವಾ ಕೋವಿಡ್ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿರುವವರು ಅಥವಾ ರೋಗಿಗಳ ನಿಗಾ ವಹಿಸುತ್ತಿರುವವರು ಎನ್-೯೫ ಮಾಸ್ಕ್ ಧರಿಸಬೇಕು. ರೋಗಿಗಳ ಚಿಕಿತ್ಸೆ ಅಥವಾ ಆರೈಕೆಯಿಂದ ಹೊರತುಪಡಿಸಿದ ಉಳಿದವರು ಮೂರು ಪದರಗಳ ಸರ್ಜಿಕಲ್ ಮಾಸ್ಕ್ ಧರಿಸಬೇಕು ಎಂದು ಇಲಾಖಾ ಆಯುಕ್ತರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.