ಪಾಣಾಜೆ ಸುಬೋಧ ಪ್ರೌಢಶಾಲಾ ಮುಖ್ಯ ಗುರು ಎಸ್.ಕೆ ನಾರಾಯಣ ವಯೋನಿವೃತ್ತಿ

Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ; ಶಿಕ್ಷಕ ವೃತ್ತಿಯಲ್ಲಿ ಸುಮಾರು 38 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ಪಾಣಾಜೆ ಸುಬೋಧ ಪ್ರೌಢಶಾಲೆಯ ಮುಖ್ಯ ಗುರು ಎಸ್.ಕೆ.ನಾರಾಯಣರವರು ಮಾರ್ಚ್.31 ರಂದು ವಯೋನಿವೃತ್ತಿ ಹೊಂದಿದರು.
    ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಪಾಲ್ತಮೂಲೆ ಎಸ್.ಎಸ್.ಕೇಶವ ಭಟ್ ಮತ್ತು ಮುಕಾಂಬಿಕಾ ದಂಪತಿಗಳ ಪುತ್ರರಾದ ಇವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಪಡ್ರೆ ಸಮೀಪದ ಸ್ವರ್ಗ  ಸ್ವಾಮಿ ವಿವೇಕಾನಂದ ಹೈಯರ್ ಪ್ರೈಮರಿ ಶಾಲೆಯಲ್ಲಿ ಮುಗಿಸಿದರು.ನಂತರ ಪಿ.ಯು.ಸಿ ವಿದ್ಯಾಭ್ಯಾಸ ಮತ್ತು ಗಣಿತ, ವಿಜ್ಞಾನ ವಿಷಯದಲ್ಲಿ ಬಿ.ಎಸ್.ಸಿ ಪದವಿ ವಿದ್ಯಾಭ್ಯಾಸವನ್ನು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ 1980 ರಲ್ಲಿ ಮುಗಿಸಿದರು.1981 ರಲ್ಲಿ ಮಂಗಳೂರಿನ ಸರಕಾರಿ ಶಿಕ್ಷಕ ಶಿಕ್ಷಣ ವಿದ್ಯಾಲಯದಲ್ಲಿ ಬಿ.ಎಡ್ ಪದವಿ ಪಡೆದರು.
     1982 ರಿಂದ  ಶಿಕ್ಷಕ ವೃತ್ತಿ ಆರಂಭ: ಕಾಸರಗೋಡಿನ ಏತಡ್ಕ ಪ್ರಾಥಮಿಕ ಶಾಲೆಯಲ್ಲಿ 1982 ರಿಂದ 85 ರತನಕ ಶಿಕ್ಷಕರಾಗಿ ಕರ್ತವ್ಯ.  ಅಲ್ಲಿಂದ ಕಲ್ಲಡ್ಕ ಶ್ರೀ ರಾಮ ಪ್ರೌಢಶಾಲೆಯಲ್ಲಿ 1985 ರಿಂದ 89 ರತನಕ ಗಣಿತ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದರು. ಪುನಃ ಅಲ್ಲಿಂದ ವರ್ಗಾವಣೆ ಗೊಂಡು ತನ್ನ ಮಾತೃ ಶಾಲೆ ಪಾಣಾಜೆ ಸುಬೋಧ ಪ್ರೌಢಶಾಲೆಯಲ್ಲಿ  1989 ರಿಂದ 2013 ರತನಕ ಗಣಿತ, ವಿಜ್ಞಾನ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು.ನಂತರ 2013 ರಿಂದ 2020 ಮಾರ್ಚ್ ವರೆಗೆ ಇದೇ  ಸುಬೋಧ ಪ್ರೌಢಶಾಲೆಯಲ್ಲಿ ಭಡ್ತಿಹೊಂದಿ ಮುಖ್ಯ ಶಿಕ್ಷಕರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿ ಇದೀಗ ಮಾರ್ಚ್.31 ರಂದು ತನ್ನ ವಯೋನಿವೃತ್ತಿ ಹೊಂದಿದರು.
ತಾನು ಕಲಿತ ಪ್ರೌಢಶಾಲೆಯಲ್ಲಿ ಸಹಶಿಕ್ಷಕನಾಗಿ ಇದೀಗ ಮುಖ್ಯ ಶಿಕ್ಷಕನಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದು ನನಗೆ ಹೆಮ್ಮೆಯ ವಿಚಾರ ಎಂದು ಸಂತಸ ವ್ಯಕ್ತಪಡಿಸುತ್ತಾರೆ. ಪತ್ನಿ ಪ್ರಶಾಂತರೊಂದಿಗೆ ಆರ್ಲಪದವಿನಲ್ಲಿ ನೆಲೆಸಿರುವ ಇವರ ಎಂಜಿನಿಯರಿಂಗ್ ಪದವಿ ಪಡೆದ ಅವಳಿ ಪುತ್ರರಾದ ಅಕ್ಷಯ ಬೊಂಬಾಯಿಯಲ್ಲಿ ಮತ್ತು ಅಶ್ರಯ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.