ಕೊರೋನ ಆತಂಕ: ಕೆದಂಬಾಡಿ ಗ್ರಾಪಂ ಅಧ್ಯಕ್ಷ ಪ್ರವೀಣ್ ಶೆಟ್ಟಿಯವರಿಂದ ಬಡವರಿಗೆ ಅಕ್ಕಿ ವಿತರಣೆ

Puttur_Advt_NewsUnder_1
Puttur_Advt_NewsUnder_1
  • ತುರ್ತು ಅಗತ್ಯಗಳಿಗೆ ನನ್ನನ್ನು ಸಂಪರ್ಕಿಸಿ, ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ ಅಧ್ಯಕ್ಷರು

ಪುತ್ತೂರು: ವಿಶ್ವವನ್ನೇ ತಲ್ಲಣಿಸಿದ ಮಹಾಮಾರಿ ಕೊರೋನ ಕೋವಿಡ್ ೧೯ ಸೋಂಕು ಹರಡದಂತೆ ಸರಕಾರ ಲಾಕ್‌ಡೌನ್‌ಗೆ ಆದೇಶ ನೀಡಿತ್ತು. ದಕ್ಷಿಣ ಕನ್ನಡ ಜಿಲ್ಲಾಡಳಿತ ಮೂರು ದಿನಗಳ ಸಂಪೂರ್ಣ ಬಂದ್ ಮಾಡಿಸಿತ್ತು. ಇದರಿಂದ ಗ್ರಾಮದ ಬಡ ಜನತೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕೆದಂಬಾಡಿ ಗ್ರಾಪಂ ಅಧ್ಯಕ್ಷರು ವಿಶೇಷ ಮುತುವರ್ಜಿ ವಹಿಸಿಕೊಂಡಿದ್ದಾರೆ. ಗ್ರಾಪಂ ಟಾಸ್ಕ್‌ಫೋರ್ಸ್ ಕಾರ್ಯಪಡೆಯ ಮೂಲಕ ಗ್ರಾಮದ ಪ್ರತಿ ಮನೆ ಮನೆಗೆ ಹೋಗಿ ಕೊರೋನ ಜಾಗೃತಿ ಕರಪತ್ರ ಹಂಚುವ ಕೆಲಸವನ್ನು ಕಳೆದ ಕೆಲವು ದಿನಗಳಿಂದ ಮಾಡಲಾಗುತ್ತಿದೆ. ತುರ್ತು ಸೇವೆಗಳಿಗೆ ನನ್ನನ್ನು ಸಂಪರ್ಕಿಸಿ ಎಂದು ಗ್ರಾಪಂ ಅಧ್ಯಕ್ಷ ಪ್ರವೀಣ್ ಶೆಟ್ಟಿಯವರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಶೇರ್ ಮಾಡಿಕೊಂಡಿದ್ದರು. ಇದೀಗ ಅದಕ್ಕಿಂತಲೂ ಸ್ವಲ್ಪ ಮುಂದೆ ಹೋಗಿ ಗ್ರಾಮದ ಬಡಕುಟುಂಬಗಳಿಗೆ ಅಕ್ಕಿ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.


ಸ್ವತಃ ಖರ್ಚಿನಿಂದ ಬಡವರಿಗೆ ಅಕ್ಕಿ ವಿತರಣೆ
ಪ್ರವೀಣ್ ಶೆಟ್ಟಿಯವರು ತನ್ನ ಸ್ವತಃ ಖರ್ಚಿನಿಂದ ಅಕ್ಕಿ ವಿತರಿಸುತ್ತಿದ್ದಾರೆ. ಗ್ರಾಮದ ಬಡ ಕೂಲಿ ಕಾರ್ಮಿಕರನ್ನು ಗುರುತಿಸಿ ಅವರಿಗೆ ಪ್ರಥಮವಾಗಿ ತಲಾ ೫ ಕೆ.ಜಿ ಅಕ್ಕಿಯನ್ನು ನೀಡಿದ್ದಾರೆ. ಹೆಚ್ಚಿನ ಮಂದಿ ದಿನದ ಕೂಲಿ ಮಾಡಿ ಅದರಲ್ಲಿ ಸಿಗುವ ಹಣದಿಂದ ಅಕ್ಕಿ ಇತರೆ ದಿನಸಿ ಸಾಮಾಗ್ರಿಗಳನ್ನು ಖರೀದಿಸಿ ಜೀವನ ನಡೆಸುವರರೇ ಆಗಿದ್ದಾರೆ. ಹೀಗಿರುವಾಗ ಕಳೆದ ಕೆಲವು ದಿನಗಳಿಂದ ಕೂಲಿ ಇಲ್ಲದೆ ಹೆಚ್ಚಿನವರು ಮನೆಯಲ್ಲೇ ಬಾಕಿಯಾಗಿದ್ದಾರೆ. ಇದರಿಂದ ಬಹುತೇಕ ಮಂದಿಗೆ ಒಂದು ತುತ್ತಿನ ಊಟಕ್ಕೂ ಸಂಕಷ್ಟ ಎದುರಾಗಿದೆ. ಆದರೆ ಅದನ್ನು ಅವರು ಯಾರಲ್ಲೂ ಹೇಳಿಕೊಳ್ಳುತ್ತಿಲ್ಲ. ಈ ಬಗ್ಗೆ ಪ್ರವೀಣ್ ಶೆಟ್ಟಿಯವರು ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯವರ ಜೊತೆ ತೆರಳಿ ಮನೆಯ ಪರಿಸ್ಥಿತಿಯನ್ನು ಅವಲೋಕನ ಮಾಡಿದ್ದು ಅಲ್ಲದೆ ಅವರಿಗೆ ಕೊರೋನ ವೈರಸ್ ಜಾಗೃತಿ ಅರಿವನ್ನು ಮೂಡಿಸುವ ಕೆಲಸ ಕೂಡ ಮಾಡುತ್ತಿದ್ದಾರೆ.

ಪ್ರಥಮ ಹಂತದಲ್ಲಿ 15 ಮನೆಗಳಿಗೆ ವಿತರಣೆ
ಕೆದಂಬಾಡಿ ಗ್ರಾಮದಲ್ಲಿ ಪ್ರಥಮ ಹಂತವಾಗಿ ಸುಮಾರು ೧೪ ಮನೆಗಳಿಗೆ ತಲಾ ೫ ಕೆ.ಜಿಯಂತೆ ಅಕ್ಕಿಯನ್ನು ವಿತರಿಸಿದ್ದಾರೆ. ಸ್ವತಃ ಪ್ರತಿ ಮನೆಗೆ ತೆರಳಿ ಮನೆಯವರೊಂದಿಗೆ ಕಷ್ಟಸುಖ ಮಾತನಾಡುವ ಮೂಲಕ ಅಕ್ಕಿ ವಿತರಣೆ ಮಾಡಿದ್ದಾರೆ. ಮುಂದಿನ ಹಂತದಲ್ಲಿ ಇನ್ನಷ್ಟು ಕುಟುಂಬಗಳಿಗೆ ಅಕ್ಕಿ ವಿತರಣೆ ಮಡುವ ಯೋಜನೆ ಇಟ್ಟುಕೊಂಡಿದ್ದಾರೆ. ಗ್ರಾಮದಲ್ಲಿ ತೀರಾ ಬಡವರಿರುವ ಬಗ್ಗೆ ಮಾಹಿತಿ ನೀಡಿದ್ದಲ್ಲಿ ಅವರಿಗೆ ದಿನಸಿ ಸಾಮಗ್ರಿಗಳನ್ನು ಪೂರೈಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಗ್ರಾಮದಲ್ಲಿ ಅದೆಷ್ಟೋ ಮಂದಿ ಶ್ರೀಮಂತರಿದ್ದಾರೆ ಆದರೆ ಸಂಕಷ್ಟದ ಸಮಯದಲ್ಲಿ ಸ್ಪಂದನೆ ನೀಡುವವನೇ ನಿಜವಾದ ಶ್ರೀಮಂತ. ಆ ಮನಸ್ಸು ಎಲ್ಲರಲ್ಲಿ ಬರಬೇಕಾಗಿದೆ. ಪ್ರವೀಣ್ ಶೆಟ್ಟಿಯವರು ಮಾಡುತ್ತಿರುವುದು ಪುಟ್ಟ ಕೆಲಸವಾದರೂ ಈ ಸಮಯದಲ್ಲಿ ದೊಡ್ಡ ಕಾರ್ಯವಾಗಿದೆ ಎನ್ನುವುದು ಪ್ರಜ್ಞಾವಂತರ ಮಾತುಗಳಾಗಿವೆ.

………………………………………
ರಾಜಕೀಯವಾಗಿ ಯಾವುದನ್ನು ಮಾಡಿಲ್ಲ. ಒಬ್ಬ ಗ್ರಾಪಂ ಅಧ್ಯಕ್ಷನ ನೆಲೆಯಲ್ಲಿ ಗ್ರಾಮದ ಜನರ ಸಂಕಷ್ಟಕ್ಕೆ ಸ್ಪಂದನೆ ನೀಡಿದ್ದೇನೆ. ಕೊರೋನ ಆತಂಕದ ನಡುವೆ ನನ್ನ ಕೈಯಿಂದ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡಿದ್ದೇನೆ. ಗ್ರಾಮದ ಯಾರೂ ಕೂಡ ಹಸಿದು ಕೂರಬಾರದು ಎನ್ನುವ ನಿಟ್ಟಿನಲ್ಲಿ ಅಕ್ಕಿ ಕೊಡುವ ಕೆಲಸ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕುಟುಂಬಕ್ಕೆ ಅಕ್ಕಿ ನೀಡುವ ಕೆಲಸ ಮಾಡಲಿದ್ದೇನೆ. ಗ್ರಾಮದ ಯವುದೇ ತುರ್ತು ಅಗತ್ಯಗಳಿಗೆ ನನ್ನನ್ನು ನೇರವಾಗಿ ಸಂಪರ್ಕಿಸಬಹುದು ಅಥವಾ ದೂರವಾಣಿ ಮುಖಾಂತರ ಸಂಪರ್ಕಿಸಿದರೆ ಸಹಾಯ ಮಾಡಲು ಸದಾ ಸಿದ್ದನಿದ್ದೇನೆ.   – ಪ್ರವೀಣ್ ಶೆಟ್ಟಿ ತಿಂಗಳಾಡಿ, ಅಧ್ಯಕ್ಷರು ಕೆದಂಬಾಡಿ ಗ್ರಾಪಂ, ಮೊ: 9483353444

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.