ದಿನಸಿ, ಅಗತ್ಯ ವಸ್ತುಗಳ ಖರೀದಿಗೆ ಅವಕಾಶ- ಕಾಣಿಯೂರು ಪೇಟೆಯಲ್ಲಿ ಫುಲ್ ರಶ್

Puttur_Advt_NewsUnder_1
Puttur_Advt_NewsUnder_1

ಕಾಣಿಯೂರು: ಕೊರೋನಾ ವೈರಸ್ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶದಲ್ಲಿಯೇ ಲಾಕ್‌ಡೌನ್ ಮಾಡಲಾಗಿದೆ. ದ.ಕ ಜಿಲ್ಲೆಯಲ್ಲಿ ಎರಡು ದಿನಗಳ ಸಂಪೂರ್ಣ ಬಂದ್ ಬಳಿಕ ಮಾ 31ರಂದು ಬೆಳಿಗ್ಗೆ ೬ಗಂಟೆಯಿಂದ ಮಧ್ಯಾಹ್ನ 3ರ ತನಕ ದಿನಸಿ ಸಾಮಾಗ್ರಿ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟಕ್ಕೆ ಜಿಲ್ಲಾಡಳಿತ ಅವಕಾಶ ನೀಡಿರುವ ಹಿನ್ನಲೆಯಲ್ಲಿ ಕಾಣಿಯೂರು ಪೇಟೆಯಲ್ಲಿ ವಸ್ತುಗಳ ಖರೀದಿಗೆ ಅಂಗಡಿಗಳ ಮುಂದೆ ಜಮಾಯಿಸಿದ್ದು, ಪೇಟೆಯಲ್ಲಿ ಜನಜಂಗುಳಿಯೇ ಕಾಣಿಸತೊಡಗಿತ್ತು. ಜನರು ತಮ್ಮ ವಾಹನಗಳೊಂದಿಗೆ ಆಗಮಿಸಿದ್ದರಿಂದ ವಾಹನಗಳ ಸಂಚಾರವೂ ಹೆಚ್ಚಾಗಿದ್ದವು. ಬೆಳಗ್ಗಿನಿಂದಲೇ ಹಲವಾರು ಮಂದಿ ವಸ್ತುಗಳ ಖರೀದಿಗೆ ಅಂಗಡಿಗಳ ಮುಂದೆ ಜಮಾಯಿಸಿತೊಡಗಿದರು.

ಮಾಸ್ಕ್ ಧರಿಸಿ: ಸಾಮಾಜಿಕ ಅಂತರ ಕಾಯ್ದುಕೊಳ್ಳಿ- ಈ ಸಂದರ್ಭದಲ್ಲಿ ಕಾಣಿಯೂರಿಗೆ ಆಗಮಿಸಿದ ಬೆಳ್ಳಾರೆ ಪೋಲಿಸ್ ಇಲಾಖೆಯಿಂದ ಧ್ವನಿವರ್ಧಕದ ಮೂಲಕ ಅಗತ್ಯ ವಸ್ತುಗಳ ಖರೀದಿ ಸಂದರ್ಭದಲ್ಲಿ ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ವಿನಂತಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.