ಗ್ರಾಮಾಂತರ ಪ್ರದೇಶದಲ್ಲಿ ಅಗತ್ಯ ವಸ್ತುಗಳ ಕೊರತೆ, ನಿರಾಶೆಗೊಂಡ ಗ್ರಾಹಕರು

ಪುತ್ತೂರು: ದ.ಕ. ಜಿಲ್ಲೆಯಲ್ಲಿ ಕಳೆದ ಮೂರು ದಿನಗಳ ಬಂದ್‌ನಿಂದ ಕಂಗೆಟ್ಟಿದ್ದ ಜನ ಮಾ.31ರಂದು ಲಾಕ್ ಡೌನ್ ಸಡಿಲಿಕೆ ಮಾಡಿ ಬೆಳಿಗ್ಗೆ 6ರಿಂದ ಸಂಜೆ 3ರ ತನಕ ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿತ್ತು.
ಗ್ರಾಮಾಂತರ ಪ್ರದೇಶಗಳಲ್ಲಿ ಜನ ಬೆಳಿಗ್ಗೆ 6 ಗಂಟೆಗೆ ಅಂಗಡಿ ಎದುರು ಕ್ಯೂ ನಿಂತು ಅಗತ್ಯ ಸಾಮಾಗ್ರಿಗಳನ್ನು ಖರೀಸುವ ದೃಶ್ಯ ಕಂಡು ಬಂತು. ಆದರೆ ಕೆಲವು ಕಡೆಗಳಲ್ಲಿ ಅಂಗಡಿಗಳಲ್ಲಿ ಗ್ರಾಹಕರಿಗೆ ಬೇಕಾದ ಕೆಲವು ಅಗತ್ಯ ವಸ್ತುಗಳು ದೊರೆಯದೆ ನಿರಾಶೆಯಿಂದ ಮನೆಗೆ ತರಳಿದ ಘಟನೆಯೂ ನಡೆದಿದೆ.

ಎಲ್ಲಿಯೂ ಅಗತ್ಯ ವಸ್ತುಗಳ ಅಂಗಡಿಗಳು ಮಾತ್ರ ತೆರೆದಿತ್ತು ವಿನ: ಇತರ ಅಂಗಡಿಗಳನ್ನು ತೆರೆಯದೆ ಜಿಲ್ಲಾಡಳಿತದ ಆದೇಶವನ್ನು ವರ್ತಕರು ಪಾಲಿಸಿ ಕೊರೋನಾ ತಡೆಗೆ ಸರಕಾರದ ಜೊತೆ ಕೈ ಜೋಡಿಸಿದ್ದಾರೆ.


ಜನ ಸಂಚಾರ ವಿರಳ: ಗ್ರಾಮೀಣ ಪ್ರದೇಶದಲ್ಲಿ ಜನ ಸಂಚಾರ ವಿರಳವಾಗಿತ್ತು. ಅಗತ್ಯ ವಸ್ತುಗಳನ್ನು ಖರೀದಿಸಲು ಕುಟುಂಬದ ಒಬ್ಬ ವ್ಯಕ್ತಿ ಮಾತ್ರ ಅಂಗಡಿಗೆ ಬರಬೇಕೆಂಬ ಜಿಲ್ಲಾಡಳಿತದ ಆದೇಶವನ್ನು ಜನ ಪಾಲಿಸಿದ್ದಾರೆ ಎಂಬುದ ಇಲ್ಲಿ ಎದ್ದು ಕಾಣುತ್ತಿತ್ತು. ಬಸ್ಸು, ಬಾಡಿಗೆ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಿದ್ದರಿಂದ ಸ್ವಂತ ವಾಹನ ಇಲ್ಲದವರು ಅಗತ್ಯ ವಸ್ತುಗಳನ್ನು ಹೊತ್ತುಕೊಂಡು ಉರಿ ಬಿಸಿಲಿನ ಬೇಗೆಯನ್ನು ಲೆಕ್ಕಿಸದೆ ಮನೆಗೆ ನಡೆದುಕೊಂಡ ಹೋಗುತ್ತಿರುವುದು ಕಂಡು ಬಂತು. ಪುತ್ತೂರು ನಗರದ ಹೊರ ವಲಯದ ಮೊಟ್ಟೆತ್ತಡ್ಕದಲ್ಲಿ ಬೆಳಿಗ್ಗಿನಿಂದಲೇ ಜನ ಸರತಿ ಸಾಲಿನಲ್ಲಿ ನಿಂತು ಸಾಮಾಜಿಕ ಅಂತರ ಕಾಯ್ದುಕೊಂಡು ಅಗತ್ಯ ಸಾಮಾಗ್ರಿಗಳನ್ನು ಖರೀದಿಸಿದರು. ಆದರೂ ಇಲ್ಲಿ ಕೆಲವು ಅಂಗಡಿಯಲ್ಲಿ ಪೊಲೀಸರು ಸ್ಥಳದಲ್ಲಿ ನಿಂತು ಗೊಂದಲವಿಲ್ಲದೆ ಸಾಮಾಗ್ರಿ ವಿತರಿಸಿದ ದೃಶ್ಯ ಕಂಡು ಬಂತು.

ರಖಂ ಮಾರಾಟಗಾರರಲ್ಲಿ ಅಗತ್ಯ ವಸ್ತುಗಳು ಸಿಗಲಿಲ್ಲ: ಪುತ್ತೂರಿನಲ್ಲಿ ರಖಂ ಮಾರಾಟದ ಅಂಗಡಿಗಳಲ್ಲಿ ನಮಗೆ ಬೇಕಾದ ಅಗತ್ಯ ವಸ್ತುಗಳು ಸಿಗಲಿಲ್ಲ. ಇದರಿಂದ ಗ್ರಾಹಕರ ಬೇಡಿಕೆಯ ಅಗತ್ಯ ವಸ್ತುಗಳನ್ನು ನೀಡಲು ಸಾಧ್ಯವಾಗಿಲ್ಲ. ಇದಕ್ಕೆ ಸರಕಾರ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಗ್ರಾಮೀಣ ಪ್ರದೇಶದ ವರ್ತಕರು ತಮ್ಮ ಅಳಲನ್ನು ಮಾಧ್ಯಮದ ಜೊತೆ ತೋಡಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.