ಕಾಲ್ನಡಿಗೆಯಲ್ಲಿ ಊರಿಗೆ ಹೊರಟ ಕೊಪ್ಪಳ ಜಿಲ್ಲೆಯ ಕಾರ್ಮಿಕರು: ಪೌರಾಯುಕ್ತೆ ರೂಪಾ ಶೆಟ್ಟಿಯವರಿಂದ ರಕ್ಷಣೆ

Puttur_Advt_NewsUnder_1
Puttur_Advt_NewsUnder_1

ಕಾಲ್ನಡಿಗೆಯಲ್ಲಿ ಊರಿಗೆ ಹೊರಟ ಕೊಪ್ಪಳ ಜಿಲ್ಲೆಯ ಕಾರ್ಮಿಕರು
ಪೌರಾಯುಕ್ತೆ ರೂಪಾ ಶೆಟ್ಟಿಯವರಿಂದ ರಕ್ಷಣೆ

ಪುತ್ತೂರು: ಕೊರೋನಾ ಭೀಕರತೆಯಿಂದಾಗಿ ಅನ್ನ ನೀರು ಇಲ್ಲದೆ ಕಂಗೆಟ್ಟ ಕೊಪ್ಪಳ ಜಿಲ್ಲೆಯ 6 ಮಂದಿ ಗಂಡರು, 6 ಮಂದಿ ಹೆಂಗಸರು, 6 ಮತ್ತು ಮಕ್ಕಳು ಸೇರಿದಂತೆ 23 ಮಂದಿ ಕಾರ್ಮಿಕರು ಭಯದಿಂದ ತುತ್ತಿನ ಚೀಲ ತುಂಬಿಸಲು ಬಲ್ನಾಡು ರಸ್ತೆಯಾಗಿ ಬೈಪಾಸ್‌ಗೆ ತಲುಪುತ್ತಿದ್ದಂತೆ ಮಾಹಿತಿ ಅರಿತ ಪುತ್ತೂರು ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿಯವರು ಅವರನ್ನು ರಕ್ಷಣೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.


ಕೊಪ್ಪಳ ಜಿಲ್ಲೆಯವರಾದ 23 ಮಂದಿ ಕಾರ್ಮಿಕರು ಕೊಡಿಪ್ಪಾಡಿ ಸಮೀಪ ಅರ್ತಿಪದವು ಗೇರು ತೋಪಿನಲ್ಲಿ ಟೆಂಟ್‌ಹಾಕಿ ಗುತ್ತಿಗೆದಾರರ ಅಡಿಯಲ್ಲಿ ಗೇರುಬೀಜ ಹೆಕ್ಕುವ ಕೆಲಸ ಮಾಡುತ್ತಿದ್ದು, ಇದೀಗ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದೆ ಊಟಕ್ಕೂ ಗತಿಯಿಲ್ಲದೆ ಊರಿಗೆ ಹೊರಡಲು ತಿರ್ಮಾನಿಸಿದ್ದರು. ಮಾ.31ರಂದು ಕಾರ್ಮಿಕರು ಬಲ್ನಾಡು ರಸ್ತೆಯಾಗಿ ಬೈಪಾಸ್ ತಲುಪುತ್ತಿದ್ದಂತೆ ಪೌರಾಯುಕ್ತೆ ರೂಪಾ ಶೆಟ್ಟಿಯವರು ಸ್ಥಳಕ್ಕೆ ಬಂದು ಕಾರ್ಮಿಕರ ಮನವೊಲಿಸಿ ದಣಿದ ಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್‌ನಲ್ಲಿ ಊಟೋಪಚಾರ ಮಾಡಿಸಿ ದಾನಿಗಳ ಮೂಲಕ ಸುಮಾರು 50 ಕೆ.ಜಿ ಅಕ್ಕಿ ಇತರ ದಿನಸಿ ಸಾಮಾಗ್ರಿಗಳನ್ನು ಕೊಡಿಸಿ ನಗರಸಭೆ ಜೀಪಿನಲ್ಲಿ ಕಾರ್ಮಿಕರನ್ನು ಮತ್ತೆ ಕೊಡಿಪ್ಪಾಡಿ ಅರ್ತಿಪದವಿಗೆ ಬಿಡುವ ಮೂಲಕ ಕಾರ್ಮಿಕರ ರಕ್ಷಣೆ ಮಾಡಿದ್ದಾರೆ. ಕಾರ್ಮಿಕರು ಊರಿಗೆ ಹೋಗುವುದನ್ನು ಅರಿತ ತಹಶೀಲ್ದಾರ್ ರಮೇಶ್ ಬಾಬು ಇಂದಿರಾ ಕ್ಯಾಂಟೀನ್‌ಗೆ ಬಂದು ಕಾರ್ಮಿಕರ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದು ಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಗಸರಭೆ ಪರಿಸರ ಅಭಿಯಂತರ ಗುರುಪ್ರಸಾದ್ ಶೆಟ್ಟಿ, ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.