Home_Page_Advt
Home_Page_Advt
Home_Page_Advt
Home_Page_Advt

 “ಗೃಹ ಬಂಧ(ನ) ಕೊರೋನಕ್ಕೆ ಮದ್ದು” – ಡಾ. ರಾಜರಾಮ್ ಕೆ.ಬಿ  B.D.S ದಂತ ವೈದ್ಯರು

Puttur_Advt_NewsUnder_1
Puttur_Advt_NewsUnder_1

 
ಕೊರೋನ ಎಂಬ ಮಹಾಮಾರಿ ಭಾರತ ಸೇರಿದಂತೆ ವಿಶ್ವವ್ಯಾಪಿಯಾಗಿ ಮರಣ ಮೃದಂಗ ಭಾರಿಸುತ್ತಿದೆ. “ನೀನ್ಯಾರಿಗಾದೆಯೋ ಎಲೆ ಮಾನವ” ಎಂಬಂತೆ ಅಟ್ಟಹಾಸದಿಂದ ರಣಕೇಕೆ ಹಾಕುವಂತೆ ಭಾಸವಾಗುತ್ತಿದೆ.
ಮಾನವ ವೈಜ್ಞಾನಿಕವಾಗಿ ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಿದ್ದರೂ ಕಣ್ಣಿಗೆ ಕಾಣದ ಈ ವೈರಾಣುವಿನ ಮುಂದೆ ಮಂಡಿಯೂರಿ ಸೋತು ಹೈರಾಣದಂತಾಗಿದೆ.
ಸಾವು ಬದುಕಿನ ಹೋರಾಟದ ಪರಿಸ್ಥಿತಿಯಲ್ಲಿದ್ದಾನೆ. ಈ COVID-19 ಜೊತೆಗೆ ಅಮೂಲ್ಯ ಸಂದೇಶವೂ ಜಗತ್ತಿಗೆ ರವಾನೆಯಾದಂತಾಗಿದೆ.ಯಾವುದೇ ಸಂಪತ್ತು ಸೌಭಾಗ್ಯಗಳಿಗಿಂತ ಅತೀ ಡೊಡ್ಡದೆಂದರೆ “ಆರೋಗ್ಯ” . ಆರೋಗ್ಯವೇ ನಮ್ಮ ಭಾಗ್ಯ, ನಮ್ಮೀ ದೇಹವೇ ಅತಿ ದೊಡ್ಡ ಸಂಪತ್ತು. ಇದನ್ನು ಅತೀ ಜಾಗರೂಕತೆಯಿಂದ ನಾವು ಕಾಪಾಡಿಕೊಳ್ಳಬೇಕು. 
ಕೊರೋನ ( covid-19) ಅತೀ ವೇಗವಾಗಿ ಸಂಖ್ಯಾವೃಧ್ದಿ ಮಾಡುವ ಹಾಗೇಯೆ ಅತೀ ವೇಗವಾಗಿ ಸೋಂಕು ಹರಡುವ ವೈರಾಣುವಾಗಿದೆ. ಇದನ್ನು ತಡೆಗಟ್ಟುವ ಪ್ರಮುಖ ವಿಧಾನವೇ ” ಸಾಮಾಜಿಕ ಅಂತರ ” ಕಾಯ್ದು ಕೊಳ್ಳುವುದಾಗಿದೆ. [ Maintaing Social Distance ] ಇದಕ್ಕಾಗಿಯೇ ಪ್ರತಿಯೊಬ್ಬರಲ್ಲೂ ವಿನಂತಿ ಮಾಡುವುದೆಂದರೆ ಕಡ್ಡಾಯವಾಗಿ ನಿಮ್ಮ ನಿಮ್ಮ ಮನೆಯಲ್ಲೇ ವಾಸ್ತವ್ಯವಾಗಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಿ. ಇಂಥ ವಿಷಮ ಪರಿಸ್ಥಿತಿಯಲ್ಲಿ ನೀವು ಮಾಡುವಂತಹ ಬಲು ದೊಡ್ಡ ಸಮಾಜ ಸೇವೆಯೂ ಇದೇ ಆಗಿದೆ.ಜೊತೆಗೆ ನಿಮ್ಮ ಸ್ವಚ್ಚತೆಯನ್ನು ಕಾಪಾಡಿಕೊಳ್ಳಿ. ದಿನಕ್ಕೆರೆಡು ಬಾರಿ ಶುಚಿಯಾಗಿ ಸ್ನಾನ ಮಾಡಿ.
ಆಗಾಗ್ಗೆ ಕೈ ತೊಳೆದು ಕೊಳ್ಳಿ. ಕೈಯಿಂದ ಬಾಯಿ, ಮುಖ, ಕಣ್ಣು, ಮೂಗು ಮುಟ್ಟುವುದನ್ನು ಮತ್ತು ತುರಿಸಿಕೊಳ್ಳುವುದನ್ನು ಮಾಡಬೇಡಿ. ಈ ಎಲ್ಲಾ ಭಾಗಗಳಿಂದ ವೈರಾಣು  ದೇಹವನ್ನು ಸುಲಭವಾಗಿ ಪ್ರವೇಶಿಸಬಲ್ಲದು ಮನೆಯ ಒಳಗೆ,ಹೊರಾಂಗಣವನ್ನು ಶುಚಿಯಾಗಿಡಿ. ಶೌಚಾಲಯವನ್ನು ಆಗಾಗ್ಗೆ ಶುಚಿಗೊಳಿಸುತ್ತಿರಿ.
“ಗೃಹ ಬಂಧನ” ದಿಂದ ನೀವು ವಿಭಿನ್ನ ಜೀವನ ಶೈಲಿಗೆ ಒಗ್ಗಿಕೊಳ್ಳಲು ಚಡಪಡಿಸುತ್ತಿರಬಹುದು.ಆದರೆ ಗೃಹಬಂಧನವೆಂಬುದನ್ನು ಗೃಹಬಾಂಧವ್ಯವಾಗಿ ಪರಿಗಣಿಸಿದರೆ ಅನಿವಾರ್ಯವಾಗಿ ಬಂದ ಈ ಪರಿಸ್ಥಿತಿ ಆಹ್ಲಾದಕರವಾಗಬಹುದು.
ನೀವು ಕೃಷಿಕರಾಗಿದ್ದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಇದು ಬೇಸಿಗೆಯ ಸಮಯವಾದ್ದರಿಂದ ತೋಟಗಳಿಗೆ ನೀರುಣಿಸುವ  ಸಂದರ್ಭವಾಗಿದೆ.ದಿನಪೂರ್ತಿ ತೋಟದಲ್ಲಿದ್ದು  ನೀರು ಹರಿಸಿ ತೋಟವನ್ನು ಸಮೃಧ್ದಿಗೊಳಿಸಬಹುದು. ನಿಮ್ಮ ಮನಸ್ಸು, ದೇಹವನ್ನು ಹಗುರಗೊಳಿಸಬಹುದು. ತೋಟದಲ್ಲಿ ಸಿಗುವ ಪರಿಶುದ್ಧ ಗಾಳಿ ,ವ್ಯಾಯಾಮದಿಂದ, ವ್ಯಾಯಾಮ – ಪ್ರಾಣಾಯಾಮಗಳೆರಡು ದೊರೆತು ಶರೀರ ಪುಳಕಿತಗೊಂಡು ಆರೋಗ್ಯ ವೃಧ್ದಿಸುತ್ತದೆ ಹಾಗೂ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃಧ್ದಿಸುತ್ತದೆ. ಒಂದೊಮ್ಮೆ ರೋಗದಿಂದ ಸೋಂಕಿತರಾದರೂ ಆದರಿಂದ  ಶೀಘ್ರವಾಗಿ ಗುಣಮುಖರಾಗುವ ಶಕ್ತಿ ನಿಮಗೆ ಬರುತ್ತದೆ. ಉದ್ವೇಗ , ಒತ್ತಡ, ಭಯದ ವಾತವರಣದಲ್ಲಿ ದಿನ ಕಳೆಯಬೇಡಿ.
ಇದು ನಮಗೆ ಮಾತ್ರವಲ್ಲ ಈ ಲೋಕಕ್ಕೆ ಬಂದ ಕಂಟಕವೆಂದು ಭಾವಿಸಿ ಪೃಜ್ಙಾವಂತರಾಗಿ, ಜಾಣತನದಿಂದ, ಧೈರ್ಯವಾಗಿ ಇದನ್ನು ಎದುರಿಸೊಣ.ಇದಲ್ಲದೇ ಬೇರೆ ಬೇರೆ ಉತ್ತಮ ಹವ್ಯಾಸಗಳಾದ ಪುಸ್ತಕ ಓದುವುದು, ಲೇಖನ ಬರೆಯುವುದನ್ನು ರೂಡಿಸಿಕೊಳ್ಳಿ.ನಿಮ್ಮಿಂದ ಬರುವ ಉತ್ತಮ ಸಮಾಜಮುಖಿ ಲೇಖನಗಳು ಓದುಗರ ಜೀವನದಲ್ಲಿ ಬೆಳಕು ಚೆಲ್ಲಬಹುದು, ಹತ್ತಾರು ಮಂದಿಗೆ ದಾರಿ ದೀಪವಾಗಬಹುದು.
ಇದಲ್ಲದೇ ಮುಖ್ಯವಾಗಿ ಹೆತ್ತವರೊಂದಿಗೆ, ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯಲು ಸುದೀರ್ಘ ಆವಕಾಶವೆಂದು ಭಾವಿಸಿ ಉಭಯ ಕುಶಲೋಪರಿಯೊಂದಿಗೆ ಕಾಲ ಕಳೆಯಿರಿ. 
ಕೊನೆಯದಾಗಿ ನಾಗರಿಕ ಮಿತ್ರರಗೆ ಈ ರೋಗದ  ಬಗ್ಗೆ ನಾನು ತಿಳಿದು ಕೊಂಡಿರುವ ಸಪ್ತಸೂತ್ರಗಳನ್ನು ತಿಳಿಯಪಡಿಸುತ್ತೇನೆ.
1) ಕೊರೋನ ಒಂದು ಸಾಂಕ್ರಾಮಿಕ ಖಾಯಿಲೆ .ಸೂಕ್ತ ಮುಂಜಾಗ್ರತೆಯಿಂದ ಖಾಯಿಲೆಗೊಳಗಾದವರು ಗುಣಮುಖರಾಗುತ್ತಾರೆ. ನಿರ್ಲಕ್ಷ್ಯದಿಂದ ಇದು ಮಾರಣಾಂತಿಕ ವಾಗಬಹುದು. ಆದ್ದರಿಂದ ಖಾಯಿಲೆಯ ಬಗ್ಗೆ ನಿರ್ಲಕ್ಷ್ಯವೂ ಬೇಡ , ಭಯವೂ ಬೇಡ.
2) ದಿನಕ್ಕೆರಡು ಬಾರಿ ಶುಚಿಯಾಗಿ ಸ್ನಾನ ಮಾಡುವುದರಿಂದ ಆಗಾಗ್ಗೆ ಕೈತೊಳೆಯುವುದರಿಂದ ಸೋಂಕು ಹರಡುವುದನ್ನು ತಡೆಗಟ್ಟಬಹುದು.
3) ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುದು.ಮುಖವನ್ನು ಮಾಸ್ಕ್ ಅಥವಾ ಬಟ್ಟೆಯಿಂದ ಮುಚ್ವಿಕೊಳ್ಳುವುದರಿಂದ ಕೆಮ್ಮುವಾಗ / ಸೀನುವಾಗ ಬರುವ ಹನಿಗಳನ್ನು ತಡೆಯುತ್ತದೆ.
4) ಸ್ಯಾನಿಟೈಸರ್ ಅಥವಾ ಸಾಬೂನನ್ನು ಶುಚಿತ್ವಕ್ಕೆ ಬಳಸಿಕೊಳ್ಳಿ. ನಾವು ಕಡ್ಡಾಯವಾಗಿ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಮನೆಗೆ ಬಂದಾಗ ತನ್ನ ಬಟ್ಟೆಗಳನ್ನು ಪ್ರತ್ಯೇಕಿಸಿ ತೊಳೆದು ನಂತರ ಶುಚಿಯಾಗಿ ಸ್ನಾನ ಮಾಡಿ ಮನೆಯ ಸದಸ್ಯರೊಂದಿಗೆ ಬೆರೆಯುವುದು.
5) ಸರಕಾರದ ಅಥವಾ ಆರೋಗ್ಯ ಇಲಾಖೆಯ ಆದೇಶಗಳನ್ನು ತಪ್ಪದೇ ಪಾಲಿಸಿ.ಇದನ್ನು ಉಲ್ಲಂಘಿಸಿ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳಬೇಡಿ.
6) ಸರಳ ಜೀವನ ಶೈಲಿ, ಸರಳ ಆಹಾರ ಪದ್ಧತಿ ರೂಡಿಸಿಕೊಳ್ಳಿ, ಇದರಿಂದಾಗಿ ನಾವು ಆಹಾರ ಸಾಮಾಗ್ರಿಗಳನ್ನು ಹಿತಮಿತವಾಗಿ ದೀರ್ಘ ಅವಧಿಗೆ ಬಳಸಬಹುದು.ಅನಗತ್ಯವಾಗಿ ಆಗಾಗ್ಗೆ ಪೇಟೆಗೆ ಹೋಗುವುದನ್ನು ತಪ್ಪಿಸಿಕೊಳ್ಳಬಹುದು.
7) ಮುಖ್ಯವಾಗಿ ( Stay Home) , ಮನೆಯಲ್ಲೇ ವಾಸ್ತವ್ಯವಿದ್ದು ಸಹಕರಿಸಿದರೆ ಅದೇ ನಾವು ಮಾಡುವ ದೊಡ್ಡ ಚಿಕಿತ್ಸೆ ಮತ್ತು ದೊಡ್ಡ ಸಮಾಜ ಸೇವೆ.ಹೀಗೆ ಮಾಡುವುದರಿಂದ ಸೋಂಕಿನ ಸರಪಳಿಯನ್ನು ತುಂಡರಿಸಬಹುದು.ಮತ್ತು ಕೊರೋನಕ್ಕೆ ಅಂತ್ಯ ಹಾಡಬಹುದು.
ಈ ರೋಗದ ಅತೀ ವೇಗವಾಗಿ ಹರಡುವಿಕೆ ಮತ್ತು ಇಷ್ಟರವರೆಗೆ ಯಾವುದೇ ಲಸಿಕೆ ಅಥವಾ ಗುಣಪಡಿಸುವ ಔಷಧೀಯ ಸಂಶೋಧನೆಯಾಗದ್ದರಿಂದ ನಾವು ವೈದ್ಯರೂ ಕೂಡಾ ಕೋವಿಡ್ -19 ಚಿಕಿತ್ಸೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲಾಗದ್ದಕ್ಕೆ ವಿಷಾದವಿದೆ. ಅಗತ್ಯ ಮುಂಜಾಗ್ರತಾ ಸಲಕರಣೆಗಳ ಕೊರತೆಯೂ ಒಂದು ದೊಡ್ಡ ಸಮಸ್ಯೆಯಾಗಿದೆ.
ದಂತ ವೈದ್ಯರಂತೂ ಸೋಂಕಿತರಾಗುವ ಆವಕಾಶ ಜಾಸ್ತಿ, ಹಾಗೆಯೇ ದಂತ ಚಿಕಿತ್ಸಾಲಯಗಳಲ್ಲಿ ಇತರರಿಗೆ ಸೋಂಕು ಹರಡಲು ಅನುಕೂಲಕರವೆಂದು ಭಾವಿಸಿ ಸರಕಾರವೇ ಚಿಕಿತ್ಸಾಲಯಗಳನ್ನು ಮುಚ್ವಲು ಆದೇಶ ಹೊರಡಿಸಿರುತ್ತದೆ.ಇದರಿಂದಾಗಿ ನಾವು ದಂತ ವೈದ್ಯರು ಚಿಕಿತ್ಸಾಲಯಗಳನ್ನು ಮುಚ್ಚುವ ಅನಿವಾರ್ಯ ಪರಿಸ್ಥಿತಿ ಒದಗಿದೆ.ತೀರಾ ನೋವಿನಿಂದ ಬಳಲುವವರ ಪೋನ್ ಕರೆ ಬಂದಾಗ ನಮಗೂ ನೋವಾಗುತ್ತದೆ ಆದರೆ ನಾವು ಅಸಹಾಯಕರಾಗಿದ್ದೆವೆ.ಸಮಾಜಿಕ ಜವಾಬ್ದಾರಿಯ ಜೊತೆಗೆ ನಮ್ಮ ವೈಯಕ್ತಿಕ ಅನಿವಾರ್ಯತೆಗಳನ್ನು ಗಮನದಲ್ಲಿಡಬೇಕಾಗುತ್ತದೆ. ಪೋನ್ ಮುಖಾಂತರವೇ ಕೆಲವು ಮಾತ್ರೆಗಳನ್ನು ಸೇವಿಸುವಂತೆ ಸಲಹೆ ಕೊಡುತ್ತಿದ್ದೇವೆ. ಆ ಮಾತ್ರೆಗಳನ್ನು ಔಷಧಿ ಅಂಗಡಿಗಳಿಂದ ಪಡೆದುಕೊಂಡು ನಿಗದಿತ ಅವಧಿಗೆ ಸೇವಿಸಬಹುದು. ಪರಿಸ್ಥಿತಿ ಎಲ್ಲ ಸರಿಹೋದ ಮೇಲೆ ಅಗತ್ಯ ಇರುವ ಎಲ್ಲಾ ಚಿಕಿತ್ಸೆಗಳನ್ನು ದಂತ ವೈದ್ಯರಿಂದ ಪಡೆಯಬಹುದು. ಕೊನೆಯದಾಗಿ ಸಾರ್ವಜನಿಕ ಬಂಧುಗಳಲ್ಲಿ ನನ್ನ ವಿನಂತಿ ಏನೆಂದರೆ, ಈ ಕೊರೋನವೆಂಬ ಮಹಾ ಮಾರಿಯ ಪ್ರವೇಶವೆಂಬ ತುರ್ತು ಪರಿಸ್ಥಿತಿಯಲ್ಲಿದ್ದೇವೆ. ಈ ಸಂದರ್ಭದಲ್ಲಿ ನಾವೆಲ್ಲ ಈ ದೇಶದ ಪ್ರಜ್ಙಾವಂತ , ಜವಾಬ್ದಾರಿಯುತ ನಾಗರಿಕರಾಗಿ ವರ್ತಿಸಿ , ಸರಕಾರ ,ಆರೋಗ್ಯ ಇಲಾಖೆ ಹೊರಡಿಸಿದ ಸೂಚನೆಗಳನ್ನು ತಪ್ಪದೇ ಪಾಲಿಸೋಣ, ಸರಳ ಜೀವನ ಪದ್ದತಿ ರೂಪಿಸಿಕೊಂಡು ಜಾಣ್ಮೆಯಿಂದ  ಹೆಜ್ಜೆ ಇಡೋಣ, ಈ ಮಹಾಮಾರಿಯನ್ನು ಹೊಡೆದೋಡಿಸೋಣ, ನಮ್ಮ ದೇಶಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಬಂದಂತಹ ಈ ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಬಂದು ನಮ್ಮ ಉಜ್ಜ್ವಲ ಭವಿಷ್ಯಕ್ಕೆ ನಾಂದಿ ಹಾಡೋಣ…
 
ಡಾ. ರಾಜರಾಮ್ ಕೆ.ಬಿ  B.D.S
ದಂತ ವೈದ್ಯರು
ಗಿರಿಜಾ ದಂತ ಚಿಕಿತ್ಸಾಲಯ
ಲಕ್ಷ್ಮಿ ಕಾಂಪ್ಲೆಕ್ಸ್ , ಉಪ್ಪಿನಂಗಡಿ.
Mo.9448625780
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

  1. sadhu poojary

    ಸಮಯೋಚಿತ, ಸಂದರ್ಭೋಚಿತ ಬರಹ ಹಾಗೂ ಸಲಹೆಗಳು. ವಂದನೆಗಳು ವೈದ್ಯರಿಗೆ.

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.