Home_Page_Advt
Home_Page_Advt
Home_Page_Advt
Home_Page_Advt

ಅನಗತ್ಯ ವಾಹನದಲ್ಲಿ ತಿರುಗಾಟ – ಪೊಲೀಸರ ತಾಳ್ಮೆ ಕೆಡಿಸುತ್ತಿರುವ ಜನತೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಪೇಟೆಯಲ್ಲಿ ವಾಹನಗಳ ಸಂಚಾರವನ್ನು ನಿಯಂತ್ರಿಸಲು ಪೊಲೀಸರು ಎ.7ರಂದು ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದ್ದಾರೆ. ಅನಗತ್ಯವೆಂದು ಕಂಡುಬಂದ ಯಾವುದೇ ವಾಹನಗಳನ್ನೂ ನಗರ ಪ್ರವೇಶಕ್ಕೆ ಪೊಲೀಸರು ಅವಕಾಶ ನೀಡುತ್ತಿಲ್ಲ. ಆದರೆ ಹಳೆಯ ಮೆಡಿಕಲ್ ಚೀಟಿಗಳನ್ನು, ಆನ್‌ಲೈನ್ ಪಾಸ್‌ಗಳನ್ನು ತೋರಿಸಿ ಅನಗತ್ಯ ಸುತ್ತಾಟ ಮಾಡುತ್ತಿರುವವರೇ ಪೊಲೀಸರ ತಾಳ್ಮೆ ಕೆಡಿಸುತ್ತಿರುವುದು ಕಂಡು ಬಂದಿದೆ.


ಬೊಳುವಾರು, ದರ್ಬೆ ವೃತ್ತ ಹಾಗೂ ಸುಳ್ಯದಿಂದ ಪುತ್ತೂರು ಪೇಟೆ ಪ್ರವೇಶಿಸುವ ದರ್ಬೆ ಬೈಪಾಸ್ ರಸ್ತೆಯಲ್ಲಿ ಪೊಲೀಸರು ಬ್ಯಾರಿಕೇಟ್ ಅಳವಡಿಸಿ ಬಿಗು ಬಂದೋಬಸ್ತ್ ಮಾಡಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ವಾಹನಗಳ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡ ಬಳಿಕ ಇದೀಗ ಗ್ರಾಮೀಣ ಭಾಗದಿಂದ ದಿನಸಿ ಅಂಗಡಿಗಳಿಗೆ ಬರುವ ಗ್ರಾಹಕರ ಸಂಖ್ಯೆ ವಿರಳವಾಗಿದೆ. ಆಟೋರಿಕ್ಷಾ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಮಧ್ಯಾಹ್ನದ ತನಕ ಅವಕಾಶ ನೀಡಲಾಗಿದ್ದರೂ, ಅಗನತ್ಯ ಸಂಚಾರಕ್ಕೆ ನಿಯಂತ್ರ ಹೇರಳಾಗಿತ್ತು. ನಗರದಲ್ಲಿ ಮೆಡಿಕಲ್, ತರಕಾರಿ ಹಣ್ಣುಹಂಪಲುಗಳ ಅಂಗಡಿಗಳಲ್ಲಿ ಜನರು ಕಂಡುಬರುತ್ತಿದ್ದರು. ಆನ್ ಲೈನ್ ಪಾಸುಗಳನ್ನು ವಾಹನಗಳಿಗೆ ಅಂಟಿಸಿಕೊಂಡು ಬರುವ ಹಾಗೂ ಹಳೆಯ ಮೆಡಿಕಲ್ ಚೀಟಿಗಳನ್ನು ಹಿಡಿದುಕೊಂಡು ಬರುವ ಜನತೆ ಪೊಲೀಸರ ತಾಳ್ಮೆ ಕೆಡಿಸುತ್ತಿರುವುದು ಕಂಡು ಬಂತು.

ಖಾಸಗಿ ವಾಹನ ನಿಷೇಧ:
ಪೇಟೆಯಲ್ಲಿ ಖಾಸಗಿ ವಾಹನಗಳನ್ನು ಸಂಪೂರ್ಣ ನಿಯಂತ್ರಿಸುವ ಕೆಲಸಕ್ಕೆ ಪೊಲೀಸರು ಮುಂದಾಗಿದ್ದು, ಈ ನಡುವೆ ಖಾಸಗಿ ವಾಹನಗಳಿಗೆ ಆನ್‌ಲೈನ್ ಪಾಸ್ ಕೂಡಾ ಲಭ್ಯವಾಗದೇ ಇರುವುದು ಮತಷ್ಟು ವಾಹನ ನಿಯಂತ್ರಣಕ್ಕೆ ಪೊಲೀಸರಿಗೆ ಸಹಕಾರಿಯಾಗಿದೆ. ಪೇಟೆ ಸಂಪರ್ಕವನ್ನು ಹೊಂದಿದ ಬೊಳುವಾರು, ದರ್ಬೆ ವೃತ್ತ, ಪರ್ಲಡ್ಕ ಬೈಪಾಸ್ ಹಾಗೂ ದರ್ಬೆಯ ಬೈಪಾಸ್ ರಸ್ತೆ ಬಳಿ ಬ್ಯಾರಿಕೇಟ್ ಅಳವಡಿಸಲಾಗಿದ್ದು, ಅನಗತ್ಯವಾಗಿ ಆಗಮಿಸುವವರನ್ನು ಇಲ್ಲಿಂದಲೇ ವಾಪಸ್ ಕಳುಹಿಸುವ ಕೆಲಸ ಪೊಲೀಸರು ಮಾಡುತ್ತಿದ್ದಾರೆ. ತೀರಾ ಅತ್ಯಗತ್ಯ ಎಂದು ಕಂಡುಬಂದರೆ ಮಾತ್ರ ಅಂತವರಿಗೆ ನಗರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.