Home_Page_Advt
Home_Page_Advt
Home_Page_Advt
Home_Page_Advt

ಆಸ್ತಿ ತೆರಿಗೆ ಮೇಲಿನ ಶೇ.5 ರಿಯಾಯಿತಿ ಸೌಲಭ್ಯ ಕಾಲಾವಧಿ ವಿಸ್ತರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾ ಸೋಂಕು ನಿಯಂತ್ರಣಕ್ಕಕಾಗಿ ಎ.14ರ ತನಕ ನಿಷೇದಾಜ್ಞೆ/ಲಾಕ್‌ಡೌನ್ ಜಾರಿಯಲ್ಲಿದ್ದ ಹಿನ್ನಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಆಸ್ತಿ ತೆರಿಗೆ ಮೇಲೆ ಒದಗಿಸಲಾಗುವ ಶೇ.5 ರಿಯಾಯಿತಿ ಕಾಲಾವಧಿಯನ್ನು ಎಪ್ರಿಲ್ ಮಾಹೆಗೆ ಮಾತ್ರ ಸೀಮಿತಗೊಳಿಸದೆ ಮೇ.31ರ ತನಕ ವಿಸ್ತರಿಸುವಂತೆ ಬೆಂಗಳೂರು ಪೌರಾಡಳಿತ ನಿರ್ದೇಶನಾಲಯ ನಿರ್ದೇಶಕರು ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳ ಆಯುಕ್ತರು/ಪೌರಾಯುಕ್ತರು/ಮುಖ್ಯಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.

ಕೊರೋನಾ ಲಾಕ್‌ಡೌನ್‌ನಿಂದಾಗಿ ಸಾರ್ವಜನಿಕರು ಯಾವುದೇ ಸಂದರ್ಭದಲ್ಲಿ ಅನಗತ್ಯವಾಗಿ ಹೊರಬಾರದಂತೆ ಮತ್ತು ಸಾಮಾಜಿಕ ಅಂತರ ಕಾಯ್ದು ಕೊಳ್ಳುವಂತೆ ಸರಕಾರದಿಂದ ಕಟ್ಟುನಿಟ್ಟಿನ ಆಜ್ಞೆ ವಿಧಿಸಲಾಗಿದೆ. ಆದರೆ ಪೌರಸಭೆಗಳ ಕಾಯ್ದೆಯನ್ವಯ ಆರ್ಥಿಕ ವರ್ಷದ ಆರಂಭದಲ್ಲೇ ಸಾರ್ವಜನಿಕರು ನಗರ ಸ್ಥಳೀಯ ಸಂಸ್ಥೆಗಳಿಗೆ ಆಸ್ತಿ ತೆರಿಗೆ ಭರಿಸಬೇಕಾಗಿರುತ್ತದೆ ಮತ್ತು ಆರ್ಥಿಕ ವರ್ಷದ ಮೊದಲನೆ ಮಾಹೆಯಲ್ಲಿ (ಎಪ್ರಿಲ್ 30ರೊಳಗೆ) ಆಸ್ತಿ ತೆರಿಗೆ ಸಂದಾಯ ಮಾಡುವ ನಾಗರೀಕರಿಗೆ ಶೇ. 5 ರಿಯಾಯಿತಿಯ ಸೌಲಭ್ಯ ಲಭ್ಯವಿದೆ. ಇದರಿಂದಾಗಿ ಎಪ್ರಿಲ್ ಮಾಹೆಯಲ್ಲಿ ಆಸ್ತಿ ತೆರಿಗೆ ಸಂದಾಯ ಮಾಡಲು ಹೆಚ್ಚಿನ ಜನಸಂದಣಿಯಾಗಲಿದ್ದು, ಪ್ರಸ್ತುತ ಸಂದರ್ಭಕ್ಕೆ ಅನಪೇಕ್ಷಿತವಾಗಿದೆ. ಹಾಗಾಗಿ ಸಾರ್ವಜನಿಕರು ಎಪ್ರಿಲ್ ಮಾಹೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ/ಬ್ಯಾಂಕ್‌ಗಳಿಗೆ ದೌಡಾಯಿಸುವುದನ್ನು ಮಿತಿಗೊಳಿಸಲು ಆಸ್ತಿತೆರಿಗೆ ಮೇಲಿನ ಶೇ. ೫ ರ ರೀಯಾಯಿತಿಯ ಕಾಲಾವಧಿಯನ್ನು ಮೇ.೩೧ರ ತನಕ ವಿಸ್ತರಿಸುವುದು ಅತ್ಯಗತ್ಯ ಮತ್ತು ಸಮಯೋಜಿತವಾಗಿರುತ್ತದೆ ಎಂದು ಬಂದ ಮನವಿಯ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಜರುಗಿಸಲಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಆರ್ಥಿಕ ವರ್ಷ ೨೦೨೦-೨೧ನೇ ಸಾಲಿಗೆ ಮಾತ್ರ ಅನ್ವಯಿಸುವಂತೆ ಆಸ್ತಿ ತೆರಿಗೆ ಮೇಲಿನ ಶೇ.೫ ರಿಯಾಯಿತಿಯ ಸೌಲಭ್ಯದ ಕಾಲಾವಧಿಯನ್ನು ೨೦೨೦ ಎ. ೧ ರಿಂದ ೨೦೨೦ರ ಮೇ ೩೧ ರ ತನಕ ವಿಸ್ತರಿಸಿ ಸಾರ್ವಜನಿಕರಿಗೆ ಆಸ್ತಿ ತೆರಿಗೆ ಪಾವತಿಸಲು ಅನುವು ಮಾಡಿಕೊಡಲು ಕ್ರಮವಹಿಸಿ ಸೂಚಿಸಲಾಗಿದೆ ಎಂದು ಪೌರಾಡಲಿತ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.