ಐಐಟಿ, ಜೆಇಇ, ನೀಟ್‌ಗೆ ಆನ್‌ಲೈನ್ ಉಚಿತ ತರಬೇತಿ

Puttur_Advt_NewsUnder_1
Puttur_Advt_NewsUnder_1

ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ಹೇರಿರುವ ಕಾರಣದಿಂದ ಶೈಕ್ಷಣಿಕ ಚಟುವಟಿಕೆಗಳು ಕುಂಠಿತಗೊಂಡಿವೆ. ಇದು ಐಐಟಿ, ಜೆಇಇ, ನೀಟ್ ಪರೀಕ್ಷೆಗಳಿಗೆ ತೊಂದರೆ ಉಂಟು ಮಾಡಬಾರದೆಂಬ ಉದ್ದೇಶದಿಂದ ಯುಪ್ ಮಾಸ್ಟರ್ ಸಂಸ್ಥೆಯು ಆನ್‌ಲೈನ್ ಮೂಲಕ ಉಚಿತ ತರಬೇತಿ ನೀಡಲು ಮುಂದಾಗಿದೆ. ವಿದ್ಯಾರ್ಥಿಗಳು ವೆಬ್, ಮೊಬೈಲ್, ಟ್ಯಾಬ್ಲೆಟ್, ಸ್ಮಾರ್ಟ್ ಟಿವಿ ಮೂಲಕ ಇದರ ಸದುಪಯೋಗ ಪಡೆದುಕೊಳ್ಳಬಹುದು.
ಪ್ರತಿದಿನ 3ರಿಂದ 6 ಗಂಟೆಗಳ ಕಾಲ ತರಬೇತಿ ನಡೆಯುತ್ತದೆ. ಅನುಭವಿ ಶಿಕ್ಷಕರು ತರಗತಿ ನಡೆಸಿಕೊಡಲಿದ್ದಾರೆ. ವಿದ್ಯಾರ್ಥಿಗಳು ಪಠ್ಯಕ್ಕೆ ಸಂಬಂಧಪಟ್ಟ ತಮ್ಮ ಸಂದೇಹಗಳನ್ನು ಬಗೆಹರಿಸಿಕೊಳ್ಳಬಹುದು. ಪ್ರಥಮ ಪಿಯು ವಿದ್ಯಾರ್ಥಿಗಳಿಗೂ ಸಹ ಈ ತರಬೇತಿಯನ್ನು ಒದಗಿಸಲಾಗುವುದು. 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೂ ಕೂಡ ಫೌಂಡೇಷನ್ ಕೋರ್ಸ್ ನೀಡಲಾಗುವುದು. ಆದರೆ ಇವುಗಳಿಗೆ ನಿಗದಿತ ಶುಲ್ಕ ಪಾವತಿಸಬೇಕಾಗಿದೆ ಎಂದು ಯುಪ್ ಟಿವಿ ಮತ್ತು ಯುಪ್ ಮಾಸ್ಟರ್ ಸಂಸ್ಥಾಪಕ ಮತ್ತು ಸಿಇಒ ಉದಯ್ ರೆಡ್ಡಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.