Home_Page_Advt
Home_Page_Advt
Home_Page_Advt

ಕೊಕ್ಕೋ ಮಾತ್ರಾ ಖರೀದಿ – ಅಡಿಕೆ ಖರೀದಿ ದಿನಾಂಕ ಮುಂದೆ ತಿಳಿಸಲಾಗುತ್ತದೆ – ಕ್ಯಾಂಪ್ಕೋ ಸ್ಪಷ್ಟನೆ

Puttur_Advt_NewsUnder_1
Puttur_Advt_NewsUnder_1
  • ಪ್ರತಿ ಗುರುವಾರ ಸುಳ್ಯ, ವಿಟ್ಲ, ಅಡ್ಯನಡ್ಕ, ಕಡಬ ಶಾಖೆಯಲ್ಲಿ
  • ಪ್ರತಿ ಶುಕ್ರವಾರ ಪುತ್ತೂರು ಶಾಖೆಯಲ್ಲಿ
  • ಪ್ರತಿ ಸೋಮವಾರ ಬೆಳ್ತಂಗಡಿ ಶಾಖೆಯಲ್ಲಿ

ಮಂಗಳೂರು: ಕ್ಯಾಂಪ್ಕೋ ವತಿಯಿಂದ ಏ.9ರಿಂದ ಕೊಕ್ಕೋ ಖರೀದಿ ಆರಂಭವಾಗಲಿದೆ ಆದರೆ ಅಡಿಕೆ ಖರೀದಿ ಬಗ್ಗೆ ಸಿದ್ಧತೆ ನಡೆಯುತ್ತಿದೆ. ಈ ಬಗ್ಗೆ ಬೆಳೆಗಾರರಿಗೆ ಮುಂದೆ ಖರೀದಿ ದಿನಾಂಕವನ್ನು ತಿಳಿಸಲಾಗುವುದು ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಸ್ಪಷ್ಟಪಡಿಸಿದ್ದಾರೆ.

ಕ್ಯಾಂಪ್ಕೋ ಮೂಲಕ ಅಡಿಕೆ ಖರೀದಿ ನಡೆಸಲು ಸಿದ್ಧತೆ ನಡೆದಿದೆ. ಆದರೆ ಪೂರಕ ವ್ಯವಸ್ಥೆಗಳೂ ನಡೆಯುತ್ತಿದೆ. ಖರೀದಿ ದಿನ ನಿಗದಿಯಾಗಿಲ್ಲ, ಈ ಬಗ್ಗೆ ಮುಂದೆ ತಿಳಿಸಲಾಗುವುದು, ಬೆಳೆಗಾರರಿಗೆ ಯಾವುದೇ ಗೊಂದಲ ಬೇಡ ಎಂದು ಎಸ್.ಆರ್.ಸತೀಶ್ಚಂದ್ರ ತಿಳಿಸಿದ್ದಾರೆ.

ಏ.೯ರಿಂದ ಪ್ರತೀ ಗುರುವಾರ ಸುಳ್ಯ, ವಿಟ್ಲ, ಅಡ್ಯನಡ್ಕ, ಕಡಬ ದ ಕ್ಯಾಂಪ್ಕೋ ಶಾಖೆಗಳಲ್ಲಿ ಕೊಕ್ಕೋ ಖರೀದಿ. ಏ.೧೦ರಿಂದ ಪ್ರತೀ ಶುಕ್ರವಾರ ಪುತ್ತೂರು ಶಾಖೆಯಲ್ಲಿ ಕೊಕ್ಕೋ ಖರೀದಿ, ಏ.೧೩ ರಿಂದ ಪ್ರತೀ ಸೋಮವಾರ ಬೆಳ್ತಂಗಡಿ ಶಾಖೆಯಲ್ಲಿ ಕೊಕ್ಕೋ ಖರೀದಿ ಮಾಡಲಾಗುತ್ತದೆ.

ಬೆಳಗ್ಗೆ ಗಂಟೆ ೯ ರಿಂದ ೧೨ ಗಂಟೆಯವರೆಗೆ ಕೊಕ್ಕೋ ಖರೀದಿ ನಡೆಯುತ್ತದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ತಿಳಿಸಿದ್ದಾರೆ. ಕೃಷಿ ವಸ್ತು ಮಾರಾಟಕ್ಕೆ ಬರುವ ಹಿನ್ನೆಲೆಯಲ್ಲಿ ಕ್ಯಾಂಪ್ಕೋ ಐಡಿ ಕಾರ್ಡ್ ಅಥವಾ ಆರ್ ಟಿ ಸಿ ಜೊತೆ ಬರಬೇಕಾಗಿದೆ. ಮುಂದಿನ ದಿನಗಳಲ್ಲಿ ಕೊಕ್ಕೋ ಖರೀದಿ ಅವಧಿ ವಿಸ್ತರಣೆ, ಇತರ ಕಡೆಗಳಲ್ಲೂ ಖರೀದಿ ನಡೆಸಬೇಕೇ ಎಂಬುದರ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ತಿಳಿಸಿದ್ದಾರೆ.

ಜಿಲ್ಲೆಯ ರೈತರ ಹಿತಕ್ಕಾಗಿ ಸಂಸದ ನಳಿನ್ ಕುಮಾರ್ ಕಟೀಲು , ಜಿಲ್ಲೆಯ ಎಲ್ಲಾ ಶಾಸಕರ ಪ್ರಯತ್ನದ ಫಲವಾಗಿ ಜಿಲ್ಲಾಡಳಿತವು ಕೊಕ್ಕೋ ಖರೀದಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದಕ್ಕಾಗಿ ಕ್ಯಾಂಪ್ಕೋ ಹಾಗೂ ರೈತರ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಸತೀಶ್ಚಂದ್ರ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.