ಇತಿಹಾಸ ಪ್ರಸಿದ್ಧ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಿಗೆ ಈ ಬಾರಿ ಗತಕಾಲದ ಪುನರಾವರ್ತನೆಯಂತೆ ಜಾತ್ರೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಶತಮಾನಗಳ ಚರಿತ್ರೆಯಲ್ಲಿಯೇ ಇದೇ ಪ್ರಥಮಬಾರಿಯಾಗಿ ಕೊರೋನಾ ಮುನ್ನೆಚ್ಚರಿಕೆ ಕ್ರಮದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೋತ್ಸವದ ಧ್ವಜಾರೋಹಣ ಕಾರ್ಯಕ್ರಮ ಪೂರ್ವ ಶಿಷ್ಟ ಸಂಪ್ರದಾಯದಂತೆ ಆಗಮಶಾಸ್ತ್ರೋಕ್ತವಾಗಿ ತಂತ್ರಿಗಳ ನೇತ್ರತ್ವದಲ್ಲಿ, ಸೀಮಿತಿ ಅರ್ಚಕರು, ನೌಕರರ ಉಪಸ್ಥಿತಿಯಲ್ಲಿ ಆರಂಭಗೊಂಡಿದೆ.
ದೇವಳದ ಸೀಮಿತ ಅರ್ಚಕರು, ಬ್ರಹ್ಮವಾಹಕರು, ಮತ್ತು ಸಂಪ್ರದಾಯಿಕ ಕೆಲಸ ಕಾರ್ಯ ಮಾಡುವರನ್ನು ಹೊರತು ಪಡಿಸಿ ಯಾರಿಗೂ ದೇವಳದ ಒಳಗೆ ಪ್ರವೇಶ ಇರಲಿಲ್ಲ. ಜೊತೆಗೆ ಭಕ್ತರಿಗೆ ದೇವಳದ ವಠಾರ ಸಹಿತ ಗದ್ದೆಗೂ ಬರುವ ಅವಕಾಶ ನಿಷೇಧಿಸಲಾಗಿತ್ತು.

ದೇವಳದ ಆಡಳಿತಾಧಿಕಾರಿ ನೆಲೆಯಲ್ಲಿ ಲೋಕೇಶ್ ಸಿ, ಕಾರ್ಯನಿರ್ವಹಣಾಧಿರಿ ನೆಲೆಯಲ್ಲಿ ನವೀನ್ ಕುಮಾರ್ ಭಂಡಾರಿ, ಉತ್ಸವ ಉಸ್ತುವಾರಿ ನೆಲೆಯಲ್ಲಿ ಸಾಸಕ ಸಂಜೀವ ಮಠಂದೂರು ಮತ್ತು ಧ್ವಜರೋಹಣದ ಗರುಡವನ್ನು ಏರಿಸುವಲ್ಲಿ ದೇವಳದ ವಾಸ್ತು ಶಿಲ್ಪಿ ಪಿ.ಜಿ.ಜಗನ್ನಿವಾಸ ರಾವ್, ಪ್ರಧಾನ ಅರ್ಚಕರಾದ ವಿ.ಎಸ್ ಭಟ್ ಮತ್ತು ವಸಂತ ಕೆದಿಲಾಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಭಕ್ತರಿಗೆ ಅವಕಾಶವಿಲ್ಲದಿದ್ದರಿಂದ ಧ್ವಜಪೀಠದಲ್ಲಿ ಅಲ್ಪ ಸುವಸ್ತುಗಳು:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಸಂದರ್ಭ ಧ್ವಜಾರೋಹಣದಂದು ಶ್ರೀ ದೇವರ ಕೊಡಿಮರಕ್ಕೆ ಸೀಮೆಯ ಭಕ್ತರು ಅಲ-ಫಲಗಳು, ಸುವಸ್ತುಗಳನ್ನು ತಂದೊಪ್ಪಿಸುವ ಸಂಪ್ರದಾಯವಿತ್ತು. ಈ ವರ್ಷ ಲಾಕ್‌ಡೌನ್ ಹಿನ್ನೆಲೆಯಲ್ಲಿ ಭಕ್ತಾದಿಗಳಿಗೆ ಸುವಸ್ತುಗಳ ಸಮರ್ಪಣೆಗೆ ಅವಕಾಶವಾಗಿಲ್ಲ. ಆದಕಾರಣ ಸಾಂಕೇತಿಕವಾಗಿ ಬಾಳೆಯ ಗಿಡ, ಮಾವಿನ ಚಿಗುರು, ಸೀಯಾಳ, ಮಾವಿನ ಕಾಯಿ, ಗುಜ್ಜೆ, ಬಾಳೆಕಾಯಿಯನ್ನು ದೇವಳದ ನೌಕರರೇ ಅಲಫಲಗಳನ್ನು ಕಟ್ಟುವ ಮೂಲಕ ಧ್ವಜಸ್ತಂಭದ ಪೀಠವನ್ನು ಅಲಂಕರಿಸಲಾಯಿತು. ಪ್ರತಿ ವರ್ಷ ಅಲಫಲ ಸುವಸ್ತುಗಳಿಂದ ತುಂಬಿ ರಾರಾಜಿಸುತ್ತಿದ್ದ ಧ್ವಜಪೀಠ ಈ ಭಾರಿ ಬೆರಳೆಣಿಕೆಯ ಅಲಫಲ ಸುವಸ್ತುಗಳಿಂದ ಕೂಡಿದ್ದರಿಂದ ಬಿಕೋ ಎನ್ನುತ್ತಿತ್ತು.

ಬಲ್ನಾಡಿನಲ್ಲಿ ಪ್ರಾರ್ಥನೆ:
ಜಾತ್ರೆಯ ಧಾರ್ಮಿಕ ನೇತೃತ್ವ ವಹಿಸಿರುವ ಕುಂಟಾರು ರವೀಶ ತಂತ್ರಿಗಳ ಪ್ರತಿನಿಧಿಯಾಗಿ ಕುಂಟಾರು ಗುರು ತಂತ್ರಿಯವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸುವ ಪೂರ್ವ ಭಾವಿಯಾಗಿ ಪುತ್ತೂರು ದೇವಸ್ಥಾನದ ನೇರ ಸಂಬಂಧವಿರುವ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಶ್ರೀ ದೇವಳಕ್ಕೆ ಆಗಮಿಸಿ ವಾರ್ಷಿಕ ಜಾತ್ರೆಯ ಧ್ವಜಾರೋಹಣ ಪ್ರತಿಕೆಯ ನಡೆಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.