HomePage_Banner
HomePage_Banner
HomePage_Banner

ಸಣ್ಣ ರೈತರಿಗೆ 4 ಲಕ್ಷ ರೂ. ವರೆಗೆ ಸಾಲ ಸೌಲಭ್ಯ | ಸ್ವಸಹಾಯ ಸಂಘಗಳ ಮೂಲಕ 3 ಕೋಟಿ ಮಾಸ್ಕ್ ತಯಾರಿ:ನಿರ್ಮಲಾ ಸೀತಾರಾಮನ್

Puttur_Advt_NewsUnder_1
Puttur_Advt_NewsUnder_1

ವಿತ್ತ ಸಚಿವರ ಪ್ರಮುಖ ಘೋಷಣೆಗಳು:

  • ಬೆಳೆಸಾಲದ ಕಂತು ಪಾವತಿ ಅವಧಿ ವಿಸ್ತರಣೆ
  • ಯಾವುದೇ ಸ್ಥಳದಲ್ಲಿದ್ದರೂ ಪಡಿತರ
  • ಬೀದಿ ಬದಿ ವ್ಯಾಪಾರಿಗಳಿಗೆ ವಿಶೇಷ ಸಾಲ ಸೌಲಭ್ಯ
  • ಇಎಸ್‌ಐ ಕಡ್ಡಾಯ

ಪುತ್ತೂರು: ಕೊರೋನಾ ವೈರಸ್ ಮತ್ತು ಲಾಕ್‌ಡೌನ್ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರೈತರು, ವಲಸೆ ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳಿಗಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಪರಿಹಾರ ಪ್ಯಾಕೇಜ್ ಅನ್ನು ಪ್ರಕಟಿಸಿದ್ದಾರೆ.ಜೊತೆಗೆ ಸ್ವಸಹಾಯ ಸಂಘಗಳ ಮೂಲಕ ಮಾಸ್ಕ್ ತಯಾರಿ ಕುರಿತೂ ಅವರು ಮಾಹಿತಿ ನೀಡಿದ್ದಾರೆ.
ಕೃಷಿ ಸಾಲಗಳ ಮೇಲಿನ ಬಡ್ಡಿ ವಿನಾಯಿತಿ, ಸಣ್ಣ ರೈತರಿಗೆ ೪ ಲಕ್ಷ ರೂ. ತನಕ ಸಾಲ ಸೌಲಭ್ಯ ನೀಡಲು ಅವಕಾಶ. ನಬಾರ್ಡ್‌ಗೆ ೩೦ ಸಾವಿರ ಕೋಟಿ ರೂಪಾಯಿಗಳ ತುರ್ತು ಸಾಲ. ಇದರಿಂದ ದೇಶದಲ್ಲಿರುವ ೩ ಕೋಟಿ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಪ್ರಯೋಜನ.೨೫ ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡ್ ಗಳ ವಿತರಣೆಗೆ ಕ್ರಮ.ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ೨.೫ ಕೋಟಿ ರೈತರು, ಹೈನುಗಾರರು ಹಾಗೂ ಮೀನುಗಾರರಿಗೆ ಅನುಕೂಲ.
ಕೋವಿಡ್ ವಿರುದ್ಧ ದೇಶ ನಡೆಸುತ್ತಿರುವ ಹೋರಾಟದಲ್ಲಿ ಕುಸಿತಕ್ಕೊಳಗಾಗಿರುವ ದೇಶದ ಆರ್ಥಿಕತೆಗ ಬಲ ತುಂಬಲು ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಹಿಂದೆ ಘೋಷಿಸಿದ್ದ ೨೦ ಲಕ್ಷ ಕೋಟಿ ರೂಪಾಯಿಗಳ ಬೃಹತ್ ಪ್ಯಾಕೇಜ್‌ನ ಮೊದಲ ವಿವರಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರದಂದು ನೀಡಿದ್ದರು. ಇದೀಗ ಈ ಆರ್ಥಿಕ ಪ್ಯಾಕೇಜಿನ ಎರಡನೇ ಹಂತದ ವಿವರಗಳನ್ನು ಮೇ.14ರಂದು ಅವರು ನೀಡಿದ್ದು ರೈತರು, ವಲಸೆ ಕಾರ್ಮಿಕರ ಹಿತವನ್ನು ಗಮನದಲ್ಲಿರಿಸಿಕೊಂಡು ಈ ಪ್ಯಾಕೇಜ್‌ನಲ್ಲಿನ ಕೊಡುಗೆಗಳನ್ನು ಘೋಷಣೆ ಮಾಡಲಾಗಿದೆ.
ವಿತ್ತ ಸಚಿವರ ಪ್ರಮುಖ ಘೋಷಣೆಗಳು:
ಬೆಳೆಸಾಲದ ಕಂತು ಪಾವತಿ ಅವಧಿ ವಿಸ್ತರಣೆ: ಬೆಳೆ ಸಾಲದ ಮೇಲಿನ ಕಂತು ಪಾವತಿ ಅವಧಿಯನ್ನು ಮುಂದೂಡಿಕೆ ಮಾಡಲಾಗಿದೆ. ಮಾರ್ಚ್ ೧ಕ್ಕಿದ್ದ ಬೆಳೆ ಸಾಲದ ಮೇಲಿನ ಕಂತು ಪಾವತಿ ಅಂತಿಮ ದಿನಾಂಕವನ್ನು ಮೇ ೩೧ಕ್ಕೆ ವಿಸ್ತರಣೆ ಮಾಡಲಾಗಿದೆ. ವಲಸೆ ಕಾರ್ಮಿಕರ ಹಿತ ಕಾಯಲೂ ಸರಕಾರದ ಕ್ರಮ.ತಮ್ಮ ತಮ್ಮ ರಾಜ್ಯಗಳಿಗೆ ಹಿಂದಿರುಗಿರುವ ವಲಸೆ ಕಾರ್ಮಿಕರ ದಾಖಲಾತಿಯನ್ನು ಸೂಕ್ತವಾಗಿ ಮಾಡಲು ಕ್ರಮ.ಕಳೆದ ಎರಡು ತಿಂಗಳುಗಳಲ್ಲಿ ನಗರದಲ್ಲಿರುವ ಬಡವರಿಗಾಗಿ ೭,೨೦೦ ಹೊಸ ಸ್ವ-ಸಹಾಯ ಸಂಘಗಳ ಸ್ಥಾಪನೆ. ಮುಂದಿನ ಎರಡು ತಿಂಗಳುಗಳ ಕಾಲ ಎಲ್ಲಾ ವಲಸೆ ಕಾರ್ಮಿಕರಿಗೆ ಉಚಿತ ಆಹಾರ ಧಾನ್ಯಗಳ ವಿತರಣೆ.ವಲಸೆ ಕಾರ್ಮಿಕರ ಬಾಡಿಗೆ ಮನೆಗಳಿಗೆ ನಿರ್ದಿಷ್ಟ ಬಾಡಿಗೆ ನಿಗದಿಗೆ ಕ್ರಮಕೈಗೊಳ್ಳಲು ಎಲ್ಲಾ ರಾಜ್ಯ ಸರಕಾರಗಳಿಗೆ ಸೂಚನೆ.ಮುದ್ರಾ ಶಿಶು ಸಾಲ ಯೋಜನೆಯಲ್ಲಿ ೫೦ ಸಾವಿರದವರೆಗೆ ಸೌಲಭ್ಯ.
ಯಾವುದೇ ಸ್ಥಳದಲ್ಲಿದ್ದರೂ ಪಡಿತರ: ಪಡಿತರ ಚೀಟಿ ಪೋರ್ಟಬಿಲಿಟಿ ಮಾಡಲು ಅವಕಾಶ. ಇದರ ಮೂಲಕ ದೇಶದ ಯಾವುದೇ ಸ್ಥಳದಲ್ಲಿ ಪಡಿತರ ಪಡೆದುಕೊಳ್ಳಲು ಅವಕಾಶ. ಇದರಿಂದ ೬೭ ಕೋಟಿ ಪಡಿತರದಾರರಿಗೆ ಪ್ರಯೋಜನವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಬೀದಿ ಬದಿ ವ್ಯಾಪಾರಿಗಳಿಗೆ..: ಬೀದಿ ಬದಿ ವ್ಯಾಪಾರಿಗಳ ವಿಶೇಷ ಸಾಲ ಸೌಲಭ್ಯಕ್ಕೆ ೫ ಸಾವಿರ ಕೋಟಿ ರೂಪಾಯಿ ನಿಗದಿ ಪಡಿಸಿದ್ದು ಇದರಿಂದ ೫೦ ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಪ್ರಯೋಜನವಾಗಲಿದೆ. ಬೀದಿಬದಿ ವ್ಯಾಪಾರಿಗಳಿಗೆ ತಮ್ಮ ವ್ಯಾಪಾರ ಪುನರಾರಂಭಿಸಲು ೧೦ ಸಾವಿರ ರೂಪಾಯಿ ನಿಗದಿ ಪಡಿಸಲಾಗಿದೆ.
ಸ್ವಸಹಾಯ ಸಂಘಗಳ ಮೂಲಕ ಮಾಸ್ಕ್ ತಯಾರಿ: ಕೊರೋನಾ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸುವುದು ಅನಿವಾರ್ಯವಾಗಿದ್ದು ಈ ನಿಟ್ಟಿನಲ್ಲಿ ಸ್ವಸಹಾಯ ಸಂಘಗಳ ಮೂಲಕ ಮಾಸ್ಕ್ ತಯಾರಿಗೆ ಒತ್ತು ನೀಡಲಾಗಿದೆ.೧೨ ಸಾವಿರ ಸ್ವಸಹಾಯ ಸಂಘಗಳಿಂದ ೩ ಕೋಟಿ ಮಾಸ್ಕ್ ತಯಾರಿ ಗುರಿಹೊಂದಲಾಗಿದೆ.
ಮಧ್ಯಮ ವರ್ಗದ ಜನರಿಗೆ ಸಾಲ ಸಬ್ಸಿಡಿ ಯೋಜನೆ. ೬ ರಿಂದ ೧೮ ಲಕ್ಷದವರೆಗಿನ ವೇತನದಾರರಿಗೆ ಇದರ ಪ್ರಯೋಜನ.
ಇಎಸ್‌ಐ ಕಡ್ಡಾಯ: ಇನ್ನು ಮುಂದೆ ಒಂದು ಸಂಸ್ಥೆಯಲ್ಲಿ ೧೦ಕ್ಕಿಂತ ಹೆಚ್ಚು ಉದ್ಯೋಗಿಗಳಿದ್ದರೆ ಇ.ಎಸ್.ಐ. ಕಡ್ಡಾಯವಾಗಲಿದೆ.
ಗೃಹ ಸಾಲ ಸೌಲಭ್ಯಕ್ಕಾಗಿ 70 ಸಾವಿರ ಕೋಟಿ ರೂಪಾಯಿ ಮೀಸಲು. ೨೦೨೦ಕ್ಕೆ ಮುಗಿಯಬೇಕಿದ್ದ ಸಬ್ಸಿಡಿ ಯೋಜನೆ ಮುಂದಿನ ವರ್ಷದ ಮಾರ್ಚ್ ೩೧ರವರೆಗೆ ವಿಸ್ತರಣೆ. ೨.೫ ಲಕ್ಷ ಕುಟುಂಬಗಳು ಹೆಚ್ಚುವರಿಯಾಗಿ ಇದರ ಲಾಭ ಪಡೆಯಲಿವೆ.
ಮುದ್ರಾ ಶಿಶು ಸಾಲ ಯೋಜನೆಯಲ್ಲಿ ಸಕಾಲಿಕ ಕಂತು ಪಾವತಿದಾರರಿಗೆ ೧೨ ತಿಂಗಳುಗಳ ಕಾಲ ಬಡ್ಡಿ ದರದಲ್ಲಿ ೨% ಸಬ್ಸಿಡಿ.ಬುಡಕಟ್ಟು ಹಾಗೂ ಆದಿವಾಸಿಗಳಿಗೆ ಉದ್ಯೋಗ ಸೃಷ್ಟಿಗೆ ಕ್ರಮ. ಮುದ್ರಾ ಶಿಶು ಸಾಲ ಪಡೆದುಕೊಂಡವರಿಗೆ ಮೂರು ತಿಂಗಳ ಕಂತು ರದ್ದು ಬಳಿಕ ಕಂತು ಮರುಪಾವತಿ ಪ್ರಾರಂಭಿಸುವ ಸಂರ್ಭದಲ್ಲಿ ೨% ಬಡ್ಡಿ ಸಬ್ಸಿಡಿ ಕೊಡುಗೆ. ಇದರಿಂದ ೩ ಕೋಟಿ ಶಿಶು ಮುದ್ರಾ ಸಾಲಗಾರರಿಗೆ ಪ್ರಯೋಜನ.ಇವು ವಿತ್ತಸಚಿವೆ ಮಾಡಿರುವ ಪ್ರಮುಖ ಘೋಷಣೆಗಳು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

  1. Shashidhar m patil

    Sir I am shashidhar m patil a small farmers I have taken 2lake crop loan in coprative society ,will interest of laon will be waived and can get fresh laon of 4 lake as sad by centeral minster Nirmala setharam said. Thank you sir

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.