HomePage_Banner
HomePage_Banner
HomePage_Banner

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಯಲ್ಲಿ ಏನಿರಲ್ಲ/ಏನಿರುತ್ತೆ? ಇಲ್ಲಿದೆ ಮಾಹಿತಿ…

Puttur_Advt_NewsUnder_1
Puttur_Advt_NewsUnder_1

ಇಂದು (ಮೇ 17) 3 ನೇ ಹಂತದ ಲಾಕ್ ​ ಡೌನ್ ​ ಅಂತ್ಯಗೊಳ್ಳಲಿದ್ದು, 4 ನೇ ಹಂತದ ಲಾಕ್ ​ ಡೌನ್ ಮೇ 31 ರವರೆಗೆ  ವಿಸ್ತರಣೆ ಮಾಡಲಾಗಿದೆ. ಲಾಕ್‌ಡೌನ್ ಅನ್ನು ಮೊದಲು ಮಾರ್ಚ್ 25 ರಿಂದ 21 ದಿನಗಳವರೆಗೆ ವಿಧಿಸಲಾಯಿತು ಮತ್ತು ನಂತರ ಏಪ್ರಿಲ್ 15 ರಂದು ಮತ್ತು ನಂತರ ಮೇ 4 ರಂದು ವಿಸ್ತರಿಸಲಾಯಿತು. ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ವಿಸ್ತರಿಸಲು ಕೆಲವು ರಾಜ್ಯಗಳು ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದು, ಇದೀಗ  ಕೇಂದ್ರ ಸರ್ಕಾರ ಲಾಕ್‌ಡೌನ್ ವಿಸ್ತರಿಸಿದ್ದು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಮೇ 17ರ ಮದ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.

ಭಾರತದಲ್ಲಿ ಒಟ್ಟು ಕೊರೊನಾವೈರಸ್ ಪ್ರಕರಣಗಳು 90,000 ಗಡಿ ದಾಟಿದೆ. ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಒಟ್ಟು ಕರೋನಾ ಸಕಾರಾತ್ಮಕ ಪ್ರಕರಣಗಳ ಸಂಖ್ಯೆ 90927, ಇದರಲ್ಲಿ 53,946 ಸಕ್ರಿಯ ಪ್ರಕರಣಗಳು, 34109 ಗುಣಪಡಿಸಿದ / ಬಿಡುಗಡೆಯಾದ / ವಲಸೆ ಬಂದ ಪ್ರಕರಣಗಳು, ಸಾವಿನ ಸಂಖ್ಯೆ 2872 ಸಾವುಗಳು. ಕಳೆದ 24 ಗಂಟೆಗಳಲ್ಲಿ 120 ಜನರು ಸಾವನ್ನಪ್ಪಿದ್ದಾರೆ.

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಯಲ್ಲಿ ಇರೋದು ಏನು ? ಇಲ್ಲಿದೆ ಮಾಹಿತಿ

 • ರೈಲು ಸಂಚಾರ ಇರಲ್ಲ
 • ಬಸ್ ಸಂಚಾರ ಇರಲ್ಲ
 • ಮದ್ಯ ಮಾರಾಟ ಇರುತ್ತೆ ಆದರೆ ಪಾರ್ಸಲ್ ಗೆ ಮಾತ್ರ ಅವಕಾಶ
 • ಕಾಲೇಜು, ಶಿಕ್ಷಣ ಸಂಸ್ಥೆ ಬಂದ್
 • ಹೋಟೆಲ್ ಮತ್ತು ರೆಸ್ಟೋರೆಂಟ್ ಬಂದ್
 • ಹೋಟೆಲ್ ನಲ್ಲಿ ಪಾರ್ಸಲ್ ಗೆ ಮಾತ್ರ ಅವಕಾಶವಿರುತ್ತದೆ
 • ರೆಸ್ಟೋರೆಂಟ್ ನಲ್ಲಿ ಹೋಮ್ ಡೆಲಿವರಿಗೆ ಮಾತ್ರ ಅವಕಾಶ
 • ಸ್ವಿಮ್ಮಿಂಗ್ ಪೂಲ್ ಬಂದ್
 • ಶಾಪಿಂಗ್ ಮಾಲ್ ಬಂದ್
 • ಸಾಂಸ್ಕೃತಿಕ ಸಮಾರಂಭ, ಸಭೆ ರದ್ದು
 • ಓಲಾ, ಊಬರ್ ಟ್ಯಾಕ್ಸಿ ಸಂಚಾರ ಇರಲ್ಲ
 • ಥಿಯೇಟರ್ , ವಿಮಾನ ಸಂಚಾರ ಬಂದ್
 • 10 ವರ್ಷದ ಮಕ್ಕಳು ಹಾಗೂ 65 ವರ್ಷ ಮೇಲ್ಪಟ್ಟರಿಗೆ ಮನೆಯಿಂದ ಹೊರಗಡೆ ಬರಲು ಅವಕಾಶ ಇರೋಲ್ಲ
 • ಸಾರ್ವಜನಿಕರಿಗೆ ಆರೋಗ್ಯ ಸೇತು App ಬಳಕೆ ಕಡ್ಡಾಯ
 • ಅಂತ್ಯಸಂಸ್ಕಾರದಲ್ಲಿ 20 ಜನರಿಗೆ ಮಾತ್ರ ಅವಕಾಶ
 • ಆಟೋ, ಕ್ಯಾಬ್ ಅವಕಾಶ ಅದರೆ ಷರತ್ತುಬದ್ಧ ಅವಕಾಶ
 • ಎರಡು ರಾಜ್ಯಗಳು ಒಪ್ಪಿದರೆ ಮಾತ್ರ ಅಂತರ್ ರಾಜ್ಯ ಬಸ್ ಸಂಚಾರಕ್ಕೆ ಮಾತ್ರ ಅವಕಾಶ, ಅಂತರ್ ಜಿಲ್ಲಾ ಓಡಾಟ ರಾಜ್ಯಗಳು ತೀರ್ಮಾನ ಮಾಡುತ್ತದೆ,  ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.