HomePage_Banner
HomePage_Banner
HomePage_Banner

ಕೃಷಿಕರಿಗೆ, ನೆಡುತೋಪಿಗಾಗಿ 2.31ಲಕ್ಷ ಸಸಿಗಳು ಪುತ್ತೂರು ಅರಣ್ಯ ವಲಯ ವ್ಯಾಪ್ತಿಯ ಸಸ್ಯಕ್ಷೇತ್ರದಲ್ಲಿ ಸಿದ್ಧ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಅರಣ್ಯ ವಲಯದ ವ್ಯಾಪ್ತಿಗೆ ಸಂಬಂಧಿಸಿ ಈ ಬಾರಿ ಕೃಷಿಕರಿಗೆ ಮತ್ತು ಹೊಸ ನೆಡುತೋಪುಗಳಲ್ಲಿ ಸಸಿಗಳನ್ನು ನೆಡಲು ಈಗಾಗಲೇ 2,31,134 ಸಸಿಗಳನ್ನು ಅರಣ್ಯ ಇಲಾಖೆಯಿಂದ ಬೆಳೆಸಲಾಗಿದೆ ಎಂದು ಪುತ್ತೂರು ವಲಯ ಅರಣ್ಯಾಧಿಕಾರಿ ಬಿ.ಜಿ.ಮೋಹನ್ ಮಾಹಿತಿ ನೀಡಿದ್ದಾರೆ.

ಪುತ್ತೂರು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿನ ಜಾಲ್ತೂರಿನಿಂದ ಕೇರಳ ರಾಜ್ಯ ಕಡೆಗೆ ಹೋಗುವ ರಸ್ತೆಯಲ್ಲಿ ಪಂಜಿಕಲ್ಲು ಎಂಬಲ್ಲಿ ಕನಕಮಜಲು ಸಸ್ಯಕ್ಷೇತ್ರದಲ್ಲಿ ಈ ಸಸಿಗಳನ್ನು ಬೆಳಸಾಗಿದ್ದು, ಸಾರ್ವಜನಿಕರಿಗೆ ವಿತರಣೆ ಮಾಡಲು ೪೦ಸಾವಿರ ಸಸಿಗಳು ಮತ್ತು 217.70 ಹೆಕ್ಟೇರು ಪ್ರದೇಶದಲ್ಲಿ ನೆಡುತೋಪಿಗಾಗಿ 1,54,320 ಸಸಿಗಳನ್ನು ಸಿದ್ಧಪಡಿಸಲಾಗಿದೆ.

217.70 ಹೆಕ್ಟೇರ್‌ನಲ್ಲಿ ನೆಡುತೋಪು:
ಪುತ್ತೂರು ಅರಣ್ಯ ವಲಯಕ್ಕೆ ಸಂಬಂಧಿಸಿ 217.70 ಹೆಕ್ಟೇರ್ ನೆಡುತೋಪು ಮಾಡಲಾಗುವುದು. ಬಂಟಾಜೆ ರಕ್ಷಿತಾರಣ್ಯದ ಕೋಡಿ, ಅರ್ಯಾಪ್ ಬ್ಲಾಕ್‌ನ ಮೇರ್ಲ, ಕಣಿಯಾರ್‌ಮಲೆ ರಕ್ಷಿತಾರಣ್ಯದ ಚಿಮಿಲುಗುಂಡಿ, ಕೆಳಗಿನ ಇಳಂತಾಜೆ, ಚಾಕೋಟೆ, ಒಳಮೊಗ್ರು ಬ್ಲಾಕ್‌ನ ದರ್ಬೆತ್ತಡ್ಕ, ಕನಕಮಜಲು ರಕ್ಷಿತಾರಣ್ಯದ ಮುಗೇರು, ಬಡಿಮೂಲೆ, ಕಲ್ಪಟಮಲೆ ರಕ್ಷಿತಾರಣ್ಯದ ಕಲ್ಪಡ, ಆನೆಗುಂಡಿ ರಕ್ಷಿತಾರಣ್ಯದ ದುಗ್ಗರು, ಪುಣ್ಚಪ್ಪಾಡಿ, ಕನ್ನಡ್ಕ ರಕ್ಷಿತಾರಣ್ಯದ ಕಡೆಮೂಲೆ, ಸುರುಳಿಮೂಲೆ, ಒಳಮೊಗರು ಬ್ಲಾಕ್‌ನ ಅಜಿಲಡ್ಕ, ಪುಣಚ ಬ್ಲಾಕ್‌ನ ತೋರಣ ಕಟ್ಟೆ, ನರಿಮೊಗರು ಅರಣ್ಯದ ವಾಲ್ತಾಜೆ, ಇರ್ದೆ ಬ್ಲಾಕ್‌ನ ಮಜಲುಗದ್ದೆಯಲ್ಲಿ ಈ ಬಾರಿ ವಿವಿಧ ಜಾತಿಯ ಗಿಡಗಳನ್ನು ನೆಡುತೋಪು ಮಾಡಲಾಗುತ್ತದೆ.

ನೆಡುತೋಪಿಗೆ ಸಿದ್ದವಾದ ಗಿಡಗಳು:
1,54,320 ಹೆಕ್ಟೇರ್ ಅರಣ್ಯ ಭೂಮಿ ಗಿಡಗಳ ನೆಡುತೋಪಿಗೆ ಸಿದ್ದಗೊಂಡಿದೆ. ಸಾಗುವಾನಿ, ನೆಲ್ಲಿ, ಬಿಲ್ಪಪತ್ರೆ, ಹಲಸು, ಹೆಬ್ಬಲಸು, ಕಹಿಬೇವು, ಕಾಯಿದೂಪ, ಕುಳುರ್‌ಮಾವು, ಕರಡಿ, ಕೋಳಿಜುಟ್ಟು, ಕಿರಾಲ್ಬೋಗಿ, ಗಾಳಿ, ದಾಲ್ಚೀನಿ, ದೂಪ, ಬಾಗೆ, ಬಾದಾಮ್, ಬೇಂಗ, ಬೊಳ್ಪಾಲೆ, ಬೆತ್ತ, ಸಂಪಿಗೆ, ನೊರೆಕಾಯಿ, ನೇರಳೆ, ಪುನಾರ್ಪುಳಿ, ಬಸವನಪಾದ, ಬಿದಿರು, ಬಿಲ್ವಪತ್ರೆ, ಬೀಟೆ, ಶಿವನಿ, ಶ್ರೀಗಂಧ, ಮಂಜೋಟಿ, ಮಂತುಹುಳಿ, ಮಹಾಗನಿ, ಜಂಬುನೇರಳೆ, ರಾಂಪತ್ರೆ, ರಂಬುಟನ್, ರೆಂಜ, ರಕ್ತಚಂದನ ಸಸಿಗಳನ್ನು ನೆಡುತೋಪಿನಲ್ಲಿ ನೆಡಲಾಗುತ್ತದೆ.

೪೦ಸಾವಿರ ಸಸಿಗಳು ಸಾರ್ವಜನಿಕರಿಗೆ:
ಸಾರ್ವಜನಿಕರಿಗೆ ಸುಮಾರು 40ಸಾವಿರ ಸಸಿಗಳನ್ನು ಈ ಬಾರಿ ವಿತರಣೆ ಮಾಡಲಾಗುವುದು. 69 ಮತ್ತು 812ರ ಗಾತ್ರದಲ್ಲಿ ಸಸಿಗಳು ಸಿದ್ಧಗೊಂಡಿದ್ದು, ಸಾಗುವಾನಿ, ನೆಲ್ಲಿ, ಬಿಲ್ವಪತ್ರೆ, ಮಹಾಗನಿ, ಜಂಬುನೇರಳೆ, ರಂಬುಟನ್, ಕಹಿಬೇವು, ಬಾಗೆ, ಬಾದಾಮು, ಬೇಂಗ, ಸಂಪಿಗೆ, ನೊರೆಕಾಯಿ, ನೇರಳೆ, ಪುನರ್ಪುಳಿ, ಬಸವನಪಾದ, ಶಿವಾನಿ, ಶ್ರೀಗಂಧ, ರಕ್ತಚಂದ್ರನ, ಹಲಸು ಗಿಡಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡಲಾಗುವುದು.

ಕೃಷಿಕರಿಗೆ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ:
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿಯಲ್ಲಿ ರೈತರಿಗೆ ಅವರ ಪಟ್ಟಾ ಸ್ಥಳದಲ್ಲಿ ಸಸಿ ನೆಡಲು ಸಸಿಗಳ ವಿತರಣೆ ಮಾಡಲಾಗುತ್ತದೆ. ಅದಕ್ಕಾಗಿ ಇಲಾಖೆಯಲ್ಲಿ ನೋಂದಾವಣೆ ಮಾಡಿಕೊಂಡು. ಆರ್.ಟಿ.ಸಿ, ಆಧಾರ್ ಕಾಡ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕ ಪ್ರತಿ ನೀಡಬೇಕು. ಗಿಡ ಪಡೆದ ಬಳಿಕ ಮೂರು ವರ್ಷದಲ್ಲಿ ಪ್ರಥಮ ವರ್ಷ ರೂ. 30, ದ್ವಿತೀಯ ವರ್ಷ ರೂ. 30 ಮತ್ತು ತೃತೀಯ ವರ್ಷ ರೂ. 40 ಅನ್ನು ಇಲಾಖೆ ನಿಮ್ಮ ರೈತರ ಬ್ಯಾಂಕ್ ಖಾತೆಗೆ ಭರಿಸುತ್ತದೆ. ಆದರೆ ಇದೆಲ್ಲಾ ಗಿಡದ ಬೆಳವಣಿಗೆಯನ್ನು ಇಲಾಖಾಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕ ಮಾತ್ರ. ಹೀಗೆ ಗಿಡವೊಂದಕ್ಕೆ ತಲಾ ರೂ. 100 ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ.

ಮಗುವಿಗೊಂದು ಮರ, ಶಾಲೆಗೊಂದು ವನ ಯೋಜನೆ
ಮಕ್ಕಳಲ್ಲಿ ಪರಿಸರ ಮತ್ತು ವಾತಾವರಣದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಸ್ವಯಂಪ್ರೇರಿತವಾಗಿ ಗಿಡಗಳನ್ನು ನೆಡಲು ಅವರನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ವಲಯದ ‘ಮಗುವಿಗೊಂದು ಮರ ಶಾಲೆಗೊಂದು ವನ’ ಯೋಜನೆ ಜಾರಿಯಲ್ಲಿದ್ದು, ಶಾಲಾ ಆವರಣದಲ್ಲಿ ಮತ್ತು ತಮ್ಮ ಮನೆಯ ಸುತ್ತಮುತ್ತಲ ಖಾಲಿ ಜಾಗದಲ್ಲಿ ನೆಡಲು ಸಸಿಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ಪೂರೈಸಲಾಗುತ್ತದೆ. ಶಿಕ್ಷಣ ಇಲಾಖೆ ಸಹಯೋಗದೊಂದಿಗೆ, ರಾಜ್ಯಾದ್ಯಂತ ಪ್ರಾಥಮಿಕ ಶಾಲಾ ಹಂತದಿಂದ ಕಾಲೇಜು ವಿದ್ಯಾರ್ಥಿಗಳವರೆಗೆ ಎಲ್ಲರೂ ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಶಾಲೆಗಳಲ್ಲಿ ಗಿಡ ನೆಡುವ ಪರಿಕಲ್ಪನೆಗೆ ಹೆಚ್ಚಿನ ಗಮನ ನೀಡುವ ಸಲುವಾಗಿ, ಪ್ರತಿ ತಾಲೂಕಿನಲ್ಲಿ ಕನಿಷ್ಠ ಒಂದು ಶಾಲಾ ಅರಣ್ಯ ನಿರ್ಮಿಸುವ ಗುರಿಯೊಂದಿಗೆ ‘ತಾಲೂಕಿಗೊಂದು ಹಸಿರು ಶಾಲಾ ವನ’ ಎನ್ನುವ ಕಾರ್ಯಕ್ರಮವಿದ್ದು, ಪುತ್ತೂರು ತಾಲೂಕಿಗೆ ಸಂಬಂಧಿಸಿ 2300 ಸಸಿಗಳನ್ನು ಸಿದ್ದಪಡಿಸಲಾಗಿದೆ – ಬಿ.ಜಿ.ಮೋಹನ್, ವಲಯ ಅರಣ್ಯಾಧಿಕಾರಿ ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.