HomePage_Banner
HomePage_Banner
HomePage_Banner

ಕಡಬ ತಹಸೀಲ್ದಾರ್ ಕಛೇರಿಯ ಎದುರು ಜಮಾಯಿಸಿದ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕರು | ಊರಿಗೆ ತೆರಳಲು ಸಿದ್ದವಾಗುವಂತೆ ಅಧಿಕಾರಿಗಳಿಂದ ಸಂದೇಶ -ಕೊನೆ ಕ್ಷಣದಲ್ಲಿ ರದ್ದು

Puttur_Advt_NewsUnder_1
Puttur_Advt_NewsUnder_1
  • ಆಕ್ರೋಶಗೊಂಡಿರುವ ಕಾರ್ಮಿಕರು, ಊರಿಗೆ ಕಳುಹಿಸಿ ಕೊಡುವಂತೆ ಪಟ್ಟು

ಕಡಬ: ಕಡಬ ಭಾಗದಿಂದ ಇಂದು ಊರಿಗೆ ತೆರಳಲು ಅಧಿಕಾರಿಗಳ ಸೂಚನೆ ಮೇರೆಗೆ ತಯರಾಗಿದ್ದ ಕಾರ್ಮಿಕರಿಗೆ ನಿರಾಸೆಯಾಗಿದೆ. ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದುಗೊಂಡಿದ್ದು ಜಾರ್ಖಂಡ್ ಮೂಲದ ಸುಮಾರು 148 ಕಾರ್ಮಿಕರಿಗೆ ಕಡಬ ತಹಸೀಲ್ದಾರ್ ಕಛೇರಿ ಎದುರು ಜಮಾಹಿಸಿದ್ದು ತಮ್ಮನ್ನು ಊರಿಗೆ ಕಳುಹಿಸಿಕೊಡುವಂತೆ ಆಗ್ರಹಿಸುತ್ತಿರುವ ಘಟನೆ ಮೇ.19 ನಡೆದಿದೆ.


ಕಡಬ ಆಸುಪಾಸಿನಲ್ಲಿ ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದ ಸುಮಾರು 148 ಕಾರ್ಮಿಕರಿಗೆ ಮೇ.19ರಂದು ಊರಿಗೆ ಹೊರಡಲು ಸಿದ್ದವಾಗುವಂತೆ ಪೋಲಿಸ್ ಇಲಾಖೆಯಿಂದ ಸಂದೇಶ ಬಂದಿತ್ತು, ಈ ಬಗ್ಗೆ ಕಾರ್ಮಿಕರು ತಯರಾಗಿದ್ದರು, ಆದರೇ ಕೊನೆಯ ಕ್ಷಣದಲ್ಲಿ ರೈಲು ಸಮಸ್ಯೆಯಿಂದ ಪ್ರಯಾಣ ರದ್ದುಗೊಂಡಿದೆ ಎನ್ನಲಾಗಿದೆ. ಆದರೇ ಊರಿಗೆ ಹೋಗುವ ತವಕದಲ್ಲಿದ್ದ ಕಾರ್ಮಿಕರಿಗೆ ನಿರಾಸೆಯಾಗಿದ್ದು, ತಮ್ಮನ್ನು ಊರಿಗೆ ಕಳುಹಿಸಿಕೊಡುವಂತೆ ಆಗ್ರಹಿಸುತ್ತಿದ್ದು ನಾವು ತಹಸೀಲ್ದಾರ್ ಕಛೇರಿ ಬಿಟ್ಟು ಹೋಗುವುದಿಲ್ಲ ಎಂದು ಪಟ್ಟು ಹಿಡಿದ್ದಾರೆ.

ವೀಡಿಯೋಗಾಗಿ…

ಕೆಲಸವಿಲ್ಲ, ಊಟಕ್ಕೂ ಕಷ್ಟವಾಗಿದೆ-ಕಾರ್ಮಿಕರ ಅಳಲು
ಈ ಬಗ್ಗೆ ಸುದ್ದಿಯೊಂದಿಗೆ ತಮ್ಮ ಅಳಲು ತೋಡಿಕೊಂಡ ಕಾರ್ಮಿಕರು ಎರಡು ತಿಂಗಳಿಂದ ಕೆಲಸವಿಲ್ಲದೆ ನಾವು ಕಂಗಲಾಗಿದ್ದೆವೆ, ನಮಗೆ ಮನೆಯ ಬಾಡಿಗೆ ಕಟ್ಟಲು ಹಣವಿಲ್ಲ, ಈಗ ಊಟಕ್ಕೂ ಕಷ್ಟವಾಗಿದೆ, ನಾವು ಊರಿಗೆ ಹೋಗಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಎಲ್ಲಾ ಲಿಸ್ಟ್ ತಯರಾಗಿದ್ದು, ಮೇ.19ರಂದು ಊರಿಗೆ ಹೋಗಲು ತಯರಾಗಿರಿ ಎಂಬ ಸಂದೇಶ ಕೂಡ ಬಂದಿತ್ತು, ಆದರೇ ಮೇ.18ರ ರಾತ್ರಿಯೇ ಪ್ರಯಾಣ ರದ್ದುಗೊಂಡಿರುವ ಬಗ್ಗೆ ಮಾಹಿತಿ ಬಂದಿದೆ, ಏನೇ ಆದರೂ ನಮ್ಮನ್ನು ಇವತ್ತೆ ಕಳುಹಿಸಿಕೊಡಬೇಕು ನಮಗೆ ಪೋಲಿಸ್ ಠಾಣೆ, ತಹಸೀಲ್ದಾರ್ ಕಛೇರಿ ಅಲೆದು ಸಾಕಾಗಿದೆ, ದಯವಿಟ್ಟು ನಮ್ಮನ್ನು ಕಳುಹಿಸಿಕೊಡಿ ಎಂದು ವಿನಂತಿಸಿಕೊಂಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.