HomePage_Banner
HomePage_Banner
HomePage_Banner

ಅಭಿವೃದ್ಧಿ ಸೌಧ ಸುಸ್ಥಿರವಾಗಿರಬೇಕಾದರೆ ಜೀವವೈವಿಧ್ಯ ದಾಖಲೀಕರಣ ಅಗತ್ಯ: ಜೀವ ವೈವಿಧ್ಯ ದಿನಾಚರಣೆಯಲ್ಲಿ ಸಾಜ ರಾಧಾಕೃಷ್ಣ ಆಳ್ವ

Puttur_Advt_NewsUnder_1
Puttur_Advt_NewsUnder_1
  • ಭವಿಷ್ಯದ ದೃಷ್ಟಿಯಿಂದ ಜೀವವೈವಿಧ್ಯ ಸಂರಕ್ಷಣೆ ಅಗತ್ಯ – ವಿದ್ಯಾರಾಣಿ

ಪುತ್ತೂರು: ಅಭಿವೃದ್ಧಿ ಸೌಧ ಸುಸ್ಥಿರ ಮತ್ತು ಮುಂದಿನ ಪೀಳಿಗೆಗೆ ನಮ್ಮ ಜೀವ ಸಂಕುಲಗಳನ್ನು ತೋರಿಸುವ ನಿಟ್ಟಿನಲ್ಲಿ ಜೀವ ವೈವಿಧ್ಯ ದಾಖಲೀಕರಣ ಅಗತ್ಯ ಈ ನಿಟ್ಟಿನಲ್ಲಿ ಪ್ರತಿ ಗ್ರಾ.ಪಂಗಳು ತಮ್ಮ ವ್ಯಾಪ್ತಿಯಲ್ಲಿನ ಜೀವ ವೈವಿಧ್ಯ ದಾಖಲೀಕರಣ ಮಾಡಬೇಕೆಂದು ಜೀವ ವೈವಿಧ್ಯ ಸಮಿತಿ ಮತ್ತು ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ಹೇಳಿದರು.

ದ.ಕ.ಜಿ.ಪಂ, ಸಾಮಾಜಿಕ ಅರಣ್ಯ ವಿಭಾಗ ಮಂಗಳೂರು ಮತ್ತು ಸಾಮಾಜಿಕ ಅರಣ್ಯ ವಲಯ ಪುತ್ತೂರು ಹಾಗೂ ತಾ.ಪಂ ಪುತ್ತೂರು ವತಿಯಿಂದ ತಾ.ಪಂ ತರಬೇತಿ ಕಾರ್ಯಗಾರ ಸಭಾಂಗಣದಲ್ಲಿ ಮೇ 22ರಂದು ನಡೆದ ರಾಷ್ಟ್ರೀಯ ಜೀವ ವೈವಿಧ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಭಿವೃದ್ಧಿಸೌಧ ಸುಸ್ಥಿರವಾಗಿ ಇರಬೇಕಾದರೆ ಜೀವಲೋಕದ ನೆಲೆಗಟ್ಟು ಸುರಕ್ಷಿತವಾಗಿ ಇರಬೇಕೆಂಬ ಅರಿವಾಗಬೇಕಿದೆ. ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಯಲ್ಲಿಯೇ ಇಂದಿನ ಬಿಕ್ಕಟ್ಟುಗಳಿಗೆ ಪರಿಹಾರವಿದೆ ಎಂಬ ವಿವೇಕ ಮೂಡಬೇಕು ಎಂದು ಅಭಿಪ್ರಾಯಪಟ್ಟ ಅವರು ಈ ಹಿಂದೆ ಜೀವ ವೈವಿಧ್ಯ ಕಾರ್ಯಚಟುವಟಿಕೆಗಾಗಿ ತುಂಬಾ ಪ್ರಯತ್ನ ಮಾಡಲಾಗಿತ್ತು. ಆದರೆ ಬಂಟ್ವಾಳದಲ್ಲಿ ಪೂರ್ಣಗೊಂಡಿದ್ದು, ಪುತ್ತೂರು ತಾಲೂಕಿನಲ್ಲಿ ಕೇವಲ 11 ಗ್ರಾ.ಪಂ ಮಾತ್ರ ಬುಕ್‌ಲೆಟ್ ಮಾಡಿದ್ದಾರೆ. ಮುಂದಿನ ದಿನ ಜೀವ ವೈವಿಧ್ಯ ದಾಖಲಿಸಿ ಸರಕಾರಕ್ಕೆ ಒಪ್ಪಿಸುವ ಕೆಲಸ ಆಗಬೇಕು. ಇದು ಪಂಚಾಯತ್ ಮಟ್ಟದಲ್ಲಿ ಆಗಬೇಕೆಂದರು.

ಭವಿಷ್ಯದ ದೃಷ್ಟಿಯಿಂದ ಜೀವವೈವಿಧ್ಯ ಸಂರಕ್ಷಣೆ ಅಗತ್ಯ :
ಸಾಮಾಜಿಕ ಅರಣ್ಯ ವಲಯಾಧಿಕಾರಿ ವಿದ್ಯಾರಾಣಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಸಸ್ಯಗಳ ಮೇಲೆ ಉಂಟಾಗುವ ಪರಿಣಾಮಗಳು ಜೀವಿಗಳ ಮೇಲೆ ಕಾಣುತ್ತದೆ. ಇಂತಹ ಸಂದರ್ಭದಲ್ಲಿ ಎಲ್ಲವೂ ನ್ಯಾಯ ಸಮ್ಮತವಾಗಿ ಹಂಚಿಕೆಯಾಗಬೇಕು. ನಾವು ಜೀವ ವೈವಿಧ್ಯದ ದಾಖಲೀಕರಣ ಮಾಡದೆ ಇದ್ದರೆ ವಿದೇಶಿಯರು ಅದನ್ನು ಪೇಟೆಂಟ್ ಮಾಡುವ ಸಾಧ್ಯತೆ ಇದೆ. ಇದರಿಂದ ಮುಂದಿನ ದಿನ ನಾವು ವಿದೇಶಿಯರನ್ನು ಅವಲಂಬಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿ ಗ್ರಾ.ಪಂಗಳಲ್ಲಿ ಜನತಾ ಜೀವ ವೈವಿಧ್ಯ ದಾಖಲಾತಿ ಅಗತ್ಯ ಎಂದ ಅವರು ಪಂಚಾಯಿತಿಗಳಲ್ಲಿ ರಚನೆಯಾಗುವ ಜೀವವೈವಿಧ್ಯ ನಿರ್ವಹಣಾ ಸಮಿತಿಗಳ ಮೇಲ್ವಿಚಾರಣೆಯನ್ನು ‘ಕರ್ನಾಟಕ ಜೀವ ವೈವಿಧ್ಯ ಮಂಡಳಿ’ ನಡೆಸುತ್ತದೆ. ಅದರ ಮಾಹಿತಿಯಿಂತೆ ರಾಜ್ಯದಲ್ಲಿ ಗ್ರಾ.ಪಂಗಳಲ್ಲಿ ಸಮಿತಿಗಳ ರಚನೆಯಾಗಿದೆ. ಈ ಸಮಿತಿ ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾ ರಂಭ ಮಾಡಲು ಆರಂಭಿಸಿದರೆ, ಗ್ರಾಮೀಣ ಭಾಗದ ಜೀವವೈವಿಧ್ಯತೆಯ ರಕ್ಷಣೆ ಮತ್ತು ನಿರ್ವಹಣೆಗೆ ಖಚಿತ ಚೌಕಟ್ಟು ಸಿಗಲಿದೆ ಎಂದು ಅವರು ಹೇಳಿದರು.

ಜನತಾ ಜೀವವೈವಿಧ್ಯ ದಾಖಲಾತಿ ತಯಾರಿಕೆ: ಜೈವಿಕ ವೈವಿಧ್ಯ ಅಧಿನಿಯವ ಪ್ರಕಾರ ಪ್ರತಿ ಜೀವವೈವಿಧ್ಯ ನಿರ್ವಹಣಾ ಸಮಿತಿಯು ತನ್ನ ಅಧಿಕಾರ ವ್ಯಾಪ್ತಿಯ ಪ್ರದೇಶದಲ್ಲಿ ‘ಜನತಾ ಜೀವವೈವಿಧ್ಯ ದಾಖಲಾತಿ (ಪಿಬಿಆರ್) ತಯಾರಿಸಬೇಕು. ಈ ದಾಖಲಾತಿಯು ಆಯಾ ಗ್ರಾ.ಪಂನ ಜೀವವೈವಿಧ್ಯತೆಯ ಮಾಹಿತಿ ಹಾಗೂ ಅಂಕಿ-ಅಂಶಗಳನ್ನು ಒಳಗೊಂಡಿರುತ್ತದೆ. ಪಂಚಾಯತ್ ವ್ಯಾಪ್ತಿಗೆ ಬರುವ ಅರಣ್ಯ ಭೂಮಿ, ಕೃಷಿ ಜಮೀನು, ಸಂರಕ್ಷಿತ ಅರಣ್ಯ ಪ್ರದೇಶ, ಅರಣ್ಯ ಸಂಪತ್ತು, ಗಿಡ-ಮರ, ಹುಳು-ಜಂತು, ಪ್ರಾಣಿ-ಪಕ್ಷಿ ಇವುಗಳ ವಿವಿಧ ಪ್ರಬೇಧ ಮತ್ತು ತಳಿಗಳ ಮಾಹಿತಿ, ಔಷಧೀಯ ಗಿಡಮೂಲಿಕೆಗಳ ವಿವರ, ಪಾರಂಪರಿಕ ತಾಣ, ಗುಡಿ-ಗುಂಡಾರಗಳ ಇತಿಹಾಸದ ಜತೆಗೆ ಪ್ರಸಕ್ತ ಅಂಕಿ-ಅಂಶಗಳನ್ನು ಈ ದಾಖಲಾತಿ ಒಳಗೊಂಡಿರುತ್ತದೆ.

ಪುತ್ತೂರು ತಾಲೂಕಿನಲ್ಲಿ 41 ಗ್ರಾ.ಪಂಗಳ ಪೈಕಿ ಕೇವಲ 11 ಗ್ರಾ.ಪಂಗಳಲ್ಲಿ ಮಾತ್ರ ಪಿ.ಪಿ.ಆರ್ ಮಾಡಲಾಗಿದೆ ಎಂದು ವಿದ್ಯಾರಾಣಿ ಹೇಳಿದರು. ಜೀವ ವೈವಿಧ್ಯ ಸಮಿತಿ ಪದನಿಮಿತ್ತ ಕಾರ್ಯದರ್ಶಿಯಾಗಿರುವ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಸ್ವಾಗತಿಸಿ, ಮೆನೇಜರ್ ಶಿವಪ್ರಕಾಶ್ ವಂದಿಸಿದರು. ಉದ್ಯೋಗ ಖಾತ್ರಿ ಯೋಜನೆಯ ಪ್ರಭಾರ ಅಧಿಕಾರಿ ಸಂದೇಶ್ ಮತ್ತು ಗ್ರಾ.ಪಂಗಳ ಪಿಡಿಓಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.