HomePage_Banner
HomePage_Banner
HomePage_Banner
HomePage_Banner

ಲಾಕ್‌ಡೌನ್ ನೆಪದಲ್ಲಿ ವಿಲಕ್ಷಣ ಘಟನೆ! ಆತೂರು: ವಿದ್ಯುತ್ ಕಂಬದಲ್ಲಿದ್ದ ಸ್ಥಾವರ ಪೆಟ್ಟಿಗೆ ಮಾಯ, ಬೇರೆಡೆಗೆ ಸ್ಥಳಾಂತರ..!!

Puttur_Advt_NewsUnder_1
Puttur_Advt_NewsUnder_1

ವಿಶೇಷ ವರದಿ/ಚಿತ್ರಗಳು: ಸಿದ್ದಿಕ್ ನೀರಾಜೆ

  • ಖಾಸಗಿ ವ್ಯಕ್ತಿಯ ತೋಟದಲ್ಲಿ ಅಳವಡಿಕೆ?
  • ಇಲಾಖಾ ಅಧಿಕಾರಿ ನನಗೇನೂ ಮಾಹಿತಿ ಇಲ್ಲ ಎಂದಿದ್ದಾರೆ-ಅಮೀನ್ ಅಹ್ಸನ್
  • ಸ್ಥಾವರವನ್ನು ಆ ರೀತಿ ಸ್ಥಳಾಂತರ ಮಾಡುವಂತಿಲ್ಲ-ಅಧೀಕ್ಷಕ ಇಂಜಿನಿಯರ್

ಉಪ್ಪಿನಂಗಡಿ: ವಿದ್ಯಾ ಸಂಸ್ಥೆಯ ಬೇಡಿಕೆಗೆ ಅನುಗುಣವಾಗಿ ಮಂಜೂರು ಆಗಿ, ಶಾಲಾ ಆವರಣದ ಒಳಗಡೆ ವಿದ್ಯುತ್ ಕಂಬದಲ್ಲಿ ಅಳವಡಿಸಲಾಗಿದ್ದ ಸ್ಥಾವರ ಪೆಟ್ಟಿಗೆ ಮಾಯವಾಗಿದ್ದು, ಅದನ್ನು ವಿದ್ಯುತ್ ಗುತ್ತಿಗೆದಾರರೋರ್ವರು ಬೇರೆ ಕಡೆಗೆ ಸ್ಥಳಾಂತರಿಸಿರುವ ಮತ್ತು ಘಟನೆಯ ಬಗ್ಗೆ ಮೆಸ್ಕಾಂ ಇಲಾಖೆ ಮೌನ ವಹಿಸಿರುವ ಆಪಾದನೆ ವ್ಯಕ್ತವಾಗಿದ್ದು, ಬಿಗಿಯಾಗಿದ್ದ ಲಾಕ್‌ಡೌನ್ ಸಂದರ್ಭದಲ್ಲಿ ನಡೆದ ಈ ವಿಲಕ್ಷಣ ಘಟನೆ ಬಗ್ಗೆ ಮೆಸ್ಕಾಂ ಇಲಾಖೆಯ ಕಾರ್‍ಯವೈಖರಿ ವಿರುದ್ಧ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ.

ಆತೂರು ಆಯಿಶಾ ಮಹಿಳಾ ಪದವಿ ಪೂರ್ವ ಕಾಲೇಜು ಆವರಣದೊಳಗೆ ವಿದ್ಯಾ ಸಂಸ್ಥೆಯ ವಿದ್ಯುತ್ ಬೇಡಿಕೆಗೆ ಅನುಗುಣವಾಗಿ ೬ ತಿಂಗಳ ಹಿಂದೆ ಮೆಸ್ಕಾಂ ಇಲಾಖೆಯಿಂದ ಸ್ಥಾವರ ಮಂಜೂರು ಆಗಿ ಅಳವಡಿಸಲಾಗಿತ್ತು. ಆದರೆ ಇದೀಗ ಕೆಲ ದಿನಗಳ ಹಿಂದೆ ಇಲ್ಲಿನ ಸ್ಥಾವರ ಪೆಟ್ಟಿಗೆಯನ್ನು ಗುತ್ತಿಗೆದಾರರೋರ್ವರು ತೆರೆವು ಮಾಡಿ ತೆಗೆದುಕೊಂಡು ಹೋಗಿದ್ದು, ವಿದ್ಯುತ್ ಕಂಬದಲ್ಲಿ ಸ್ಥಾವರ ಮಾಯವಾಗಿದೆ.

ಆತೂರು ಆಯಿಶಾ ವಿದ್ಯಾ ಸಂಸ್ಥೆಯ ಆವರಣದ ಒಳಗಡೆ ವಿದ್ಯುತ್ ಕಂಬದಲ್ಲಿ ಸ್ಥಾವರ ಅಳವಡಿಸಿದ ಸಂದರ್ಭದಲ್ಲಿ ತೆಗೆಯಲಾದ ಚಿತ್ರ

ತೋಟದೊಳಗೆ ಅಳವಡಿಕೆ?
ಇಲ್ಲಿಂದ ತೆರವು ಮಾಡಲಾಗಿರುವ ಸ್ಥಾವರ ಉಪ್ಪಿನಂಗಡಿ ಸಮೀಪ ಸಫಾ ನಗರದಲ್ಲಿ ವ್ಯಕ್ತಿಯೋರ್ವರ ತೋಟದಲ್ಲಿ ಅಳವಡಿಸಲಾಗಿದೆ ಎಂದು ಹೇಳಲಾಗಿದೆ. ಗುತ್ತಿಗೆದಾರರ ಮತ್ತು ಮೆಸ್ಕಾಂ ಅಧಿಕಾರಿ ಕೈಜೋಡಿಸಿಕೊಂಡು ಇದನ್ನು ಇಲ್ಲಿಂದ ತೆರವು ಮಾಡಿ ಖಾಸಗಿ ವ್ಯಕ್ತಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಗಂಭೀರ ಆಪಾದನೆ ವ್ಯಕ್ತವಾಗಿದೆ.

ಕಾನೂನು ಬದ್ಧವೋ? ಬಾಹಿರವೋ?
ಮೆಸ್ಕಾಂ ಸಂಸ್ಥೆಯಿಂದ ಸಂಸ್ಥೆಯೊಂದಕ್ಕೆ ಮಂಜೂರು ಆಗಿ ಬಳಕೆ ಆಗುತ್ತಿದ್ದ ಸ್ಥಾವರವನ್ನು ಶಾಲಾ, ಕಾಲೇಜು ರಜೆ ನಿಮಿತ್ತ ವಿದ್ಯುತ್ ಬಳಕೆ ಆಗುತ್ತಿಲ್ಲ ಎಂಬ ನೆಪ ಮಾಡಿಕೊಂಡು ಸ್ಥಾವರವನ್ನು ತೆರವು ಮಾಡಿ ಬೇರೆ ಕಡೆಗೆ ಸ್ಥಳಾಂತರ ಮಾಡುವುದು ಕಾನೂನು ಬದ್ಧವಾಗಿ ನಡೆಯುವುದೇ ಅಲ್ಲ ಬಾಹಿರವೋ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದ್ದು, ಸರ್ಕಾರಿ ಸಂಸ್ಥೆ ಮೆಸ್ಕಾಂ ಇಲಾಖೆಗೆ ಸೇರಿದ ವಿದ್ಯುತ್ ಕಂಬದಿಂದ ಸ್ಥಾವರವನ್ನು ಗುತ್ತಿಗೆದಾರರು ತಮ್ಮ ಇಚ್ಛಾನುಸಾರ ಅದನ್ನು ತೆರವು ಮಾಡಿ ಬೇರೆ ಕಡೆ ಹಾಕುವುದಕ್ಕೆ ಅಧಿಕಾರ ಇದೆಯಾ? ಎನ್ನುವ ಪ್ರಶ್ನೆಯೂ ವ್ಯಕ್ತವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮಕೈಗೊಳ್ಳುವಂತೆ ಆಗ್ರಹ ವ್ಯಕ್ತವಾಗಿದೆ.

ಮಾಹಿತಿ ಇಲ್ಲ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ-ಅಮೀನ್ ಅಹ್ಸನ್
ಲಾಕ್‌ಡೌನ್ ಹಿನ್ನೆಲೆಯಲ್ಲಿ ಶಾಲಾ, ಕಾಲೇಜು ರಜಾ ಇದ್ದುದರಿಂದಾಗಿ ಕಾಲೇಜು ಕಡೆ ಹೋಗಿರಲಿಲ್ಲ, ಇದೀಗ ಗಮನಕ್ಕೆ ಬಂದಿದ್ದು, ಮೆಸ್ಕಾಂ ಅಧಿಕಾರಿಯನ್ನು ಈ ಬಗ್ಗೆ ವಿಚಾರಿಸಿದಾಗ “ನನಗೇನೂ ಮಾಹಿತಿ ಇಲ್ಲ, ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ, ಈ ಮಧ್ಯೆ ಗುತ್ತಿಗೆದಾರರು ಶಾಲಾ ಉಪಾಧ್ಯಕ್ಷರಿಗೆ ಕರೆ ಮಾಡಿ ತಾತ್ಕಾಲಿಕವಾಗಿ ಬೇರೆ ಕಡೆಗೆ ತೆಗೆದುಕೊಂಡು ಹೋಗುತ್ತೇನೆ, ಆಮೇಲೆ ತಂದು ಅಳವಡಿಸುವುದಾಗಿ ಹೇಳಿದ್ದಾರೆ” ಎಂದು ಆತೂರು ಆಯಿಶಾ ವಿದ್ಯಾ ಸಂಸ್ಥೆಯ ಸಂಚಾಲಕ ಅಮೀನ್ ಅಹ್ಸನ್ “ಸುದ್ದಿ”ಯೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.

ವಿದ್ಯಾ ಸಂಸ್ಥೆಯ ಆವರಣದ ಒಳಗಡೆ ವಿದ್ಯುತ್ ಕಂಬದಲ್ಲಿ ಸ್ಥಾವರ ಮಾಯವಾಗಿರುವುದು

ಸ್ಥಾವರವನ್ನು ಆ ರೀತಿ ಸ್ಥಳಾಂತರ ಮಾಡುವಂತಿಲ್ಲ-ಅಧೀಕ್ಷಕ ಇಂಜಿನಿಯರ್
ಯಾವುದೇ ಸಂಸ್ಥೆಯ ಬೇಡಿಕೆಗೆ ಅನುಗುಣವಾಗಿ ಹಾಕಲಾಗಿರುವ ಸ್ಥಾವರವನ್ನು ತೆರವು ಮಾಡಿ ಬೇರೆ ಕಡೆಗೆ ಹಾಕುವ ಹಾಗಿಲ್ಲ, ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವುದಾಗಿ ಮಂಗಳೂರು ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಮಂಜಪ್ಪ ಪ್ರತಿಕ್ರಿಯಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.