HomePage_Banner
HomePage_Banner
HomePage_Banner
HomePage_Banner

ರೈತರಿಗೆ ರೂ.3 ಲಕ್ಷ ತನಕ ಶೂನ್ಯ ಬಡ್ಡಿ ದರದ ಸಾಲ | 2019ರ ಏಪ್ರಿಲ್ ತನಕದ ಸಾಲದ ಮೇಲಿನ ಬಡ್ಡಿ ಮನ್ನಾ ಸಿಎಂ ಯಡಿಯೂರಪ್ಪ ಘೋಷಣೆ

Puttur_Advt_NewsUnder_1
Puttur_Advt_NewsUnder_1

ಬೆಂಗಳೂರು:ಕೊರೊನಾ ವೈರಸ್ ಸೋಂಕಿನಿಂದ ತತ್ತರಿಸಿರುವ ರಾಜ್ಯದ ರೈತರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 3 ಲಕ್ಷ ರೂಪಾಯಿವರೆಗೆ ಶೂನ್ಯ ಬಡ್ಡಿದರದಲ್ಲಿ ಅಲ್ಪಾವಧಿ ಸಾಲ ನೀಡಲು ಮುಂದಾಗಿದ್ದಾರೆ.ಮುಂಗಾರು ಆರಂಭವಾಗುತ್ತಿದ್ದರೂ ಕೊರೊನಾ ಸೋಂಕಿನಿಂದಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರೂಪಾಯಿ ಅಲ್ಪಾವಧಿ ಕೃಷಿ ಸಾಲ ನೀಡುವುದಾಗಿ ರಾಜ್ಯ ಸರಕಾರ ಘೋಷಿಸಿದೆ.ಹೆಚ್ಚುವರಿ ಸಾಲ ಪಡೆಯಲು ಕೂಡ ಅವಕಾಶವಿದೆ.ಆದರೆ 3 ಲಕ್ಷಕ್ಕಿಂತ ಅಧಿಕ ಸಾಲ ಪಡೆಯುವ ರೈತರು ಸಾಮಾನ್ಯ ಬಡ್ಡಿ ದರವನ್ನು ಪಾವತಿಸಬೇಕಾಗಿದೆ.ಇನ್ನು ಶೇ.25ರಷ್ಟು ಹೊಸ ರೈತರಿಗೆ ಸಾಲ ನೀಡುವುದಾಗಿ ಯಡಿಯೂರಪ್ಪ ಘೋಷಿಸಿದ್ದು, ಹೊಸ ಸಾಲದಲ್ಲಿ ಶೇ.24.10 ರಷ್ಟು ಸಾಲವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಕಡ್ಡಾಯವಾಗಿ ನೀಡಬೇಕೆಂದು ಸೂಚನೆಯನ್ನು ನೀಡಿದ್ದಾರೆ.

ಬಡ್ಡಿ ಮನ್ನಾ: 2019ರ ಎಪ್ರಿಲ್ 1ರವರೆಗೆ ಪಡೆದಿರುವ ಸಾಲದ ಮೇಲಿನ ಬಡ್ಡಿ ದರವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿದೆ.ಆದರೆ ಸಹಕಾರಿ ಸಂಘಗಳ ಮೂಲಕ ಪಡೆದ ಸಾಲಕ್ಕೆ ಮಾತ್ರವೇ ಇದು ಅನ್ವಯವಾಗಲಿದೆ.ಅಲ್ಲದೇ ಕೃಷಿಯೇತರ ಸಾಲ ಪಡೆದವರು ಈ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಘೋಷಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

3 Comments

 1. manuuana

  About 80% of the agricultural land holder doesn’t include in all the AGRICULTURISTS list of govt for any services, CATEGORIZE THE AGRICULTURISTS into A, B, C, D, E groups and declare services

  Reply
 2. V. Raj

  ಸಹಕಾರ ಸಂಘಗಳಲ್ಲಿ 3ಲಕ್ಷ ದವರಿಗೆ ಸಾಲದ ಸ್ಕೀಮ್ ಸುಮಾರು ವರ್ಶಗಳಿಂದಲೂ ಇದೆ ಆದರೆ dcc ಬ್ಯಾಂಕ್ ಗಳಲ್ಲಿ ಎಲ್ಲಾ ರೈತರಿಗೂ ಇಷ್ಟು ಮೊತ್ತದ ಸಾಲ ಬಿಡುಗಡೆ ಮಾಡುವಷ್ಟು ವ್ಯವಸ್ಥೆ ಇಲ್ಲದೆ ಇರುವ ಕಾರಣ ರೈತರಿಗೆ 3 ಲಕ್ಷದ ಸಾಲ ಮರೀಚಿಕೆ ಯಾಗಿದೆ ಸಂಬಂಧ ಪಟ್ಟವರು ಕಾರಣ ತಿಳಿಸಿ ಧನ್ಯರಾಗಿ ದಯವಿಟ್ಟು…

  Reply
 3. ಬಸವರಾಜ ಹಿರೇಮಠ

  ಉಪಯೋಗ ವಿಲ್ಲದ ಯೋಜನೆ ಯಾವ ರೈತರಿಗೆ ಯಾವ ಸಹಕಾರಿ ಬ್ಯಾಂಕಿನಲ್ಲಿ 3ಲಕ್ಷದ ವರೆಗೆ ಸಾಲ ನೀಡಿದ್ದಾರೆ ತಿಳಿಸಿ , ರಾಜಕೀಯ ದಲ್ಲಿ ಪ್ರಭಾವಶಾಲಿ ಇದ್ದವರು ಮಾತ್ರ ಈ ಯೋಜನೆ ಅನುಕೂಲವಾಗಿದೆ ಅಷ್ಟೇ

  Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.