Home_Page_Advt
Home_Page_Advt
Home_Page_Advt

ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಮಹಿಳೆಗೆ ಸೋಂಕು ದೃಢ | ಶಿರ್ಲಾಲು ಪ್ರದೇಶದ ಏಳು ಮನೆಗಳು ಕಂಟೈನ್ಮೆಂಟ್ ವಲಯ

Puttur_Advt_NewsUnder_1
Puttur_Advt_NewsUnder_1
  • ಸ್ಥಳಕ್ಕೆ ಶಾಸಕ ಹರೀಶ್ ಪೂಂಜ, ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಆರೋಗ್ಯಾಧಿಕಾರಿ ಕಲಾಮಧು ಭೇಟಿ ನೀಡಿ ಪರಿಶೀಲನೆ

ಬೆಳ್ತಂಗಡಿ: ತಾಲೂಕಿನ ಶಿರ್ಲಾಲು ನಿವಾಸಿಯಾದ 38 ವರ್ಷದ ಮಹಿಳೆಯೊಬ್ಬರಿಗೆ ಕೋವಿಡ್ -19 ಸೋಂಕು ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಶಿರ್ಲಾಲಿನ ಮಜಲುಪಲ್ಕೆ ಪ್ರದೇಶದ ಏಳು ಮನೆಗಳನ್ನು ಕಂಟೈನ್ಮೆಂಟ್ ವಲಯವೆಂದು ಗುರುತಿಸಲಾಗಿದೆ.

ಮಹಿಳೆಯು ಶಿರ್ಲಾಲಿನ ಮಜಲುಪಲ್ಕೆಯಿಂದ ಕನ್ಯಾಡಿ-1 ಪಡ್ಪು ಎಂಬಲ್ಲಿಯ ಅವರ ಸಂಬಂಧಿಕರ ಮನೆಗೆ ತೆರಳಿದ್ದು ಈ ಸಂದರ್ಭದಲ್ಲಿ ಸ್ಥಳೀಯರು ತಾಲೂಕು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಬಳಿಕ ಅಲ್ಲಿಗೆ ತೆರಳಿದ ಆರೋಗ್ಯ ಇಲಾಖೆ ಸಿಬ್ಬಂದಿ ಆ ಮನೆಯ ಎಲ್ಲರನ್ನೂ ಕೂಡ ಹೋಮ್ ಕ್ವಾರಂಟೈನ್ ಮಾಡಲಾಗಿದೆ.

ಮಹಿಳೆಗೆ ಕೋವಿಡ್ -19 ಸೋಂಕಿನ ಲಕ್ಷಣಗಳು ವ್ಯಕ್ತವಾದ್ದರಿಂದ ಅವರನ್ನು ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.  ಸ್ಥಳಕ್ಕೆ ಶಾಸಕ ಹರೀಶ್ ಪೂಂಜ, ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಆರೋಗ್ಯಾಧಿಕಾರಿ ಡಾ.ಕಲಾಮಧು, ಅಳದಂಗಡಿ ಆಸ್ಪತ್ರೆ ವೈದ್ಯೆ ಡಾ.ಚೈತ್ರಾ, ವೇಣೂರು ಎಸ್ ಐ ಲೋಲಾಕ್ಷ, ಎಎಸ್ ಐ ಜಯಪೂಜಾರಿ ಪೊಲೀಸ್ ಸಿಬ್ಬಂದಿ ಕೃಷ್ಣ, ತಾ.ಪಂ. ಸದಸ್ಯ ಜಯಶೀಲಾ, ಪಿಡಿಒ ರಾಜು, ಗಣಪತಿ ಪಂಚಾಯತ್ ಸದಸ್ಯರು, ಆಶಾ ಕಾರ್ಯಕರ್ತೆಯರು ಆಗಮಿಸಿ ಸ್ಥಳ ಪರಿಶೀಲಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.