HomePage_Banner
HomePage_Banner
HomePage_Banner
HomePage_Banner

ಕೊರೋನಾ ಸಾಂಕ್ರಾಮಿಕ ರೋಗ – ರೋಗ ನಿರೋಧಕ ಶಕ್ತಿ ಹೆಚ್ಚಿಲು ಔಷಧಿ: ಪ್ರೆಸ್‌ಕ್ಲಬ್‌ಗೆ ಐ.ಹೆಚ್.ಎಮ್.ಎ ಅಧ್ಯಕ್ಷರಿಂದ ಹೋಮಿಯೋಪತಿ ಔಷಧಿ ವಿತರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಕೊರೋನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವವರ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಹೋಮಿಯೋಪತಿ ಔಷಧಿ ನೀಡುತ್ತಿರುವ ಇಂಡಿಯನ್ ಹೋಮಿಯೋಪತಿ ಮೆಡಿಕಲ್ ಅಸೋಸಿಯೇಶನ್ ವತಿಯಿಂದ ತಾಲೂಕಿನ ಪತ್ರಕರ್ತರಿಗೆ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಔಷಧಿ ವಿತರಣೆ ಮಾಡಲಾಯಿತು.

ಇಂಡಿಯನ್ ಹೋಮಿಯೋಪತಿ ಮೆಡಿಕಲ್ ಅಸೋಸಿಯೇಶನ್ ಅಧ್ಯಕ್ಷ ಡಾ. ಪ್ರವೀಣ್ ರೈ ಪಾಂಬಾರು ಅವರು ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಂಶುದ್ದೀನ್ ಸಂಪ್ಯ ಅವರ ಮೂಲಕ ಪತ್ರಕರ್ತರಿಗೆ ವಿತರಿಸಿದರು. ಬಳಿಕ ಅವರು ಮಾತನಾಡಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರೀಯ ಹೋಮಿಯೋಪತಿಕ್ ಸಂಶೋಧನಾ ಸಂಸ್ಥೆ ಅಧ್ಯಯನ ನಡೆಸಿದಂತೆ ಕೊರೋನಾ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ‘ಅರ್ಸೆನಿಕಂ ಅಲ್ಬಂ-೩೦’ ಮಾತ್ರೆಯೇ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಹಾಗಾಗಿ ಕೊವಿಡ್ ವಾರಿಯರ್‌ಗಳಾದ ಹೋಮ್ ಗಾರ್ಡ್, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು, ಪತ್ರಕರ್ತರಿಗೆ ಉಚಿತ ವಿತರಣೆ ಮಾಡಲಾಗುತ್ತಿದೆ ಎಂದು ಡಾ.ಪ್ರವೀಣ್ ರೈ ಹೇಳಿದರು. ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಸದಸ್ಯರಾದ ಕುಮಾರ್, ರಾಜೇಶ್ ಪಟ್ಟೆ, ಉಮಾಶಂಕರ್, ಪ್ರವೀಣ್ ಕುಮಾರ್ ಬೊಳುವಾರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.