Home_Page_Advt
Home_Page_Advt
Home_Page_Advt

ಕೃಷಿಕರಿಗೆ, ಸಾರ್ವಜನಿಕರಿಗೆ ವಿತರಣೆಗಾಗಿ 35 ಸಾವಿರ ಸಸಿಗಳು: ಪುತ್ತೂರು ಸಾಮಾಜಿಕ ಅರಣ್ಯದ ಮುಕ್ವೆ ನರ್ಸರಿಯಲ್ಲಿ ಸಿದ್ಧತೆ

Puttur_Advt_NewsUnder_1
Puttur_Advt_NewsUnder_1
  • ನೆಡುತೋಪಿಗಾಗಿ 9,200 ಹಣ್ಣಿನ ಸಸಿಗಳು
  • ಸಾರ್ವಜನಿಕರಿಗೆ ಸಸಿ ವಿತರಣೆ
  • ಉದ್ಯೋಗ ಖಾತರಿಯಲ್ಲೂ ಸಸಿಗಳ ವಿತರಣೆ

ಪುತ್ತೂರು: ಪುತ್ತೂರು ಸಾಮಾಜಿಕ ಅರಣ್ಯ ವಲಯದ ವ್ಯಾಪ್ತಿಗೆ ಸಂಬಂಧಿಸಿ ಈ ಬಾರಿ 2020ರ ಮಳೆಗಾದಲ್ಲಿ ರಿಯಾಯಿತಿ ದರದಲ್ಲಿ ಸಾರ್ವಜನಿಕ ಮತ್ತು ಕೃಷಿಕರಿಗೆ ವಿತರಣೆ ಮಾಡುವ ನಿಟ್ಟಿನಲ್ಲಿ ಇಲಾಖೆಯ ಮುಕ್ವೆ ನರ್ಸರಿಯಲ್ಲಿ ಒಟ್ಟು ೩೫ಸಾವಿರ ಸಸಿಗಳನ್ನು ಬೆಳೆಸಲಾಗಿದೆ ಜೊತೆಗೆ 23 ಹೆಕ್ಟೇರ್ ನೆಡುತೋಪುಗಳಲ್ಲಿ ಸಸಿಗಳನ್ನು ನೆಡಲು 9,2೦೦ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ಬೆಳೆಸಲಾಗಿದೆ ಎಂದು ಪುತ್ತೂರು ಸಾಮಾಜಿಕ ವಲಯ ಅರಣ್ಯಾಧಿಕಾರಿ ವಿದ್ಯಾರಾಣಿ ಅವರು ತಿಳಿಸಿದ್ದಾರೆ.

ಸಾರ್ವಜನಿಕರಿಗೆ ವಿತರಣೆಗಾಗಿ ವಿವಿಧ ಜಾತಿಯ 6*9ರ ಅಳತೆ ಗಾತ್ರದ ಪಾಲಿತೀನ್ ಚೀಲಗಳಲ್ಲಿ ೨೦ಸಾವಿರ ಸಸಿಗಳು ಮತ್ತು ೮*೧೨ ಅಳತೆ ಗಾತ್ರದ ಚೀಲಗಳಲ್ಲಿ ೧೨ಸಾವಿರ ಸಸಿಗಳು ನಿರ್ದಿಷ್ಠ ದರದಲ್ಲಿ ಹಾಗು ಆಸಕ್ತ ಫಲಾನುಭವಿಗಳಿಗಾಗಿ ೩ಸಾವಿರ ಕಸಿ ಏರು ಸಸಿಗಳು ಬೆಳೆಸಲಾಗಿದ್ದು, ನರೇಗದ ಮೂಲಕ ಗೇರು ಸಸಿಗಳನ್ನು ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ನೀಡಲಾಗುತ್ತದೆ. ಜೊತೆಗೆ ಗಿಡ ನಾಟಿ ಮಾಡಲು ಕೂಲಿ ಪಾವತಿ ಕೂಡಾ ಇಲಾಖೆ ವತಿಯಿಂದ ಪಾವತಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಾರ್ವಜನಿಕರಿಗೆ ಸಸಿ ವಿತರಣೆ:
ಸಾರ್ವಜನಿಕರಿಗೆ ವಿತರಣೆ ಮಾಡುವ ಸಸಿಗಳಾದ ಸಾಗುವಾನಿ, ಮಹಾಗನಿ, ಬೀಟೆ, ಕಹಿಬೇವು, ಸೀಮರೂಬ, ಪೇರಳೆ, ಹಲಸು, ಹೆಬ್ಬಲಸು, ಕಾಡುಬಾದಾಮಿ, ಪುನರ್‌ಪುಳಿ, ಶ್ರೀಗಂಧ, ಸಂಪಿಗೆ, ರಕ್ತಚಂದನ, ಸೀತಾಫಲ, ಮಾವು, ಕೋಳಿಚುಟ್ಟು, ನೇರಳೆ, ಬೇಂಗ, ಅಶೋಕ, ಕಕ್ವೆ, ದಾಲ್ಚೀನಿ, ರೆಂಜ, ಕಿರಾಲ್‌ಬೋಗಿ, ನೆಲ್ಲಿ, ನುಗ್ಗೆ, ಬಿಲ್ವಪತ್ರೆ, ಹೆಬ್ಬೇವು, ತಬೋಬಿಯ, ಬನ್ನಿ, ಬಸವನಪಾದ ಸಸಿಗಳು ಬೆಳಸಲಾಗಿದ್ದು, ಇವುಗಳ ಪೈಕಿ ೬*೯ರ ಚೀಲಕ್ಕೆ ರೂ. ೧ ಮತ್ತು ೮*೧೨ ಚೀಲ ರೂ. ೩ ದರ ನಿಗದಿ ಪಡಿಸಲಾಗಿದೆ. ಆಸಕ್ತರು ಕಛೇರಿಗೆ ಅರ್ಜಿ ಸಲ್ಲಿಸಿ ಸಸಿಗಳನ್ನು ಪಡೆದುಕೊಳ್ಳಬಹುದು.

ಉದ್ಯೋಗ ಖಾತರಿಯಲ್ಲೂ ಸಸಿಗಳ ವಿತರಣೆ:
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪುತ್ತೂರು ತಾಲೂಕು ವ್ಯಾಪ್ತಿಯ ವಿವಿಧ ಗ್ರಾ.ಪಂ ವ್ಯಾಪ್ತಿಯ ಫಲಾನುಭವಿಗಳಿಗೆ ಜಾಗಗಳಲ್ಲಿ ನಾಟಿ ಮಾಡಲು 3ಸಾವಿರ ಕಸಿಗೇರು ಗಿಡ ಮತ್ತು ವಿವಿಧ ಅರಣ್ಯ ಜಾತಿಯ ಗಿಡಗಳು ಲಭ್ಯವಿದೆ. ಆಸಕ್ತ ಫಲಾನುಭವಿಗಳಿಗೆ ಉಚಿತವಾಗಿ ಗಿಡಗಳನ್ನು ನೀಡುವುದರ ಜೊತೆಗೆ ಗಿಡ ನಾಟಿ ಮಡುವುದಕ್ಕೆ ಕೂಲಿ ಪಾವತಿ ಕೂಡ ಯೋಜನೆಯಡಿ ಇಲಾಖಾವತಿಯಿಂದ ಪಾವತಿ ಮಾಡಲಾಗುತ್ತದೆ.

ನೆಡುತೋಪಿಗಾಗಿ ೯,೨೦೦ ಮಿಶ್ರ ಜಾತಿ ಸಸಿಗಳು:
ಸಾಮಾಜಿಕ ವಲಯ ಅರಣ್ಯ ಇಲಾಖೆಗೆ ಒಳಪಟ್ಟು ತಾಲೂಕಿನಲ್ಲಿ ೨೩ ಹೆಕ್ಟೇರ್ ನೆಡುತೋಪುಗಳಿದ್ದು, ಪ್ರತಿ ಹೆಕ್ಟೇರ್‌ಗೆ ೪೦೦ ಗಿಡಗಳಂತೆ ೯,೨೦೦ ಸಸಿಗಳನ್ನು ನೆಡುವ ನಿಟ್ಟಿನಲ್ಲಿ ನರ್ಸರಿಯಲ್ಲಿ ವಿವಿಧ ಜಾತಿಯ ಹಣ್ಣಿನ ಮತ್ತು ಮಿಶ್ರ ತಳಿಯ ಸಸಿಗಳನ್ನು ಬೆಳೆಸಲಾಗಿದೆ. ಅಕೇಷಿಯ ಮತ್ತು ಗಾಳಿ ಸಸಿಗಳನ್ನು ಬಿಟ್ಟು ಉಳಿದೆಲ್ಲಾ ಜಾತಿಗಳ ಸಸಿಗಳನ್ನು ನೆಡಲಾಗುತ್ತದೆ. ಇಲಾಖಾ ವ್ಯಾಪ್ತಿಗೆ ಒಳಪಟ್ಟ ಬೇರಿಕೆ, ಬೀತಲಪು, ಪಾದೆಕಲ್ಲು, ಮುಡಪಿನಡ್ಕದ ಪಳಂಬೆ, ನಿಡ್ಪಳ್ಳಿ, ಬೊಳುವಾರು, ನೆಹರುನಗರ ರೈಲ್ವೇ ಲೈನ್ ಬದಿಯಲ್ಲಿ ಗಿಡಗಳನ್ನು ನೆಡಲಾಗುವುದು.

ಕೂಲಿ ಪಾವತಿ ಯೋಜನೆಯಡಿ ಹೊಂಡ ತೋಡಿ ಗಿಡ ನೆಡುವುದು, ಮಣ್ಣಿನ ಅಗತೆ ಕೆಲಸ, ಗೊಬ್ಬರ ಹಾಕುವುದು. ಆಸಕ್ತ ಮತ್ತು ಅರ್ಹ ಫಲಾನುಭವಿಗಳು ಸಂಬಂಧಿಸಿದ ಗ್ರಾ.ಪಂಗಳಲ್ಲಿ ನರೇಗಾ ಯೋಜನೆಯಡಿ ಉದ್ಯೋಗ ಚೀಟಿಯನ್ನು ನೋಂದಾಯಿಸಿಕೊಂಡು ಪೂರ್ಣ ವಿಳಾಸ ಮತ್ತು ಸ್ಥಳದ ವಿವರದೊಂದಿಗೆ (ಆರ್.ಟಿ.ಸಿ, ನಕ್ಷೆ ಪ್ರತಿ, ಸಣ್ಣ ರೈತ ದೃಢೀಕರಣ ಪತ್ರ, ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಖಾತೆ ವಿವರ, ಆಧಾರ್‌ಕಾರ್ಡ್ ಪ್ರತಿ ಇತ್ಯಾದಿ) ಸಸಿ ಬೇಡಿಕೆ ವಿವರಗಳನ್ನು ದರ್ಬೆಯಲ್ಲಿರುವ ಸಾಮಾಜಿಕ ಅರಣ್ಯ ವಲಯ ಅಧಿಕಾರಿಗಳ ಕಚೇರಿಗೆ ನೀಡಬೇಕು. ಗಿಡಗಳನ್ನು ಇಲಾಖೆಯ ಮುಕ್ವೆ ನರ್ಸರಿಯಿಂದ ಪಡೆದು ಕೊಳ್ಳಬಹದು – ವಿದ್ಯಾರಾಣಿ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಪುತ್ತೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.