Home_Page_Advt
Home_Page_Advt
Home_Page_Advt

ಜಿಲ್ಲೆಯಲ್ಲಿ ಪಾಕೃತಿಕ ವಿಕೋಪ – ತುರ್ತು ಪರಿಸ್ಥಿತಿಗೆ ಸಿದ್ಧತೆ

Puttur_Advt_NewsUnder_1
Puttur_Advt_NewsUnder_1
  • ತಾಲೂಕುಗಳಿಗೆ ನೋಡೆಲ್ ಅಧಿಕಾರಿಗಳ ನಿಯೋಜನೆ – ಪುತ್ತೂರಿಗೆ ನವೀನ್ ಕುಮಾರ್ ಭಂಡಾರಿ

ಪುತ್ತೂರು: ಪ್ರಾಕೃತಿಕ ವಿಕೋಪ – ತುರ್ತು ಪರಿಸ್ಥಿತಿಯನ್ನು ಅವಲೋಕಿಸಿ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ತಾಲೂಕು ಮಟ್ಟದ ನೋಡೆಲ್ ಅಧಿಕಾರಿಗಳನ್ನು ದ.ಕ.ಜಿಲ್ಲಾಧಿಕಾರಿಗಳು ನಿಯೋಜಿಸಿದ್ದು ಪುತ್ತೂರು ತಾಲೂಕಿಗೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ ಭಂಡಾರಿ ಅವರು ನೋಡೆಲ್ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದಾರೆ.

ಕೆಲವು ದಿನಗಳಲ್ಲಿ ಮಳೆಗಾಲವು ಪ್ರಾರಂಭವಾಗಲಿದ್ದು, ಮುಂಗಾರು ಮಳೆ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಸಂಬಂಧ ಪಟ್ಟ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆಯನ್ನು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರ ನೇತೃತ್ವದಲ್ಲಿ ಚರ್ಚಿಸಿದ ಬಳಿಕ ನೋಡೆಲ್ ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ. ಈ ಹಿಂದಿನ ವರ್ಷಗಳಲ್ಲಿ ಮುಂಗಾರು ಮಳೆಯಿಂದ ಹಾನಿಗೊಳಗಾದ ಪ್ರತೀ ಪ್ರದೇಶಗಳನ್ನು ಗುರುತಿಸಲಾಗಿದ್ದು, ಪ್ರತೀ ತಾಲೂಕಿಗೆ ಒಬ್ಬರು ಜಿಲ್ಲಾಮಟ್ಟದ ಅಧಿಕಾರಿಯನ್ನು ನೋಡೆಲ್ ಅಧಿಕಾರಿಯನ್ನಾಗಿ ಮತ್ತು ಪ್ರತಿ ತಾಲೂಕುಗಳಲ್ಲಿ ಗುರುತಿಸಲಾದ ಪ್ರದೇಶಗಳ ವ್ಯಾಪ್ತಿಗೆ ತಾಲೂಕು ಮಟ್ಟದ ಅಧಿಕಾರಿಗಳನ್ನು ನೋಡೆಲ್ ಅಧಿಕಾರಿಗಳನ್ನಾಗಿ ನೇಮಿಸಿ ಪ್ರಾಕೃತಿಕ ವಿಕೋಪದ ಘಟನೆಗಳು ವರದಿಯಾದ ತಕ್ಷಣ ಕಾರ್ಯ ಪ್ರವೃತರಾಗಲು ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಒಟ್ಟು ಕಾರ್ಯವ್ಯವಸ್ಥೆಯನ್ನು ಜಿಲ್ಲಾಧಿಕಾರಿಗಳು ನೋಡಿಕೊಳ್ಳಲಿದ್ದು, ನಿರ್ದೇಶನಗಳನ್ನು ಅಪರ ಜಿಲ್ಲಾಧಿಕಾರಿಯವರು ಮತ್ತು ಜಿ.ಪಂ ಸಿ.ಇ.ಒ ಅವರು ನೆರವೇರಿಸಲಿದ್ದು, ಪ್ಲಾನಿಂಗ್ ಸೆಕ್ಷನ್‌ನಲ್ಲಿ ಯೋಜನಾಧಿಕಾರಿಗಳು, ರಕ್ಷಣಾ ಕಾರ್ಯಗಳಿಗೆ ಪೊಲೀಸರು ಮತ್ತು ಅಗ್ನಿಶಾಮಕದಳದವರು ಹಾಗು ಗೃಹರಕ್ಷಕದಳದವರು. ಲಾಜಿಸ್ಟಿಕ್ ವಿಭಾಗದಲ್ಲಿ ಆರ್.ಟಿ.ಒ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸಹಕಾರ ನೀಡಲಿದೆ. ಪುತ್ತೂರು ತಾಲೂಕು ನೋಡಲ್ ಅಧಿಕಾರಿಯಾಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಅವರು ನಿಯೋಜನೆಗೊಂಡಿದ್ದಾರೆ.

ನೆರೆಪೀಡಿತ, ತಗ್ಗು, ಭೂಕುಸಿತ ಪ್ರದೇಶದ ನೋಡಲ್ ಅಧಿಕಾರಿಗಳು:
ಪುತ್ತೂರಿಗೆ ೬ ಮಂದಿ ನೋಡಲ್ ಅಧಿಕಾರಿಗಳು:
ಪುತ್ತೂರಿಗೆ ಸಂಬಂಧಿಸಿ ನೆರೆ ಪೀಡಿತ, ತಗ್ಗು ಪ್ರದೇಶಗಳು ಮತ್ತು ಭೂಕುಸಿತ ಉಂಟಾಗುವ ಪ್ರದೇಶದ ನೋಡಲ್ ಅಧಿಕಾರಿಯಾಗಿ ೬ ಮಂದಿ ಅಧಿಕಾರಿಗಳನ್ನು ನಿಯೋಜನೆಗೊಳಿಸಲಾಗಿದ್ದು, ಪುತ್ತೂರಿನಲ್ಲಿ ಉಪ್ಪಿನಂಗಡಿ, ಹೊಸಮಠ, ಶಿರಾಡಿ, ಬಾಳಿಲ, ಉದ್ಯಾನ ಸೇರಿದಂತೆ ತಾಲೂಕಿನ ಇತರ ತಗ್ಗು ಪ್ರದೇಶಗಳು ಮತ್ತು ಭೂಕುಸಿತ ಪ್ರದೇಶಗಳನ್ನು ಪಟ್ಟಿ ಮಾಡಿದ್ದು, ಈ ಭಾಗಗಳಿಗೆ ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು ಕೆ, ವಲಯ ಅರಣ್ಯ ಸಂರಕ್ಷಣಾಧಿಕಾರಿ ಎನ್ ಸುಬ್ರಹ್ಮಣೇಶ್ವರ ರಾವ್, ಮೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ನರಸಿಂಹ, ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ.

ಕಡಬಕ್ಕೆ ೭ ಮಂದಿ ನೋಡಲ್ ಅಧಿಕಾರಿಗಳು:
ಕಡಬ ಭಾಗದ ಹೊಸಮಠ, ನೂಜಿ, ಕುಂತೂರು, ಪೇರಾಬೆ, ಆಲಂಗಾರು, ಬಿಳಿನೆಲೆ ಮತ್ತು ಇತರ ತಗ್ಗು ಪ್ರದೇಶಗಳು ಮತ್ತು ಭೂಕುಸಿತ ಪ್ರದೇಶಗಳಿಗೆ ೭ ಮಂದಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಕಡಬ ತಹಶೀಲ್ದಾರ್, ಪಂಚಾಯತ್ ರಾಜ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಮೆಸ್ಕಾಂ ಕಡಬದ ಸಹಾಯಕ ಕಾರ್ಯಪಾಲ ಇಂಜಿನಿಯರ್, ಪುತ್ತೂರು ವಲಯ ಅರಣ್ಯ ಸಂರಕ್ಷಣಾಧಿಕಾರಿ, ಪುತ್ತೂರು ಉಪವಿಭಾಗ ಪಂಚಾಯತ್ ರಾಜ್ ಇಲಾಕೆ ಇಂಜಿನಿಯರ್, ಲೋಕೋಪಯೋಗಿಇಲಾಖೆ ಪುತ್ತೂರು ಉಪವಿಭಾಗದ ಸಹಾಯಕ ಇಂಜಿನಿಯರ್ ಕಾರ್ಯನಿರ್ವಹಿಸಲಿದ್ದಾರೆ.

ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡಿ:
ಮುಂಜಾಗ್ರತೆ ಕ್ರಮಗಳ ಬಗ್ಗೆ ಸಂಬಂಧ ಪಟ್ಟ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ನೋಡೆಲ್ ಅಧಿಕಾರಿಯನ್ನಾಗಿ ಮತ್ತು ಪ್ರತಿ ತಾಲೂಕುಗಳಲ್ಲಿ ಗುರುತಿಸಲಾದ ಪ್ರದೇಶಗಳ ವ್ಯಾಪ್ತಿಗೆ ತಾಲೂಕು ಮಟ್ಟದ ಅಧಿಕಾರಿಗಳನ್ನು ನೋಡೆಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದ್ದು, ವಹಿಸಿಕೊಡಲಾದ ವ್ಯಾಪ್ತಿಗೆ ಸಂಬಂಧಿಸಿದ ಪ್ರದೇಶಗಳಲ್ಲಿ ಮಳೆಯಿಂದಾಗಿ ಸಾರ್ವಜನಿಕ ಆಸ್ತಿಪಾಸ್ತಿಗೆ ತೊಂದರೆಯಾದಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಸ್ಥಳೀಯ ಅಧಿಕಾರಿಗಳ ಸಹಕಾಋವನ್ನು ಪಡೆದು ತುರ್ತು ಕ್ರಮಗಳನ್ನು ಕೈಗೊಳ್ಳುವುದು ಮತ್ತು ಜಿಲ್ಲಾಧಿಕಾರಿಯವರಿಗೆ ಮಾಹಿತಿ ನೀಡುವುದು. ಜಿಲ್ಲಾಧಿಕಾರಿ ಕಂಟ್ರೋಲ್ ರೂಮ್ ನಿಂದ ಎಲ್ಲಾ ನಿರ್ದೆಶನಗಳನ್ನು ಪಾಲಿಸಲು ಅಗತ್ಯ ಕ್ರಮ ಕೈಗೊಳ್ಳುವುದು. ತೆಗೆದುಕೊಂಡ ಕ್ರಮದ ಬಗ್ಗೆ ಮಾಹಿತಿಯನ್ನು ೨೪*೭ ಕಂಟ್ರೋಲ್ ರೂಮ್‌ಗೆ ಅಧಿಕಾರಿಗಳು ಮಾಹಿತಿ ನೀಡಬೇಕು – ಸಿಂಧೂ ಬಿ ರೂಪೇಶ್, ಜಿಲ್ಲಾಧಿಕಾರಿಗಳು  ಅಧ್ಯಕ್ಷರು, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.