Home_Page_Advt
Home_Page_Advt
Home_Page_Advt

ಶಿಬಾಜೆ: ಸರ್ಕಾರಿ ರಕ್ಷಿತಾರಣ್ಯದ ಪ್ಲಾಂಟೇಶನ್ ಗಿಡಗಳ ಕಡಿದು ದುಷ್ಕೃತ್ಯ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಇಲ್ಲಿನ ವಲಯ ಅರಣ್ಯ ವ್ಯಾಪ್ತಿಯ ಶಿಬಾಜೆ ಗ್ರಾಮದ ಕುರುಂಬು ಎಂಬಲ್ಲಿರುವ ಮೀಸಲು ರಕ್ಷಿತಾರಣ್ಯದಲ್ಲಿ ವಿವಿಧ ಜಾತಿಯ ಹುಲುಸಾಗಿ ಬೆಳೆದು ನಿಂತಿದ್ದ ಸಾವಿರಾರು  ಗಿಡಗಳನ್ನು ಕಡಿದು ಹಾಕಲಾಗಿರುವ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ. ಅರಣ್ಯ ಇಲಾಖೆ ಮೀಸಲು ಅರಣ್ಯದೊಳಗೆ ೨ ವರ್ಷದ ಹಿಂದೆ ಬೆಲೆ ಬಾಳುವ ವಿವಿಧ ಜಾತಿಯ ನೆಡು ತೋಪುಗಳ ರೀಪ್ಲಾಂಟೇಶನ್ ನಡೆಸಿದ್ದು, ಸುಮಾರು ೨೫೦೦ ಮಿಕ್ಕಿ  ಗಿಡಗಳನ್ನು ನೆಡಲಾಗಿತ್ತು. ಗಿಡಗಳು ದಷ್ಟಪುಷ್ಟವಾಗಿ ಬೆಳೆದು ನಿಂತಿದ್ದು, ಈ ಪೈಕಿ ಸಾವಿರಕ್ಕೂ ಮಿಕ್ಕಿ ಗಿಡಗಳನ್ನು ಮೂರು ದಿನಗಳ ಹಿಂದೆ ಯಾರೋ ದುಷ್ಕರ್ಮಿಗಳು ಕಡಿದು ತುಂಡರಿಸಿದ್ದಾರೆ ಎಂಬ ದೂರು ವ್ಯಕ್ತವಾಗಿದೆ.

ಅರಣ್ಯದಲ್ಲಿರುವ ಬೆಲೆ ಬಾಳುವ ಮರಗಳನ್ನು ಮರಗಳ್ಳರು ಕದ್ದು ತುಂಡರಿಸಿ ಕೊಂಡೊಯ್ಯುತ್ತಿದ್ದ ಪ್ರಕರಣಗಳು ನಡೆಯುವುದು ಸಹಜ ಆದರೆ ಇದೀಗ ಲಾಕ್‌ಡೌನ್ ಸಮಯದಲ್ಲಿ ಸಣ್ಣ ಗಿಡಗಳನ್ನು ಬೆಳೆಯಲು ಬಿಡದೇ ಈ ರೀತಿ ನಾಶ ಪಡಿಸಲಾಗಿದ್ದು, ಇದರ ಹಿಂದಿರುವ ದುರುದ್ದೇಶವಾದರೂ ಏನು? ಎನ್ನುವ ಬಗ್ಗೆ ಸಾರ್ವಜನಿಕರಿಂದ ಪ್ರಶ್ನೆಗಳು ವ್ಯಕ್ತವಾಗಿದ್ದು, ಅರಣ್ಯ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಪತ್ತೆ ಮಾಡಿ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹ ವ್ಯಕ್ತವಾಗಿದೆ.

ಗಮನಕ್ಕೆ ಬಂದಿದ್ದು, ತನಿಖೆ ನಡೆಸುತ್ತಿದ್ದೇವೆ-ಆರ್.ಎಫ್.ಓ.
ಘಟನೆ ಗಮನಕ್ಕೆ ಬಂದಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ, ಸುಮಾರು ೫೩ ಗಿಡಗಳನ್ನು ತುಂಡು ಮಾಡಲಾಗಿದೆ. ಯಾರೋ ದುರುದ್ದೇಶದಿಂದ ಮಾಡಿರುವ ಕೃತ್ಯವಾಗಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂದನ್ ಪ್ರತಿಕ್ರಿಯಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.